ಮಡಿಕೇರಿ: (ನ್ಯೂಸ್ ಮಲ್ನಾಡ್ ವರದಿ) ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಸಿಕ್ಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ತಮಿಳುನಾಡು ಮೂಲಕ ಮಹಿಳೆ ಜಿನ್ಶು ಮೃತ ದುರ್ದೈವಿ.
ಕಾದಾಟದ ವೇಳೆ ಅಯತಪ್ಪಿ ಅವರು ಬಿದ್ದಿದ್ದರು. ಅವರ ಮೇಲೆ ಸಾಕಾನೆಗಳು ತುಳಿದು ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಅವರನ್ನು ರಕ್ಷಣೆ ಮಾಡಲು ಪತಿ ಪ್ರಯತ್ನ ನಡೆಸಿದ್ದರು. ಆದರೆ ಕಾದಾಟದ ನಡುವೆ ದಿಟ್ಟತನ ತೋರಿಸಿದ ತಂದೆ ಮಗುವನ್ನು ರಕ್ಷಣೆ ಮಾಡಿದ್ದಾರೆ.

ದುಬಾರೆ ಪ್ರವಾಸಕ್ಕೆ ಬಂದಿದ್ದ ಚೆನೈ ಮೂಲಕ ಕುಟುಂಬ:
ಸಾಮಾನ್ಯವಾಗಿ ಸಾಕಾನೆಗಳ ನೀರಾಟ ವೀಕ್ಷಿಸಲು ಅವಕಾಶ ಕೊಡಲಾಗುತ್ತದೆ. ಆದರೆ ಇದೇ ಸಂದರ್ಭದಲ್ಲಿ ಸಾಕಾನೆಗಳ ನಡುವೆ ಕಾಳಗ ನಡೆದಿದೆ. ಒಂದು ಆನೆಯನ್ನು ದಂತದಿಂದ ಮತ್ತೊಂದು ಸಾಕಾನೆ ತಿವಿದು ಹಾಕಿದೆ. ಈ ವೇಳೆ ನಡುವೆ ಸಿಕ್ಕಿ ಹಾಕಿಕೊಂಡ ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಜಿನ್ಶು ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾದರೆ ಅವರು ಮೃತಪಟ್ಟಿದ್ದಾರೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
















