ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ತರುವೆ ಗ್ರಾಮ ಪಂಚಾಯಿತಿ ಹಾಗೂ ಅಂಗನವಾಡಿಯಲ್ಲಿ 2022 ರಲ್ಲಿ ಬೀಗ ಮುರಿದು ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬಣಕಲ್ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ಮೂಲದ ನಲ್ಕೆ ಗ್ರಾಮದ ಶರತ್ ಬಂಧಿತ ಆರೋಪಿ
ಇದನ್ನೂ ಓದಿ: ಬಿಪಿಎಲ್, ಅಂತ್ಯೋದಯ ಕಾರ್ಡ್’ದಾರರಿಗೆ ಇಲ್ಲಿದೆ ಗುಡ್ ನ್ಯೂಸ್; ಏನದು ತಿಳಿಯಿರಿ

ಎರಡು ವರ್ಷದ ಹಿಂದೆ ತರುವೆ ಗ್ರಾ.ಪಂ. ಬೀಗ ಮುರಿದು ಲ್ಯಾಪ್ ಟಾಪ್ ಕಳ್ಳತನ ಮಾಡಿ ಆರೋಪಿ ಪರಾರಿಯಾಗಿದ್ದ. ನಂತರ ಕಳಸದ ಹೆಮ್ಮಕ್ಕಿಯ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಯಾವುದೇ ಮೊಬೈಲ್ ಬಳಸುತ್ತಿರಲಿಲ್ಲ. ಇತ್ತೀಚೆಗೆ ಒಂದು ಸಿಮ್ ಖರೀದಿ ಮಾಡಿದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ; ಹೈಕೋರ್ಟ್ ಆದೇಶದಿಂದ ವಾಹನ ಸವಾರರು ನಿರಾಳ; ಏನಿದೆ ಹೈಕೋರ್ಟ್ ಆದೇಶ
ಈ ಕಾರ್ಯಾಚರಣೆಯಲ್ಲಿ ಬಣಕಲ್ ಸಬ್ ಇನ್ ಸ್ಪೆಕ್ಟರ್ ಕೌಶಿಕ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಚ್.ಸಿ.ರಮೇಶ್ ಕುಮಾರ್, ಸಚಿನ್, ಮೆಹಬೂಬ್, ಮಾಲತೇಶ್, ಚಾಲಕ ಅಶೋಕ್ ಭಾಗವಹಿಸಿದ್ದರು. (ವರದಿ- ತನು ಕೊಟ್ಟಿಗೆಹಾರ)
ಚಿಕ್ಕಮಗಳೂರು ಜಿಲ್ಲೆಯಲ್ಲಿ ಡೆಂಗ್ಯೂ ತಾಂಡವ: ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಡೆಂಗ್ಯೂ ತಾಂಡವವಾಡುತ್ತಿದ್ದು ಸುಮಾರು 350ಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ, ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
ಆದರೆ ಡೆಂಗ್ಯೂ ಜ್ವರಕ್ಕೆ ಕಾಫಿ ನಾಡು ಜನರು ತತ್ತರಿಸಿ ಹೋಗಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಜೆ ಜಾರ್ಜ್ ಅವರು ಜನರ ಬಳಿ ಸುಳಿದಿಲ್ಲ, ಜಿಲ್ಲೆಯಿಂದ ಸಂಪೂರ್ಣವಾಗಿ ನಾಪತ್ತೆಯಾಗಿದ್ದಾರೆ ಎಂದು ಎಂದು ಬಿಜೆಪಿ ಯುವಮೋರ್ಚಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹರಿಬಿಟ್ಟು ಅಭಿಯಾನ ಮಾಡುತ್ತಿದೆ.
ಜಾರ್ಜ್ ಸಾಹೇಬ, ಮರೆತು ಹೋಯ್ತಾ – ನೀವೇ ಚಿಕ್ಕಮಗಳೂರು ಉಸ್ತುವಾರಿ ಸಚಿವ ಎಂಬ ಸಂದೇಶದೊಂದಿಗೆ ಅಭಿಯಾನ ನಡೆಸಲಾಗುತ್ತಿದೆ.















