ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕೊಪ್ಪದ ಸಂತ ಸಿಸಿಲಿಯಾ ಸಂಗೀತ ಶಾಲೆಯ ವಿದ್ಯಾರ್ಥಿಗಳು ಟ್ರಿನಿಟಿ ಕಾಲೇಜ್ ಲಂಡನ್ ನಡೆಸಿದ ಮ್ಯೂಸಿಕ್ ಥಿಯರಿ (Music Theory) ಪರೀಕ್ಷೆ–2026ರಲ್ಲಿ ಶೇ.100 ಫಲಿತಾಂಶ ದಾಖಲಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಪರೀಕ್ಷೆಯಲ್ಲಿ ಧನ್ವಿ ಜಿ. 81 ಅಂಕಗಳನ್ನು ಪಡೆದು ಪ್ರಥಮ ಮೆರಿಟ್ ಗಳಿಸಿದ್ದು, ಸ್ಮಯಾ ಎಂ. ಕಾಂತ್ 75 ಅಂಕಗಳೊಂದಿಗೆ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವಿನಾಯಕ ಎನ್. ಹಾಗೂ ಭವ್ಯ ಕೀರ್ತಿ ಜಿ. ತಲಾ 67 ಅಂಕಗಳನ್ನು ಗಳಿಸಿ ಮೆರಿಟ್ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದ ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.
ವರದಿ: ಎಂ.ಪಿ. ಪ್ರದೀಪ್ ಹೆಬ್ಬಾರ್, ಜಯಪುರ












