ಚಿಕ್ಕಮಗಳೂರು: ಕಾಲು ಜಾರಿ ನದಿಗೆ ಬಿದ್ದು ಯುವಕ ಸಾವು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಲು ಜಾರಿ ನದಿಗೆ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ. ನೆಲ್ಲಿಬೀಡು ಗ್ರಾಮದ ರವಿ ಎಂಬವರ ಪುತ್ರ ಪೃಥ್ವಿರಾಜ್ (17) ಮೃತಪಟ್ಟ ಯುವಕ.

 

ಇದನ್ನೂ ಓದಿ; ಚಾಕ್ ಪೀಸ್ ನಲ್ಲಿ ಯುವಕನ ಕೈಚಳಕ; ರಾಮ ಮಂದಿರ ಕಲಾಕೃತಿ ನಿರ್ಮಾಣ

ಶುಕ್ರವಾರ ಮಧ್ಯಾಹ್ನ ವೇಳೆ ಮನೆಯ ಸಮೀಪದಲ್ಲೇ ಹರಿಯುವ ಭದ್ರಾ ನದಿ ದಡದಲ್ಲಿರುವ ಕಾಡಿನಿಂದ ಸೌದೆ ತರಲು ಕಾಡಿಗೆ ಹೋಗಿದ್ದ. ನದಿ ದಡದಲ್ಲಿ ನಡೆದು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಭದ್ರಾ ನದಿಗೆ ಬಿದ್ದಿದ್ದಾನೆ. ಈಜಲು ಬಾರದ ಪೃಥ್ವಿರಾಜ್ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ; ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ; ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ

ಮನೆಗೆ ವಾಪಾಸ್ ಬಾರದ ಕಾರಣ ಅನುಮಾನಗೊಂಡ ಕುಟುಂಬಸ್ಥರು ಮನೆ ಸಮೀಪದ ಕಾಡು, ನದಿ ತೀರದಲ್ಲಿ ಹುಡುಕಾಡಿದಾಗ ಪೃಥ್ವಿರಾಜ್ ಭದ್ರಾ ನದಿಗೆ ಕಾಲು ಜಾರಿ ಬಿದ್ದಿರುವುದು ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಹಾಗೂ ಕುದುರೆಮುಖ ಪೊಲೀಸರು ಯುವಕನಿಗಾಗಿ ನದಿಯಲ್ಲಿ ಶೋಧ ನಡೆಸಿದ ವೇಳೆ ಯುವಕನ ಮೃತ ದೇಹ ನದಿಯಲ್ಲಿ ಪತ್ತೆಯಾಗಿದೆ. ಕಳಸ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದ್ದು, ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಶೃಂಗೇರಿ ಜಗದ್ಗುರುಗಳು ಬದಲು ಆಡಳಿತಾಧಿಕಾರಿ ಭಾಗಿ

ಶೃಂಗೇರಿ:  (ನ್ಯೂಸ್ ಮಲ್ನಾಡ್ ವರದಿ) ಅಯೋಧ್ಯೆ ಶ್ರೀರಾಮ ಮಂದಿಯರದಲ್ಲಿ ರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ಕೆ ಶೃಂಗೇರಿ ಜಗದ್ಗುರುಗಳು ಗೈರಾಗಾಲಿದ್ದು, ಮಠದ ಪ್ರತಿನಿಧಿ ಭಾಗಿಯಾಗಲಿದ್ದಾರೆ ಎಂದು ಶೃಂಗೇರಿ ಮಠದ ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ.

 

ಹಿರಿಯ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಹಾಗೂ ರಾಮ ಮಂದಿರ ಟ್ರಸ್ಟ್ ನ ಸದಸ್ಯರು ಆಗಿರುವ ಕಿರಿಯ ಜಗದ್ಗುರು ವಿಧುಶೇಖರ ಭಾರತೀತೀರ್ಥ ಸ್ವಾಮೀಜಿಗಳು ರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ಕೆ ಗೈರಾಗಾಲಿದ್ದು, ಶೃಂಗೇರಿ ಮಠದ ಆಡಳಿತಾಧಿಕಾರಿ ಗೌರಿಶಂಕರ್ ಅಯೋಧ್ಯೆಗೆ ತೆರಳಲಿದ್ದಾರೆ.

ಇದನ್ನೂ ಓದಿ; ರೈತರೇ ಗಮನಿಸಿ; PM KISAN ನೋಂದಣಿ ಸಂಖ್ಯೆ ಮರೆತಿದ್ರೆ ಜಸ್ಟ್ ಹೀಗೆ ತಿಳಿಯಿರಿ

ಸುಳ್ಳು, ಅಪಪ್ರಚಾರಕ್ಕೆ ಕಿವಿಕೊಡದಂತೆ ಕರೆ:
ಇನ್ನು ಅಯೋಧ್ಯೆ ರಾಮ ಮಂದಿರ ಕಾರ್ಯದಲ್ಲಿ ಶೃಂಗೇರಿ ಜಗದ್ಗುರುಗಳು ಭಾಗಿಯಾಗಲಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಸುಳ್ಳು ಸುದ್ದಿ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸಬಾರದು. ಅಯೋಧ್ಯೆಗೂ ಶೃಂಗೇರಿಗೂ ಅವಿನಾಭಾವ ಸಂಬಂಧವಿದೆ. ಸುಳ್ಳು, ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ ಎಂದರು.

ರಾಮಭುಜಂಗ ಸ್ತೋತ್ರ ಪಠಣ:
ಭಗವಾನ್ ಶ್ರೀರಾಮನ ರಾಮಭುಜಂಗ ಸ್ತೋತ್ರ ಪಠಣ ಮಾಡುವಂತೆ ಕಿರಿಯ ಶ್ರೀಗಳು ನೀಡಿದ್ದು, ಕರೆ ಶಂಕರಾಚಾರ್ಯರು ಪಠಣ ಮಾಡಿರುವ ರಾಮನ ಶ್ಲೋಕದಲ್ಲಿ ಅದ್ಭುತ ಅರ್ಥವಿದೆ. ಕಳೆದ ದೀಪಾವಳಿಯಲ್ಲೇ ರಾಮ ಜಪ ಮಾಡಲು ಹೇಳಿದ್ದೇವೆ. ನಾಸ್ತಿಕರು ಕೂಡ ರಾಮಜಪ ಮಾಡುತ್ತಿದ್ದಾರೆ ಎಂದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.