ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಯವರ 50ನೇ ವರ್ಷದ ಸನ್ಯಾಸ ಸ್ವೀಕಾರ ಮಹೋತ್ಸವ ಪ್ರಯುಕ್ತ ಸಾಮೂಹಿಕವಾಗಿ ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರ ಪಠಣ ಹಾಗೂ ಶಿವ ಮತ್ತು ರಾಮ ಜಪ ಲೇಖನವನ್ನು ಶುಕ್ರವಾರ ತಾಲೂಕಿನ ಹೆಗ್ಗದ್ದೆಯ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಕಾರ್ತಿಕ ದೀಪೋತ್ಸವದಲ್ಲಿ ನಡೆಯಿತು.

ಇದನ್ನೂ ಓದಿ; ಗ್ರಾಪಂ ನೌಕರರ ಗಮನಕ್ಕೆ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ!

ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರ ಆದೇಶದ ಮೇರೆಗೆ ನಾಡಿನಾದ್ಯಂತ ಕಲ್ಯಾಣ ವೃಷ್ಟಿ ಸ್ತವ ಹಾಗೂ ಶ್ರೀ ಹರಿ ಹರ ನಾಮಾಮೃತ ಜಪ ಲೇಖನ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ; ಸಾಲ ಇದ್ದವರಿಗೆ ಬಿಗ್ ರಿಲೀಫ್; ಲೋನ್ EMI ಕಟ್ಟುವರಿಗೆ ಹೊಸ ರೂಲ್ಸ್ ಜಾರಿ
ಇದರ ಅಂಗವಾಗಿ ಶುಕ್ರವಾರ ಶ್ರೀ ಅನಂತ ಪದ್ಮನಾಭ ಸೇವಾ ಸಮಿತಿಯ ಶ್ರೀ ಶಿವಾನಂದ ರಾವ್ ಹೆಗ್ಗದ್ದೆ ಇವರ ನೇತ್ರತ್ವದಲ್ಲಿ ಸಾಮೂಹಿಕವಾಗಿ ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರ ಪಠಣ ಹಾಗೂ ಶಿವ ಮತ್ತು ರಾಮ ಜಪ ಲೇಖನವನ್ನು ಅತ್ಯಂತ ಶ್ರದ್ಧ ಭಕ್ತಿಯಿಂದ ನಡೆಸಲಾಯಿತು.

ಇದನ್ನೂ ಓದಿ; ಬ್ಯಾಂಕ್ ನಲ್ಲಿ ಸಾಲ ಮಾಡಿರುವವರಿಗೆ ಸಿಹಿಸುದ್ದಿ; ಕೇಂದ್ರ ಹಣಕಾಸು ಸಚಿವೆಯಿಂದ ಮಹತ್ವದ ಸೂಚನೆ












