ಶೃಂಗೇರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದ ಗ್ರಾಮಸ್ಥರು

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದುರೇ ಮುಖ ರಾಷ್ಟ್ರೀಯ ಉದ್ಯಾನ ಗ್ರಾಮಸ್ಥರು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಿದರು.


ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?


ಮನವಿ ಪತ್ರದಲ್ಲಿ ಏನಿದೆ?:
ಕುದುರೇಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿ ಒಳಗೆ ಬರುವ ಕುಟುಂಬಗಳಿಗೆ ವೈಜ್ಞಾನಿಕವಾಗಿ ಸ್ಥಿರ ಮತ್ತು ಚರಾಸ್ಥಿಗಳಿಗೆ ತುರ್ತಾಗಿ ಮೌಲ್ಯ ಮಾಪನ ಮಾಡಿಸಿ ಮೌಲ್ಯ ನಿರ್ಧರಿಸಿ ಪುನರ್ವಸತಿ ಸೌಲಭ್ಯ ಒದಗಿಸಿಕೊಡುವುದು. ಇದಕ್ಕಾಗಿಯೇ ಒಂದು ಪ್ರತ್ಯೇಕ ವಿಶೇಷ ತಂಡ (ಸೆಲ್) ಅನ್ನು ಸ್ಥಾಪಿಸುವುದು, ಹಾಗೂ ಈ ಪರಿಹಾರಕ್ಕೆ ಅಗತ್ಯವಾದ ಅನುದಾನವನ್ನು ಒದಗಿಸುವುದು.

ಈ ವ್ಯಾಪ್ತಿ ಒಳಗೆ ಬರುವ ಪ್ರದೇಶಗಳಲ್ಲಿ ನೂರಾರು ವರ್ಷಗಳಿಂದ ವಾಸಿಸಿಕೊಂಡು ಬಂದಿರುವ ಅನೇಕ ಕುಟುಂಬಗಳು ಮಾಡಿರುವ ಕೃಷಿ ಜಮೀನು ಮತ್ತು ನಿರ್ಮಿಸಿಕೊಂಡಿರುವ ಮನೆಗಳಿಗೆ ಯಾವುದೇ ಸೂಕ್ತ ಅಧಿಕೃತ ದಾಖಲಾತಿಗಳು ಇರುವುದಿಲ್ಲ. ಆ ಕುಟುಂಬಗಳಿಗೂ ಅವರು ಮಾಡಿರುವ ಕೃಷಿ ಮತ್ತು ನಿರ್ಮಿಸಿಕೊಂಡಿರುವ ವಸತಿ ಮನೆಗಳಿಗೆ ವೈಜ್ಞಾನಿಕ ಮೌಲ್ಯಮಾಪನ ಮಾಡಿಸಿ ಸೂಕ್ತ ಪರಿಹಾರ ನೀಡಬೇಕೆಂದು ಮತ್ತು ಅಲ್ಲಿ ನಿರ್ಮಿಸಿರುವ ಮನೆ ಮತ್ತು ತೋಟಗಳು ಅರಣ್ಯ ಇಲಾಖೆಯ ಸರ್ವೇ ಸಂದರ್ಭದಲ್ಲಿ “ಡಿ” ಲೈನ್ ಗೆ ಬರುತ್ತದೆ ಎಂದು ಮೌಲ್ಯಮಾಪನ ಮಾಡದೇ ಬಿಟ್ಟಿರುತ್ತಾರೆ. ಅಂಥಹವುಗಳನ್ನು ಮೌಲ್ಯಮಾಪನ ಮಾಡಿ ಸೂಕ್ತ ಪರಿಹಾರವನ್ನು ನೀಡಬೇಕು.


ಇದನ್ನೂ ಓದಿ; ಮತ್ತೆ APL-BPL ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ; ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ..!


ತೋಟಗಾರಿಕೆ ಇಲಾಖೆಯವರು ಮೌಲ್ಯಮಾಪನ ಮಾಡಿದ ಸಂದರ್ಭದಲ್ಲಿ ತಾರತಮ್ಯ ಎಸಗುತ್ತಿರುವುದನ್ನು ಸರಿಪಡಿಸಬೇಕು. ಕುದುರೇಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯೊಳಗೆ ಬರುವ ಜನವಸತಿ ಪ್ರದೇಶಗಳಿಗೆ ಪುನರ್ ವಸತಿ ಪರಿಹಾರ ನೀಡುವವರೆಗೆ ಕನಿಷ್ಠ ಜೀವನಾವಶ್ಯಕ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದು.

