ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಂಕೆನಹಳ್ಳಿ ಹೋಗುವ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಪಕ್ಕದಲ್ಲಿರುವ ಒಣಗಿದ ಮರವೊಂದು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಬೀಳುವ ಅಪಾಯದ ಅಂಚಿನಲ್ಲಿದೆ.

ಇದನ್ನೂ ಓದಿ: 700 ರೂಪಾಯಿ ತಲುಪಿದ ಕಾಳುಮೆಣಸಿನ ಬೆಲೆ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ರೇಟ್ ಹೇಗಿದೆ?

ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ನೂರಾರು ವಾಹನಗಳು ಹಗಲು ರಾತ್ರಿ ಸಂಚರಿಸುತ್ತವೆ. ಮಳೆಗಾಲ ಪ್ರಾರಂಭವಾಗಿರುವುದರಿಂದ ಗಾಳಿ ಮಳೆ ಈ ಭಾಗದಲ್ಲಿ ಹೆಚ್ಚು ಇರುತ್ತದೆ. ಶಾಲಾ ಮಕ್ಕಳು, ಸಾರ್ವಜನಿಕರು ತಿರುಗಾಡುವ ರಸ್ತೆಯಾಗಿದೆ. ಗಾಳಿ-ಮಳೆ, ಗುಡುಗು ಸಹಿತ ಮಳೆ ಬಂದರೆ ಈ ಹಳೆಯ ಮರ ಬೀಳೋದು ಪಕ್ಕಾ. ಈ ಮರ ವಾಹನಗಳ ಮೇಲೆ, ಮನುಷ್ಯರ ಮೇಲೆ ಬಿದ್ದರೆ ಸಾವು ಗ್ಯಾರಂಟಿ.

ಇದನ್ನೂ ಓದಿ: ಈ ವಿದ್ಯಾರ್ಥಿಗಳಿಗೆ ಸಿಗಲಿದೆ ₹18,180 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಒಣ ಮರ ತೆರವುಗೊಳಿಸಬೇಕೆಂದು ಸ್ಥಳೀಯರಾದ ಬಂಕೆನಹಳ್ಳಿ ಸುಂದ್ರೇಶ್ ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ. (ವರದಿ- ತನು ಕೊಟ್ಟಿಗೆಹಾರ)
ಮೂಡಿಗೆರೆ: ಎರಡು ವರ್ಷದ ಹಿಂದೆ ಕಳವು ಮಾಡಿದ ಆರೋಪಿ ಬಂಧನ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ತರುವೆ ಗ್ರಾಮ ಪಂಚಾಯಿತಿ ಹಾಗೂ ಅಂಗನವಾಡಿಯಲ್ಲಿ 2022 ರಲ್ಲಿ ಬೀಗ ಮುರಿದು ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬಣಕಲ್ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ಮೂಲದ ನಲ್ಕೆ ಗ್ರಾಮದ ಶರತ್ ಬಂಧಿತ ಆರೋಪಿ
ಇದನ್ನೂ ಓದಿ: ಬಿಪಿಎಲ್, ಅಂತ್ಯೋದಯ ಕಾರ್ಡ್’ದಾರರಿಗೆ ಇಲ್ಲಿದೆ ಗುಡ್ ನ್ಯೂಸ್; ಏನದು ತಿಳಿಯಿರಿ
ಎರಡು ವರ್ಷದ ಹಿಂದೆ ತರುವೆ ಗ್ರಾ.ಪಂ. ಬೀಗ ಮುರಿದು ಲ್ಯಾಪ್ ಟಾಪ್ ಕಳ್ಳತನ ಮಾಡಿ ಆರೋಪಿ ಪರಾರಿಯಾಗಿದ್ದ. ನಂತರ ಕಳಸದ ಹೆಮ್ಮಕ್ಕಿಯ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಯಾವುದೇ ಮೊಬೈಲ್ ಬಳಸುತ್ತಿರಲಿಲ್ಲ. ಇತ್ತೀಚೆಗೆ ಒಂದು ಸಿಮ್ ಖರೀದಿ ಮಾಡಿದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ; ಹೈಕೋರ್ಟ್ ಆದೇಶದಿಂದ ವಾಹನ ಸವಾರರು ನಿರಾಳ; ಏನಿದೆ ಹೈಕೋರ್ಟ್ ಆದೇಶ
ಈ ಕಾರ್ಯಾಚರಣೆಯಲ್ಲಿ ಬಣಕಲ್ ಸಬ್ ಇನ್ ಸ್ಪೆಕ್ಟರ್ ಕೌಶಿಕ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಚ್.ಸಿ.ರಮೇಶ್ ಕುಮಾರ್, ಸಚಿನ್, ಮೆಹಬೂಬ್, ಮಾಲತೇಶ್, ಚಾಲಕ ಅಶೋಕ್ ಭಾಗವಹಿಸಿದ್ದರು.












