ಶೃಂಗೇರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಹಶೀಲ್ದಾರ್ ಗೆ ಮನವಿ ಸಲ್ಲಿಕೆ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಈ ಹಿಂದೆ ಸುಮಾರು 8 ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಿ ಒಂದು ದಿನದ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ಬೇಡಿಕೆಗಳ ಬಗ್ಗೆ ಯಾವುದೇ ಸ್ವಂದನೆ ತಾಲೂಕು ಆಡಳಿತದಿಂದ ಸಿಗದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಗೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ.


ಇದನ್ನೂ ಓದಿ: SSLC ಪಾಸ್ ಆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ತಿಂಗಳಿಗೆ ಸಿಗಲಿದೆ 3,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಮನವಿ ಪತ್ರದಲ್ಲಿ ಏನಿದೆ?:
* ಈ ಹಿಂದೆ ನೀಡಿರುವ 8 ಬೇಡಿಕೆಗಳನ್ನು ಅನುಷ್ಠಾನಕ್ಕೆ ತರಲು ಕ್ರಮವಹಿಸಬೇಕು.
* ಶೃಂಗೇರಿ ತಾಲ್ಲೂಕು ಒಟ್ಟು 600 ಕ್ಕೂ ಹೆಚ್ಚು ನಿವೇಶನ ರಹಿತರು ನಿವೇಶಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದು, ಯಾರಿಗೂ ಸಹ ಕಳೆದ 5 ವರ್ಷಗಳಿಂದ ನಿವೇಶನದ ದಾಖಲೆ ಸಿಗದೇ ಸರ್ಕಾರದ ಯೋಜನೆಗಳಿಂದ ವಂಚಿತರಾಗುವಂತೆ ಆಗಿದ್ದು, ಕೂಡಲೇ ಈ ಬಗ್ಗೆ ಕ್ರಮವಹಿಸಬೇಕು.
* ಈಗಾಗಲೇ ಹಲವಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿದ್ದು, ಸರ್ಕಾರಕ್ಕೆ ಕಂದಾಯ, ವಿದ್ಯುತ್ ಬಿಲ್ ಪಾವತಿ ಮಾಡುತ್ತಿರುವ ಫಲಾನುಭವಿಗಳ ಅಸೆಸ್ ಮೆಂಟ್ ದಾಖಲೆ ಪಡೆದು ಅವರಿಗೆ 11(ಬಿ) ವಿತರಿಸಿ ಅವುಗಳನ್ನು ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಇದ್ದಂತೆ ಸರ್ಕಾರಕ್ಕೆ ನೊಂದಾಯಿಸಿಕೊಂಡು ಅವುಗಳನ್ನ ಸೇವೆಗಳಲ್ಲಿ ಬಳಸುವಂತೆ ಆದೇಶಿಸಬೇಕು.
* ಹಲವಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿರುವ ಮನೆಗಳ ಮಂಜೂರಾತಿ ರೆವೆನ್ಯೂ ನಕ್ಷೆಯಂತೆ ಮಂಜೂರು ಮಾಡಲಾಗಿದ್ದು, ಈಗ ಸರ್ವೇ ನಕ್ಷೆಯಂತೆ ಸರ್ವೇ ನಡೆಸಿದಾಗ ಸ್ಥಳ ವ್ಯತ್ಯಾಸ ಬರುತ್ತಿದ್ದು, ಇವುಗಳನ್ನು ಮೋಜಣಿ ಇಲಾಖೆಯಲ್ಲಿ ಸ್ಥಳ ವ್ಯತ್ಯಾಸ ಎಂಬ ವರದಿಯೊಂದಿಗೆ ಗ್ರಾಮ ಪಂಚಾಯಿತಿಗಳಲ್ಲಿ ಹಿಂತಿರುಗಿಸಲಾಗುತ್ತಿದ್ದು, ಇದರಿಂದ ಇ ಸ್ವತ್ತು ಪಡೆಯಲು ಸಮಸ್ಯೆ ಉಂಟಾಗಿದ್ದು, ಇವುಗಳಿಗೆ ಅನುಭವದ ಆಧಾರದಂತೆ ಸರ್ವೇ ನಡೆಸಿ ವರದಿ ನೀಡಿ ಇ ಸ್ವತ್ತು ನೀಡುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಬೇಕು.


ಇದನ್ನೂ ಓದಿ: 9 ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್; ತಿಂಗಳಿಗೆ ಸಿಗಲಿದೆ 1,000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಕಡೂರು: ಸರ್ಕಾರಿ ಕಚೇರಿ ಸೇರಿದಂತೆ ವಿವಿಧೆಡೆ ಪ್ರಿಂಟರ್ ಕಳವು: ಆರೋಪಿ ಬಂಧನ

ಕಡೂರು: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ 3 ಪ್ರಿಂಟರ್ ಕಳವು ಮಾಡಿದ್ದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ವಿವಿಧೆಡೆ ಕಳವು ಮಾಡಿದ್ದ ಪ್ರಿಂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ತುಮಕೂರು, ಹಾಸನ, ಮಂಡ್ಯ ಸೇರಿದಂತೆ ಚಿಕ್ಕಮಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಸರ್ಕಾರಿ ಕಚೇರಿ, ಮೆಸ್ಕಾಂ ಮತ್ತು ಬೆಸ್ಕಾಂ ಕಛೇರಿ, ನ್ಯಾಯಾಲಯ ಮತ್ತು ಕಾಲೇಜುಗಳಿಂದ ಪ್ರಿಂಟರ್ ಗಳನ್ನು ಕಳವು ಮಾಡಿದ್ದು, ಸುಮಾರು 6.22 ಲಕ್ಷ ಬೆಲೆಯ 79 ಪ್ರಿಂಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ತಂಡದಲ್ಲಿ ಸಿಪಿಐ ಕಡೂರು ದುರುಗಪ್ಪ ಕೆ, ಪಿ.ಎಸ್.ಐ ನವೀನ್ ಎನ್. ಪಿ ಮತ್ತು ಪವನ್ ಕುಮಾರ್ ಸಿ . ಸಿ, ಸಿಬ್ಬಂದಿಗಳಾದ ಮಂಜುನಾಥಸ್ವಾಮಿ, ಕುಚೇಲ, ಸ್ವಾಮಿ, ದೇವರಾಜ್, ಬೀರೇಶ, ಮಧು, ಹರೀಶ, ಮಹಮ್ಮದ್ ರಿಯಾಜ್, ಈಶ್ವರಪ್ಪ, ಕಿಶೋರ್, ರವಿ ಕುಮಾರ್, ಧನಪಾಲನನಾಯ್ಕ ಮತ್ತು ಜಯಮ್ಮ ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.