ಅಡಿಕೆಗೆ ಹಳದಿ ಎಲೆಚುಕ್ಕಿ ರೋಗಕ್ಕೆ ‘ಬಯೋಶಮನ’ ಪರಿಹಾರ: ಬಾಲಸುಬ್ರಹ್ಮಣ್ಯ

ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗಾರರನ್ನು ತೀವ್ರವಾಗಿ ಕಾಡುತ್ತಿರುವ ಹಳದಿ ಎಲೆಚುಕ್ಕಿ ಹಾಗೂ ಕೊಳೆರೋಗಕ್ಕೆ ನೈಸರ್ಗಿಕ ತಂತ್ರಜ್ಞಾನ ಆಧಾರಿತ “ಬಯೋಶಮನ” ಔಷಧಿಯನ್ನು ಅಭಿವೃದ್ಧಿಪಡಿಸಿರುವುದಾಗಿ ಹೈಟೆಕ್ ದೋಟಿ ಹಾಗೂ ಇನಾಮಿಕ್ ಟೆಕ್ನಾಲಜಿಯ ಸಿಇಒ ಬಾಲಸುಬ್ರಹ್ಮಣ್ಯ ಎಚ್.ಎಂ. ತಿಳಿಸಿದ್ದಾರೆ.


ಇದನ್ನೂ ಓದಿ: ಆಸ್ತಿ ನೋಂದಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಆಸ್ತಿ ರಿಜಿಸ್ಟ್ರೇಷನ್ ಗೆ ಈ ದಾಖಲೆಗಳು ಕಡ್ಡಾಯ!


ಕಳೆದ ಆರು ವರ್ಷಗಳಿಂದ ಜೈವಿಕ ತಂತ್ರಜ್ಞಾನ ವಿಜ್ಞಾನಿಗಳ ಸಹಕಾರದೊಂದಿಗೆ ಸಂಶೋಧನೆ ನಡೆಸಿ ಈ ಔಷಧಿಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ. ತಮ್ಮ ತೋಟ ಸೇರಿದಂತೆ ನೂರಾರು ರೈತರ ತೋಟಗಳಲ್ಲಿ ಪರೀಕ್ಷಿಸಿದ ವೇಳೆ ಉತ್ತಮ ಫಲಿತಾಂಶ ದೊರೆತಿದೆ ಎಂದು ಅವರು ದಾವೆ ಮಾಡಿದ್ದಾರೆ.

ಸಿದ್ದಾಪುರ ತಾಲೂಕಿನ ಕ್ಯಾದಗಿಯಲ್ಲಿ ಸುಮಾರು 200 ಇಂಚು ಮಳೆ ಬಂದಿದ್ದರೂ, ಒಂದು ಬಾರಿ ಔಷಧಿ ಸಿಂಪಡಿಸಿದ ಬಳಿಕ ಮೂರು ತಿಂಗಳವರೆಗೆ ಕೊಳೆರೋಗ ನಿಯಂತ್ರಣದಲ್ಲಿತ್ತು ಹಾಗೂ ಎಲೆಚುಕ್ಕಿ ರೋಗ ಒಂದು ವರ್ಷ ಮರುಕಳಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಔಷಧಿಯನ್ನು ಕಾಫಿ, ಕಾಳುಮೆಣಸು ಸೇರಿದಂತೆ ಇತರೆ ತೋಟಗಾರಿಕಾ ಬೆಳೆಗಳಲ್ಲಿಯೂ ಬಳಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: 6 ರಾಶಿಗೆ ಪ್ರಗತಿಯ ಹಾದಿ ತೆರೆಯಲಿದೆ.. ಭರ್ಜರಿ ಲಕ್‌!

 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.