ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ನಿರ್ಮಿಸಿರುವ ಮುಸ್ಲಿಂ ಹಾಸ್ಟೆಲ್ ನಲ್ಲಿ ಗುಣ ಮಟ್ಟದ ಇಲ್ಲದ ಊಟ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಿದ್ದು, ಇದನ್ನು ಬಗೆಹರಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳವಂತೆ ವಿದ್ಯಾರ್ಥಿಗಳಿಂದ ಖ್ಫ್ ಮತ್ತು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಜಿಲ್ಲಾ ಡಿಸಿಸಿ ಬ್ಯಾಂಕ್ ನಲ್ಲಿ ಜಾಬ್ ಆಫರ್; ಆಕರ್ಷಕ ಸಂಬಳ, ಅರ್ಜಿ ಲಿಂಕ್ ಇಲ್ಲಿದೆ ನೋಡಿ

ಜಿಲ್ಲೆಯ ವಕ್ಫ್ ಬೋರ್ಡ್ ಅಡಿಯಲ್ಲಿ ಸ್ಥಳೀಯ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನಿರ್ಮಿಸಿರುವ ಮುಸ್ಲಿಂ ಹಾಸ್ಟೆಲ್ ನಲ್ಲಿ ಪೌಷ್ಟಿಕಾಂಶವಿಲ್ಲದ ಆಹಾರ, ಹಾಸ್ಟೆಲ್ ನಲ್ಲಿ ಸಿಬ್ಬಂದಿಗಳ ಕೊರತೆ, ಕುಡಿಯುವ ಸ್ವಚ್ಛ ನೀರಿನ ಸಮಸ್ಯೆ, ಶೌಚಾಲಯ ಮತ್ತು ಸ್ನಾನ ಗೃಹಗಳ ಸ್ವಚ್ಛತೆ ಮತ್ತು ನಿರ್ವಹಣೆ ವಿಚಾರವಾಗಿ ಸ್ಥಳೀಯ ವಖ್ಫ್ ಅಧಿಕಾರಿಗಳಿಗೆ ಅನೇಕ ದೂರುಗಳನ್ನು ನೀಡಿದರು ಕೂಡ ಇತ್ತ ಗಮನ ಹರಿಸಿಲ್ಲ ಎಂದು ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ದೂರಿದರು.

ಇದನ್ನೂ ಓದಿ: ಈ ಬಾರಿ 10th ಪರೀಕ್ಷೆಯಲ್ಲಿ ಹೊಸ ರೂಲ್ಸ್!; ವಿದ್ಯಾರ್ಥಿಗಳಿಗೆ ಈ ನಿಯಮ ಕಡ್ಡಾಯ ಅಂದ್ರು ಶಿಕ್ಷಣ ಸಚಿವ
ವಿದ್ಯಾರ್ಥಿಗಳಿಂದ ಹಣ ವಸೂಲಿ:
ಸುಮಾರು ಒಂದೂವರೆ ವರ್ಷಗಳಿಂದ ಮ್ಯಾನೇಜ್ಮೆಂಟ್ ಸಮಿತಿ ಇಲ್ಲದ ಕಾರಣ ಅಧಿಕಾರಿಗಳು ಮಾಡಿದ್ದೆ ದರ್ಬಾರ್ ಹಾಸ್ಟೆಲ್ ನಲ್ಲಿ ನಡೆಯುತ್ತಿದೆ. ವಾರ್ಡನ್ ವರ್ತನೆ ಸರಿ ಇಲ್ಲ ಬೇಕಾ ಬಿಟ್ಟೀಯಾಗಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲಾಗುತ್ತೆ. ಸರಿಯಾಗಿ ರಸೀದಿ ಗಳನ್ನು ನೀಡುವುದಿಲ್ಲ. ಮೊದಲು ವಾರ್ಡನ್ ಬದಲಾವಣೆಯಾಗಬೇಕೆಂದು ವಿದ್ಯಾರ್ಥಿಯೊರ್ವ ತಿಳಿಸಿದರು.
ಇನ್ನು ಮನವಿ ಸ್ವೀಕರಿಸಿದ ಸಚಿವರು ಆದಷ್ಟು ಬೇಗ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಪಂಪ್ಸೆಟ್ ಅಳವಡಿಕೆಗೆ ಸರ್ಕಾರದಿಂದ ಸಿಗಲಿದೆ ಶೇ.80% ರಷ್ಟು ಸಹಾಯಧನ!; ಈ ರೀತಿ ಅರ್ಜಿ ಸಲ್ಲಿಸಿ ಪಡೆಯಿರಿ













