ಶೃಂಗೇರಿ: ರೈತರ, ಕೃಷಿ ಕಾರ್ಮಿಕರ, ಜನಸಾಮಾನ್ಯರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮೆರವಣಿಗೆ ಮತ್ತು ಧರಣಿ ಸತ್ಯಾಗ್ರಹ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ರೈತರ, ಕೃಷಿ ಕಾರ್ಮಿಕರ, ಮತ್ತು ಜನಸಾಮಾನ್ಯರ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ 20.01.2025 ಸೋಮವಾರ ದಂದು ಮೆರವಣಿಗೆ ಮತ್ತು ಧರಣಿ ಸತ್ಯಾಗ್ರಹವನ್ನು ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ ಶೃಂಗೇರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಿದ್ದಾರೆ.


ಇದನ್ನೂ ಓದಿ: ಬಿಗ್‌ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಎಲಿಮಿನೇಷನ್‌!


20-01-2025 ಸೋಮವಾರ ಬೆಳಿಗ್ಗೆ 10-00 ಗಂಟೆಗೆ ಬಸ್ ನಿಲ್ದಾಣದಿಂದ ತಾಲ್ಲೂಕು ಕಛೇರಿಯ ವರೆಗೆ ಮೆರವಣಿಗೆ ನಡೆಸಿ ನಂತರ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹವನ್ನು ನಡೆಸಲಿದ್ದಾರೆ.

ವಿವಿಧ ಬೇಡಿಕೆಗಳು ಹೀಗಿದೆ:
1. ಶೃಂಗೇರಿ ತಾಲ್ಲೂಕಿನಾದ್ಯಂತ ಸರ್ಕಾರಿ ಪ್ರದೇಶವನ್ನು ಪ್ರಾಸ್ತಾವಿಕ 4(1) ಅರಣ್ಯದ ನಕಾಶೆಯನ್ನು ತಯಾರಿಸಿದ್ದು, ಈ ಪ್ರದೇಶಗಳನ್ನು ಮೀಸಲು ಅರಣ್ಯ (17) ಎಂದು ಘೋಷಣೆಯನ್ನು ಮಾಡುವಾಗ ರೈತರ, ಕೃಷಿ ಕಾರ್ಮಿಕರು ಮತ್ತು ಜನಸಾಮಾನ್ಯರು ತಮ್ಮ ಜೀವನಕ್ಕೆ ಅವಶ್ಯಕವಾದ ವಾಸದ ಮನೆ ಮತ್ತು ರೈತರ ತಮ್ಮ ಜಮೀನುಗಳ ಅಕ್ಕಪಕ್ಕ ಸರ್ಕಾರಿ ಪ್ರದೇಶದಲ್ಲಿ ಕೃಷಿ ಸಾಗುವಳಿ ಮಾಡಿರುವ ಪ್ರದೇಶಗಳನ್ನು ಹೊರತುಪಡಿಸಬೇಕು.

2. ಶೃಂಗೇರಿ ತಾಲ್ಲೂಕಿನ ಸರ್ಕಾರಿ ಜಮೀನುಗಳ ಪಹಣೆಯಲ್ಲಿ ಸೊಪ್ಪಿನ ಬೆಟ್ಟವೆಂದು ನಮೂದಾಗಿದ್ದು, ಫಾರಂ ನಂ. 50,53, 57 ಮತ್ತು 94 (ಸಿ) ಮುಂತಾದ ಮಂಜೂರಾತಿಗಳಿಗೆ ಪಕ್ಕುಪತ್ರ ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಿಳಿಸಿರುತ್ತಾರೆ. ಆದ್ದರಿಂದ ಈ ಸಮಸ್ಯೆಯನ್ನು ಕಾನೂನಿನಲ್ಲಿ ತಿದ್ದುಪಡಿ ಮಾಡಿ ರೈತರು, ಕೃಷಿ ಕಾರ್ಮಿಕರು ಮತ್ತು ಜನಸಾಮಾನ್ಯರಿಗಾಗಿ ಹಕ್ಕುಪತ್ರ ಮತ್ತು ಸಾಗುವಳಿ ಚೀಟಿಯನ್ನು ಅತೀ ಶೀಘ್ರವಾಗಿ ನೀಡಬೇಕು.