ಈ ಹಿಂದೆ ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಮನೆ ನಿರ್ಮಿಸಿ ವಾಸಿಸುವವರು ಗ್ರಾಮ ಪಂಚಾಯಿತಿಯಲ್ಲಿ ಕಂದಾಯ ಹೊಂದಿರುವ ಬಗ್ಗೆ ಪಂಚಾಯಿತಿಯಿಂದ ದೃಡಿಕರಣ ಮತ್ತು ದೃಢೀಕೃತ ಚಕ್ಕುಬಂದಿ ಲಗತ್ತಿಸಿದರೇ ಅಂತವರ ಮೌಲ್ಯ ಮಾಪನ ಮಾಡಿ ಪರಿಹಾರ ನೀಡುತಿದ್ದರು. ಈಗ ಅದನ್ನೇ ಕಡ್ಡಾಯವಾಗಿ ಈ ಸ್ವತ್ತು ಇದ್ದರೇ ಮಾತ್ರ ಪರಿಹಾರ ಎಂದು ತಿದ್ದುಪಡಿ ಮಾಡಿರುತ್ತಾರೆ. ಆದರೇ ಅಲ್ಲಿಯ ಶೇಕಡ 99% ಜನರಿಗೆ ಮನೆ ಕಂದಾಯ ಮಾತ್ರ ಹೊಂದಿರುತ್ತಾರೆ ಅದ್ದರಿಂದ ಕಂದಾಯ ಹೊಂದಿದವರಿಗೆ ಹಕ್ಕು ಪತ್ರವಿಲ್ಲದೆ ಈ ಸ್ವತ್ತು ಮಾಡಲು ಸಾದ್ಯವಿಲ್ಲ. ಹಕ್ಕು ಪತ್ರ ಪಡೆಯಲು ಅರ್ಚಿ ಸಲ್ಲಿಸಿದರೆ ಕುದುರೇಮುಖ ರಾಷ್ಟ್ರೀಯ ಉದ್ಯಾನವನ ಕಾರಣ ನೀಡಿ ರದ್ದುಗೊಳಿಸುತ್ತಾರೆ. ಇದರಿಂದ ಯಾರಿಗೂ ಪರಿಹಾರ ಪಡೆಯಲು ಸಾಧ್ಯವಿಲ್ಲ. ಅದನ್ನು ತಿದ್ದುಪಡಿಗೊಳಿಸಿ ಮುಂಚೆ ಕಂದಾಯ ದೃಢೀಕರಣದ ಮೇಲೆ ನೊಂದಾವಣೆ ಮಾಡಿಕೊಂಡು ಪರಿಹಾರ ನೀಡುತ್ತಿದ್ದ ರೀತಿಯಲ್ಲಿ ಸರ್ಕಾರದಿಂದ ತಿದ್ದುಪಡಿ ಮಾಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು.


ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಬಾಕಿ ಹಣ ಒಂದೇ ಬಾರಿ ಜಮಾ; ಯಾವಾಗ? ಲಕ್ಷ್ಮೀ ಹೆಬ್ಬಾಳ್ಕರ್‌ ಏನಂದ್ರು?


ಶೃಂಗೇರಿ ತಾಲೂಕಿನ ಅನೇಕ ಕುಟುಂಬಗಳು ಆಸ್ತಿಯ ವ್ಯಾಲ್ಯೂವೇಷನ್ ಮಾಡಿ ಏಳೆಂಟು ವರ್ಷಗಳು ಕಳೆದರೂ ಪುನರ್ ವಸತಿಯ ಪರಿಹಾರದ ಹಣ ನೀಡಿರುವುದಿಲ್ಲ. ಹಾಗೆಯೇ ಇನ್ನು ಹಲವಾರು ಕುಟುಂಬಗಳು ಪುನರ್‌ ವಸತಿ ಮೌಲ್ಯಮಾಪನ ಕಾರ್ಯವನ್ನು ಮಾಡುತ್ತಿಲ್ಲ. ಮಾಡಿದರೂ ಸಹಾ ಆಮೆ ನಡಿಗೆಯ ಗತಿಯಲ್ಲಿ ಸಾಗುತ್ತಿದೆ.

