ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ ಕಾಯುತ್ತೆ ತಾ.ಪಂ ಇಓ ಜೀಪ್…!

ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ತಾ.ಪಂ ಮುಖ್ಯ ನಿರ್ವಾಹಣಾಧಿಕಾರಿಯೊಬ್ಬರು ಸರ್ಕಾರಿ ವಾಹನವನ್ನು ಊರಿಗೆ ಹೋಗಲು ಬಳಸಿ ದುರ್ಬಳಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?


ವರ್ಷದ ಹಿಂದೆ ಉಜಿರೆ ಭಾಗದಿಂದ ಮೂಡಿಗೆರೆಗೆ ತಾ.ಪಂ ಇಒ ದಯಾವತಿಯವರು ವರ್ಗಾವಣೆಗೊಂಡಿದ್ದಾರೆ. ಆದರೆ ಈ ಅಧಿಕಾರಿಯು ದಕ್ಷಿಣ ಕನ್ನಡಕ್ಕೆ ಸರ್ಕಾರಿ ಜೀಪಿನಲ್ಲೇ ಹೋಗಿ ಬರುತ್ತಿದ್ದಾರೆ. ಮೂಡಿಗೆರೆಯಲ್ಲಿ ಸರ್ಕಾರಿ ಬಸ್ ಗಳ ಸೌಲಭ್ಯವಿದ್ದರೂ ಈ ಅಧಿಕಾರಿ ಕೊಟ್ಟಿಗೆಹಾರದವರೆಗೆ ಸರ್ಕಾರಿ ಜೀಪ್ ಬಳಸುತ್ತಿದ್ದು, ತದ ನಂತರ ಬಸ್ ತಡವಾದರೆ ಅದೇ ಸರ್ಕಾರಿ ಜೀಪ್ ನಲ್ಲಿ ಉಜಿರೆಗೆ ತೆರಳುತ್ತಾರೆ. ಚಾಲಕರಿಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಇಒ ಸರ್ಕಾರಿ ವಾಹನ ಸ್ವಂತ ವಿಷಯಕ್ಕೆ ಬಳಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.


ಇದನ್ನೂ ಓದಿ; ಮತ್ತೆ APL-BPL ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ; ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ..!


ಅಧಿಕಾರಿಗಳು ವರ್ಗಾವಣೆಗೊಂಡ ನಂತರ ಮೂಲ ಸ್ಥಾನದಲ್ಲಿ ಇರಬೇಕೆಂಬ ನಿಯಮವಿದ್ದರೂ ಈ ಇಒ ಮಾತ್ರ ನಿಯಮ ಗಾಳಿಗೆ ತೂರಿ ವಾಹನವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಉಜಿರೆಯಿಂದ ಇಒಗೆ ಮೂಡಿಗೆರೆ ಸರ್ಕಾರಿ ಬಸ್ ವ್ಯವಸ್ಥೆಯಿದ್ದರೂ ಚಾಲಕನನ್ನು ಕೊಟ್ಟಿಗೆಹಾರಕ್ಕೆ ಬರಲು ಹೇಳುತ್ತಾರೆ. ಅವರು ಬೆಳಿಗ್ಗೆ ಅಧಿಕಾರಿ ಆಗಮನಕ್ಕೆ ಹಾಗೂ ನಿರ್ಗಮನಕ್ಕೆ ಕೊಟ್ಟಿಗೆಹಾರಕ್ಕೆ ಬಂದು ಬಸ್ ಹತ್ತುತ್ತಾರೆ. ಹೆಚ್ಚಾಗಿ ಸರ್ಕಾರಿ ವಾಹನವಂತೂ ಸ್ವಂತ ವಾಹನದಂತೆ ಬಳಸುತ್ತಿರುವುದು ಸಂಬಂಧಿಸಿದ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಕುರುಡು ಪ್ರದರ್ಶನ ನೀಡುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.


ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಬಾಕಿ ಹಣ ಒಂದೇ ಬಾರಿ ಜಮಾ; ಯಾವಾಗ? ಲಕ್ಷ್ಮೀ ಹೆಬ್ಬಾಳ್ಕರ್‌ ಏನಂದ್ರು?‘


ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಇಒ ಗೆ ಸೂಕ್ತ ನಿರ್ದೇಶನ ನೀಡಿ ಮೂಲಸ್ಥಳದಲ್ಲಿ ನಿಂತು ಕರ್ತವ್ಯ ನಿರ್ವಹಿಸುವಂತೆ ಸೂಚಿಸಬೇಕು. ಸರ್ಕಾರಿ ಹಣ ದುರುಪಯೋಗವಾಗದಂತೆ ತಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

“ಅಧಿಕಾರಿ ಊರಿಗೆ ಹೋಗಲು ಸರ್ಕಾರಿ ವಾಹನ ಬಳಸುತ್ತಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು”. -ಎಚ್. ಎಸ್ ಕೀರ್ತನಾ, ಸಿ. ಎಸ್ ಚಿಕ್ಕಮಗಳೂರು

(ವರದಿ- ತನು ಕೊಟ್ಟಿಗೆಹಾರ)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.