ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡ ಬರಕ್ಕೆ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಚಿಕ್ಕನಲ್ಲೂರು ಗ್ರಾಮದಲ್ಲಿ ನಡೆದಿದೆ. ಪರಮೇಶ್ವರಪ್ಪ (52) ಆತ್ಮಹತ್ಯೆಗೆ ಶರಣಾದ ರೈತ.
ಇದನ್ನೂ ಓದಿ; ಇಂದಿನಿಂದ ಶಿವಮೊಗ್ಗಕ್ಕೆ ವಿಮಾನ ಹಾರಾಟ ಶುರು; ಟಿಕೆಟ್ ದರ ಎಷ್ಟು ಗೊತ್ತಾ?

ನಿನ್ನೆ ತಾನೇ ಸಾಲಬಾಧೆಗೆ ಮನನೊಂದು ಕಾಫಿನಾಡಿನಲ್ಲಿ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೆ ಇಂದು ಮತ್ತೊಂದು ಕಾಫಿನಾಡ ಬರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನದಲ್ಲಿ ಇಬ್ಬರು ರೈತರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚಿಕ್ಕನಲ್ಲೂರು ಗ್ರಾಮದ ಪರಮೇಶ್ವರಪ್ಪ 3 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಹಾಕಿದ್ದರು. ಆದರೆ ಮಳೆ ಇಲ್ಲದ ಕಾರಣ ಸಂಪೂರ್ಣ ಬೆಳೆ ನಾಶವಾಗಿದೆ. ಬ್ಯಾಂಕ್ ಬಡ್ಡಿ ಹಾಗೂ ಕೈಸಾಲ ಸೇರಿ 5 ಲಕ್ಷ ಸಾಲ ಮಾಡಿದ್ದ ರೈತ, ಸಾಲ ತೀರಿಸಲಾಗದೆ ಮನನೊಂದು ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ; ಸಕತ್ ಟೇಸ್ಟಿ ಈ ಗೋಧಿ ಹಿಟ್ಟಿನ ಹಲ್ವಾ; 4 ಸಾಮಗ್ರಿಗಳಿದ್ರೆ ಸಾಕು ರೆಡಿಯಾಗುತ್ತೆ ಈ ಸಿಹಿ ತಿಂಡಿ
ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡಿಗೆರೆ: ಮೈಮೇಲೆ ದೇವರು ಬಂದಿದ್ದಾರೆಂದು ಹೈಡ್ರಾಮ ಸೃಷ್ಟಿಸಿದ ಮುಖ್ಯಶಿಕ್ಷಕಿ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಶಾಲೆಯಲ್ಲಿ ಹಣದುರುಪಯೋಗ ಬಗ್ಗೆ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಹೊನ್ನೇಶ್ ನೀಡಿದ್ದ ದೂರಿನ ಮೇಲೆ ತನಿಖೆ ಕೈಗೊಳ್ಳಲು ಬಂದಿದ್ದ ಬಿ.ಇ.ಓ. ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಎದುರು ಮುಖ್ಯ ಶಿಕ್ಷಕಿ, ಮೈಮೇಲೆ ಗ್ರಾಮದ ದೇವತೆ ಬಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಸರಕಾರಿ ಶಾಲೆಯಲ್ಲಿ ನಡೆದಿದೆ.
ಮುಖ್ಯ ಶಿಕ್ಷಕಿಯಿಂದ ಹೈಡ್ರಾಮಾ:
ಬಿ.ಇ.ಓ. ತನಿಖೆ ಅಂಗವಾಗಿ ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದಾಗ ಇದ್ದಕ್ಕಿದಂತೆ ಪಕ್ಕದಲ್ಲಿ ಕುಳಿತ್ತಿದ್ದ ಮುಖ್ಯ ಶಿಕ್ಷಕಿ ಲಲಿತಾ ಅವರು ಕಣ್ಣು ಮುಚ್ಚಿಕೊಂಡು ಮಾತನಾಡಲು ಶುರು ಮಾಡಿದ್ದರು. ನಾನು ಗ್ರಾಮದೇವತೆ, ಗ್ರಾಮದಲ್ಲಿ ಯಾರ್ಯಾರು ಇದ್ದಾರೆ, ಏನು ಮಾಡುತ್ತಿದ್ದಾರೆಂಬುದು ಎಲ್ಲಾ ನನಗೆ ಗೊತ್ತು. ನನಗೆ ದೇವಸ್ಥಾನ ಕಟ್ಟಿಸಿಕೊಡಬೇಕು. ಈ ಶಾಲೆ ನಡೆಯಬಾರದು. ನಾನು ಯಾರನ್ನೂ ಬಿಡುವುದಿಲ್ಲ, ಈ ಶಾಲೆಯನ್ನು ನಡೆಯಲು ಬಿಡುವುದಿಲ್ಲ. ಇದು ನನ್ನ ಜಾಗ. ಯಾರಿಗೂ ಬರೋಕೆ ಬಿಡಲ್ಲ. ದೇವಸ್ಥಾನ ಉದ್ಘಾಟನೆಗೊಂಡು ಪೂಜೆ ಆಗುವವರೆಗೂ ಇಲ್ಲಿ ಯಾರಿಗೂ ಬಿಡುವುದಿಲ್ಲ. ನನ್ನ ತೀರ್ಮಾನದ ಮುಂದೆ ಯಾರ ತೀರ್ಮಾನವೂ ಇಲ್ಲ.
ಮಾಜಿ ಸಚಿವರನ್ನು ಬಲಿ ತೆಗೆದುಕೊಳ್ಳುವ ಶಪಥ:
ನಿಂಗಯ್ಯ ಅವರನ್ನಂತೂ ಬಲಿ ತೆಗೆದುಕೊಳ್ಳದೇ ಬಿಡುವುದಿಲ್ಲವೆಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ ರೀತಿಯಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ; ಪೇರಳೆ ಬೆಳೆ ಬೆಳೆದು ಎಷ್ಟು ಲಾಭ ಮಾಡಬಹುದು ಗೊತ್ತಾ?; ಲಾಭ ತಿಳಿದರೆ ಅಚ್ಚರಿ ಆಗೋದು ಗ್ಯಾರಂಟಿ
ಇನ್ನು ತನಿಖೆಯಿಂದ ತಪ್ಪಿಸಿಕೊಳ್ಳಲು ಮುಖ್ಯಶಿಕ್ಷಕಿ ಮೈಮೇಲೆ ಗ್ರಾಮದೇವತೆ ಬಂದಂತೆ ನಾಟಕವಾಡಿದ್ದಾರೆ ಎಂದು ಹೇಳಲಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಯಾವ ಕ್ರಮ ಜರುಗಿಸುತ್ತಾರೆೆ ಎಂದು ಕಾದು ನೋಡಬೇಕಿದೆ.