ಇದನ್ನೂ ಓದಿ: ಕೆನರಾ ಬ್ಯಾಂಕ್‌ ನಲ್ಲಿ ಜಾಬ್‌ ಆಫರ್‌; ವಿದ್ಯಾರ್ಹತೆ, ಸಂಬಳ ಕುರಿತು ಇಲ್ಲಿದೆ ಡಿಟೈಲ್ಸ್


3. ರೈತರ, ಕೃಷಿ ಕಾರ್ಮಿಕರು ಮತ್ತು ಜನಸಾಮಾನ್ಯರು ಮಾಡಿಕೊಂಡಿರುವ ಕೃಷಿ ಸಾಗುವಳಿ ಜಮೀನು ಮತ್ತು ವಾಸದ ಮನೆಗಳನ್ನು ಸರ್ಕಾರದ ಆದೇಶದ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಖುಲ್ಲಾ ಮಾಡುವುದು ಮತ್ತು ಕೇಸನ್ನು ದಾಖಲಿಸುವುದನ್ನು

4. ಅವೈಜ್ಞಾನಿಕವಾಗಿ ನೀಡಿದ ಕಸ್ತೂರಿ ರಂಗನ್ ಮತ್ತು ಹುಲಿ ಯೋಜನೆ ವರದಿಗಳನ್ನು ಜಾರಿಗೆ ತರುವುದನ್ನು ಖಂಡಿಸಿ (ನಿಲ್ಲಿಸಿ) ವಿರೋಧಿಸುತ್ತೇವೆ.

5. ತರಿ ಜಮೀನುಗಳಲ್ಲಿ ಭತ್ತ ಬೆಳೆಯುವ ರೈತರಿಗೆ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಅನುಷ್ಠಾನಗೊಳಿಸಬೇಕು.

6. ಇತ್ತೀಚಿನ ದಿನಗಳಲ್ಲಿ ಮಂಗ, ನವಿಲು, ಕಾಡುಕೋಣ, ಹುಲಿ, ಆನೆ, ಚಿರತೆ ಇನ್ನೂ ಮುಂತಾದ ಕಾಡುಪ್ರಾಣಿಗಳ ಹಾವಳಿಯು ತೀವ್ರವಾಗಿದ್ದು, ಈ ಕಾಡು ಪ್ರಾಣಿಗಳನ್ನು ನಿಯಂತ್ರಿಸುವುದು ಮತ್ತು ರೈತರಿಗಾಗುವ ನಷ್ಟವನ್ನು ಪರಿಶೀಲಿಸಿ ಸಮರ್ಪಕವಾದ ಪರಿಹಾರವನ್ನು ನೀಡಬೇಕು.


ಇದನ್ನೂ ಓದಿ: ಡಿಸೆಂಬರ್‌ ತಿಂಗಳ ಗೃಹಲಕ್ಷ್ಮಿ ಯೋಜನೆಯ 2000 ಹಣ ಈ ದಿನ ಜಮಾ!; ಹಣ ಬಾರದೇ ಇದ್ದಲ್ಲಿ ಜಸ್ಟ್‌ ಈ ರೀತಿ ಮಾಡಿ


7. ಕೆರೆಕಟ್ಟೆ ಭಾಗದ ಅಭಯಾರಣ್ಯ ಪ್ರದೇಶದ ರೈತರ ಮತ್ತು ಜನಸಾಮಾನ್ಯರನ್ನು ಒಕ್ಕಲೆಬ್ಬಿಸುವಾಗ ಸಮರ್ಪಕವಾದ ಪರಿಹಾರವನ್ನು ಸಕಾಲಕ್ಕೆ ನೀಡಬೇಕು.

8. ಶೃಂಗೇರಿ ತಾಲ್ಲೂಕಿನಲ್ಲಿ ಸಮರ್ಪಕವಾದ ಸರ್ಕಾರಿ ಆಸ್ಪತ್ರೆ ಅವಶ್ಯಕತೆ ಇರುವುದರಿಂದ 100 ಹಾಸಿಗೆಯ ಅತ್ಯುತ್ತಮವಾದ ಆಸ್ಪತ್ರೆಯನ್ನು ತೆರೆಯಬೇಕೆಂದು ಆಗ್ರಹಿಸಿ ಧರಣಿ ಸತ್ಯಾಗ್ರಹವನ್ನು ನಡೆಸಲಿದ್ದಾರೆ.


ಇದನ್ನೂ ಓದಿ:  17,000 ಸ್ಕಾಲರ್‌ ಶಿಪ್‌ ನೇರ ವಿದ್ಯಾರ್ಥಿಗಳ ಖಾತೆಗೆ; ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.