ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಹಂದಿ ಶಿಕಾರಿ ಮಾಡಲು ಇಟ್ಟಿದ್ದ ವಸ್ತು ಸಿಡಿದು ಮಹಿಳೆಯೊಬ್ಬರ ಐದು ಕೈ ಬೆರಳುಗಳು ಸಂಪೂರ್ಣ ತುಂಡಾಗಿರುವ ಘಟನೆ ನೆಂಟೂರಿನಲ್ಲಿ ನಡೆದಿದೆ. ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಪಂ ವ್ಯಾಪ್ತಿಯ ನೆಂಟೂರಿನ ಕಮಲಮ್ಮ (72 ) ಗಾಯಗೊಂಡ ಮಹಿಳೆ.
ಇದನ್ನೂ ಓದಿ: ಆಸ್ತಿ ನೋಂದಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಆಸ್ತಿ ರಿಜಿಸ್ಟ್ರೇಷನ್ ಗೆ ಈ ದಾಖಲೆಗಳು ಕಡ್ಡಾಯ!

ತೋಟದಲ್ಲಿ ಹಂದಿ ಶಿಕಾರಿ ಮಾಡಲು ಗೋಟು ಅಡಿಕೆ ಒಳಗೆ ಕಚ್ಚಾ ಬಾಂಬ್ ಇಡಲಾಗಿತ್ತು. ಅದನ್ನು ನಾಯಿ ಕಚ್ಚಿಕೊಂಡು ಮನೆಯ ಅಂಗಳಕ್ಕೆ ತಂದಿದೆ. ಅದನ್ನು ಕಮಲಮ್ಮ ಮುಟ್ಟಿದಾಗ ಏಕಾಏಕಿ ಸಿಡಿದಿದ್ದು ಕೈ ಐದು ಬೆರಳುಗಳು ತುಂಡಾಗಿವೆ. ಕಾಲಿಗೆ ಗಾಯವಾಗಿದೆ.
ಆಗುಂಬೆ ಠಾಣೆ ಪಿಎಸ್ ಐ ಶಿವನಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: 6 ರಾಶಿಗೆ ಪ್ರಗತಿಯ ಹಾದಿ ತೆರೆಯಲಿದೆ.. ಭರ್ಜರಿ ಲಕ್!












