ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ 50ನೇ ಸನ್ಯಾಸ ಸ್ವೀಕಾರ ವಜ್ರಮಹೋತ್ಸವದ ಅಂಗವಾಗಿ ಕಾರ್ಮಿಕ ಮಿತ್ರ ಬಳಗ(ರಿ), ಶೃಂಗೇರಿ ಇವರ ವತಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್ ಪರಿಕರಗಳ ವಿತರಣೆ ಕಾರ್ಯಕ್ರಮವನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಮ್ಮಾರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಮುದ್ರಾ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ

ಹಾಗೂ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ 50ನೇ ಸನ್ಯಾಸ ಸ್ವೀಕಾರ ವಜ್ರಮಹೋತ್ಸವದ ಅಂಗವಾಗಿ ಶ್ರೀ ಮಠದ ವತಿಯಿಂದ ಶಾಲೆಯ ರಂಗಮಂದಿರ ದುರಸ್ತಿಗೆ 1,45,000ರೂಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀಮಠದ ಮಹಾಸನ್ನಿದಾನಂಗಳವರ ಆಪ್ತ ಸಹಾಯಕರ ಶಂ.ನ ಕೃಷ್ಣಮೂರ್ತಿ, ರಮೇಶ್ ಶೂನ್ಯ ಸುಬ್ರಹ್ಮಣ್ಯ ಹೆಚ್ ಎಸ್ , ರಮೇಶ್ ಎಂ , ಗ್ರೇಬಿಯಲ್ ಡಿಸೋಜ , ವಿಶ್ವಾಸ್ ಜಿ , ಜನಾರ್ದನ ಮಂಡಗಾರ , ಮುಖ್ಯ ಶಿಕ್ಷಕಿ ಆಶ್ವೀನಿ, ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು
ಇದನ್ನೂ ಓದಿ: PUC ಪಾಸ್ ಆದ ವಿದ್ಯಾರ್ಥಿಗಳಿಗೆ 40,000 ಸ್ಕಾಲರ್ ಶಿಪ್; ನೇರ ನಿಮ್ಮ ಖಾತೆಗೆ ಜಮಾ!












