ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಮುಂಬೈ ಕಾರ್ಗರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೆಂದು ಹೇಳಿಕೊಂಡು ಬ್ಯಾಂಕ್ ಉದ್ಯೋಗಿ ಒಬ್ಬರಿಗೆ ಬರೋಬ್ಬರಿ 17 ಲಕ್ಷ ವಂಚಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ: ಬಿಪಿಎಲ್, ಅಂತ್ಯೋದಯ ಕಾರ್ಡ್’ದಾರರಿಗೆ ಇಲ್ಲಿದೆ ಗುಡ್ ನ್ಯೂಸ್; ಏನದು ತಿಳಿಯಿರಿ

ಏನಿದು ಘಟನೆ:
ಕೊಪ್ಪದ ಖಾಸಗಿ ಬ್ಯಾಂಕ್ ಉದ್ಯೋಗಿ ಒಬ್ಬರಿಗೆ ಇದೇ ತಿಂಗಳು 01-06-2024 ರಂದು ಅಪರಿಚಿತ ವ್ಯಕ್ತಿಯೊಬ್ಬ ಮುಂಬೈನ ಕಾರ್ಗರ್ ಪೊಲೀಸ್ ಠಾಣೆಯ ಪೊಲೀಸ್ ಎಂದು ಪರಿಚಯ ಮಾಡಿಕೊಂಡಿದ್ದಾರೆ.
ನಿಮ್ಮ ಮೊಬೈಲ್ ನಂಬರ್ ನಿಂದ ಬೇರೆಯವರಿಗೆ ಹರಾಸ್ಮೆಂಟ್ ಫೋನ್ ಕರೆ ಮಾಡಿ ತೊಂದರೆ ಮಾಡುತ್ತಿದ್ದು, ಹಾಗೂ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲವಾದ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದು, ಈ ವಿಚಾರವಾಗಿ ಕಾರ್ಗರ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ಮತ್ತು ಮುಂಬೈನ ಕೆನರಾ ಬ್ಯಾಂಕ್ ನಿಂದ ಕಾರ್ಗರ್ ಪೊಲೀಸ್ ಠಾಣೆಯಲ್ಲಿ ನಿಮ್ಮ ಹೆಸರಿನಲ್ಲಿ money landring ಬಗ್ಗೆ ಕೇಸ್ ಆಗಿದೆ ಎಂದು ನಂಬಿಸಿದ್ದಾರೆ.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ; ಹೈಕೋರ್ಟ್ ಆದೇಶದಿಂದ ವಾಹನ ಸವಾರರು ನಿರಾಳ; ಏನಿದೆ ಹೈಕೋರ್ಟ್ ಆದೇಶ
ನಂತರ ಅರೆಸ್ಟ್ ವಿಚಾರವಾಗಿ skype ಆಪ್ ಅನ್ನು ಡೌನ್ ಲೋಡ್ ಮಾಡಿ ವಿಡಿಯೋ ಕಾಲ್ ಮಾಡಿ ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆ ತೋರಿಸಿವಂತೆ ತಿಳಿಸುತ್ತಾರೆ. ಹಾಗೆಯೇ ಬ್ಯಾಂಕ್ ಉದ್ಯೋಗಿ skype ಆಪ್ ಅನ್ನ ಓಪನ್ ಮಾಡಿ ಅವರು ನೀಡಿರುವ ಯೂಸರ್ ಐಡಿಗೆ ಕರೆ ಮಾಡಿದ್ದಾರೆ. ವಿಚಾರಣೆ ನೆಪದಲ್ಲಿ ವಾಟ್ಸಾಪ್ ಗೆ ಕರೆ ಮಾಡಿ ಆಧಾರ್ ಕಾರ್ಡ್ ಕಳುಹಿಸುವಂತೆ ತಿಳಿಸಿದ್ದಾರೆ. ಹಾಗೆಯೇ ಸುಪ್ರೀಂ ಕೊರ್ಟ್ ನಿಂದ ಅರೆಸ್ಟ್ ವಾರೆಂಟ್ ಆಗಿದೆ ಎಂದು skype ಆಪ್ ಮೂಲಕ ಕೆಲವು ದಾಖಲೆಗಳನ್ನು ಕಳುಹಿಸಿ ಹೆದರಿಸಿದ್ದಾರೆ.
ಜೊತೆಗೆ ಅರೆಸ್ಟ್ ನಿಂದ ತಪ್ಪಿಸಿಕೊಳ್ಳಲು ಕೇಸ್ ಅನ್ನು ಖುಲಾಸೆಗೊಳಿಸಲು ಹಣ ಹಾಕುವಂತೆ ತಿಳಿಸಿದ್ದಾರೆ. ಇದನ್ನು ನಂಬಿದ ಬ್ಯಾಂಕ್ ಚೀಫ್ ಮ್ಯಾನೇಜರ್ ಹಂತ ಹಂತವಾಗಿ ಅಪರಿಚಿತ ಹೇಳಿದ ಬ್ಯಾಂಕ್ ಖಾತೆಗೆ ಒಟ್ಟು 17 ಲಕ್ಷವನ್ನು ಹಾಕಿದ್ದಾರೆ.
ಇದನ್ನೂ ಓದಿ: ಅರ್ಜುನನ ಸಾವಿನ ಬೆನ್ನಲ್ಲೇ ಮತ್ತೊಂದು ದಸರಾ ಆನೆ ಸಾವು
ವಂಚನೆ ಅರಿವಾಗುತ್ತಲೇ ಹಣ ಕಳೆದುಕೊಂಡಿರುವ ಬ್ಯಾಂಕ್ ಉದ್ಯೋಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.