ಇತ್ತೀಚೆಗೆ ಜಮೀನು ಮತ್ತು ಮನೆಗಳು ಒಟ್ಟಾಗಿ ಸರ್ವೇ ಕಾರ್ಯ ಮತ್ತು ಮೌಲ್ಯಮಾಪನ ಕಾರ್ಯವನ್ನು ಲೋಕೋಪಯೋಗಿ ಮೌಲ್ಯಮಾಪನ ಕಾರ್ಯವನ್ನು ವಾರದ ಒಂದು ದಿನ ಮಾಡುತ್ತಾರೆ. ಒಂದು ದಿನದಲ್ಲಿ ಹೆಚ್ಚೆಂದರೆ ಒಂದು ಮಾಡಬಹುದಾಗಿದೆ.

ಈ ರಾಷ್ಟ್ರೀಯ ಉದ್ಯಾನದ ಕುಟುಂಬಗಳು 120 ಮನೆಗಳು ಇದ್ದು, ವಾರಕ್ಕೆ ಒಂದು ಅನ್ನುವ ಹಾಗೆ ಮಾಡಿದರೆ 1200 ವಾರಗಳು ಬೇಕಾಗುತ್ತದೆ. ಹವಮಾನ ವೈಪರೀತ್ಯದಿಂದ ಅಡಿಕೆ ರೋಗಗಳು ಬರುತ್ತಿದೆ. ವ್ಯಾಲ್ಯೂವೇಷನ್ ಮಾಡಿ ಅಲ್ಪ ಹಣವನ್ನು ನೀಡಿದರೆ ಬೇರೆಡೆ ಜೀವನ ಸಾಗಿಸಬಹುದು ಹೇಗೆ? ಆದ್ದರಿಂದ ತುರ್ತಾಗಿ ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯೊಳಗೆ ಬರುವ ಪ್ರದೇಶಗಳ ಮೌಲ್ಯಮಾಪನಕ್ಕೆ ಪ್ರತ್ಯೇಕ ವಿಶೇಷ ತಂಡವನ್ನು ರಚಿಸಿ ಮೌಲ್ಯಮಾಪನ ಮಾಡಿಸಿ ಸೂಕ್ತ ಪರಿಹಾರ ಒದಗಿಸಿಕೊಡಬೇಕು.


ಇದನ್ನೂ ಓದಿ; ಹೋಮ್‌ ಲೋನ್‌ ಪಡೆದವರು ಓದಲೇಬೇಕಾದ ಸುದ್ದಿ; ಈ ಕೆಲ್ಸ ಮಾಡೋದು ಮರಿಬೇಡಿ, ಇಲ್ಲದಿದ್ರೆ ಸಮಸ್ಯೆಯಾಗುತ್ತೆ!


ಅನೇಕ ಕಟುಂಬಗಳು ಮಾಡಿರುವ ಕೃಷಿ ಜಮೀನು ಮತ್ತು ನಿರ್ಮಿಸಿಕೊಂಡಿರುವ ಮನೆಗಳಿಗೆ ಯಾವುದೇ ಸೂಕ್ತ ಅಧಿಕೃತ ದಾಖಲೆಗಳು ಇರುವುದಿಲ್ಲ. ಇವರು ಫಾರ್ಮ್ ನಂ 53.57 ಮತ್ತು ಅರಣ್ಯ ಹಕ್ಕು ಪತ್ರದಡಿ 94 ಸಿ. 94 ಸಿಸಿ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿರುವ ಹಾಗೂ ಅರ್ಜಿಯನ್ನು ಇಲ್ಲಿಯವರೆಗೆ ಸಲ್ಲಿಸದೇ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ವಾಸಿಸುತ್ತಿರುವ ಕುಟುಂಬಗಳಿಗೆ ಅವರು ಮಾಡಿರುವ ಕೃಷಿ ಮತ್ತು ನಿರ್ಮಿಸಿಕೊಂಡಿರುವ ವಸತಿ ಮನೆಗಳಿಗೆ ವೈಜ್ಞಾನಿಕ ಮೌಲ್ಯಮಾಪನ ಮಾಡಿಸಿ ಸೂಕ್ತ ಪರಿಹಾರ ನೀಡಬೇಕು.

ಹಾಗೆಯೇ ಅರಣ್ಯ ಇಲಾಖೆಯವರು ಸೂಚಿಸಿರುವಂತಹ “ಡಿ” ಲೈನ್ ನಮ್ಮ ಪೂರ್ವಜರು ನಿರ್ಮಿಸಿರುವ ಮನೆ ಮತ್ತು ಮಾಡಿರುವ ತೋಟಗಳು ನಮಗೆ ಅದರ ಬಗ್ಗೆ ಮಾಹಿತಿ ಇರುವುದಿಲ್ಲ. ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿಗೆ ಮನವಿ ಸಲ್ಲಿಸಿದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.