
ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಕೆ.ಆರ್.ಎಸ್ ಪಕ್ಷದಿಂದ ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಬೆಳ್ತಂಗಡಿಯಿಂದ ಬೆಂಗಳೂರಿಗೆ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಶ್ವಾನವೊಂದು ಪಕ್ಷದ ಕಾರ್ಯಕರ್ತರ ಜೊತೆ ಹೆಜ್ಜೆ ಹಾಕುತ್ತಾ ಎಲ್ಲಾರ ಗಮನ ಸೆಳೆದಿದೆ.
ಇದನ್ನೂ ಓದಿ; ಇಂದಿನಿಂದ ಶಿವಮೊಗ್ಗಕ್ಕೆ ವಿಮಾನ ಹಾರಾಟ ಶುರು; ಟಿಕೆಟ್ ದರ ಎಷ್ಟು ಗೊತ್ತಾ?

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಿಂದ ಪಾದಯಾತ್ರಿಗಳ ಜೊತೆಗೆ ಸೇರಿಕೊಂಡ ಈ ಶ್ವಾನ 70 ಕಿ.ಮೀ. ದೂರವನ್ನು ಕ್ರಮಿಸಿ ಪಾದಯಾತ್ರಿಕರೊಂದಿಗೆ ನಡೆದುಕೊಂಡು ಬಂದಿದೆ. ಇನ್ನು ಈ ಶ್ವಾನಕ್ಕೆ ‘ಪ್ರಕೃತಿ’ ಎಂದು ಹೆಸರಿಟ್ಟಿದ್ದಾರೆ. ಇದೀಗ ಈ ಶ್ವಾನ ಹಾಸನ ಮುಟ್ಟಿದ್ದು, ನಿನ್ನೆ ಸಂಜೆ ಸ್ಥಳೀಯ ಪಶುವೈದ್ಯರಿಂದ ವ್ಯಾಕ್ಸಿನ್ ಕೂಡ ಹಾಕಿಸಿದ್ದಾರೆ ಎಂದು ತಿಳಿದು ಬಂದಿದೆ.


ಇನ್ನು ಈ ಬಗ್ಗೆ ಪಾದಯಾತ್ರೆಯಲ್ಲಿ ಭಾಗವಹಿಸಿರುವ ಸಿ.ಎನ್.ದೀಪಕ್ ಮಾತನಾಡಿ, ನಾವು ಬೆಳ್ತಂಗಡಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗಿ ವಾಪಾಸ್ ಬರುವಾಗ ನೇತ್ರಾವತಿ ಸ್ನಾನಘಟ್ಟದ ಬಳಿ ಈ ಶ್ವಾನ ನಮ್ಮನ್ನು ಹಿಂಬಾಲಿಸಿಕೊಂಡು ಬಂದಿದೆ. ಮೊದಲಿಗೆ ನಾವು ಈ ಶ್ವಾನದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ, ಈಗ ಚಾರ್ಮಾಡಿ ಘಾಟ್ ಮೂಲಕ 70ಕಿ.ಮೀ ನಮ್ಮೊಂದಿಗೆ ನಡೆದುಕೊಂಡು ಬಂದಿರುವುದು ನೋಡಿದರೆ ಅಚ್ಚರಿ ಎನಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮೂಡಿಗೆರೆ: ಮೈಮೇಲೆ ದೇವರು ಬಂದಿದ್ದಾರೆಂದು ಹೈಡ್ರಾಮ ಸೃಷ್ಟಿಸಿದ ಮುಖ್ಯಶಿಕ್ಷಕಿ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಶಾಲೆಯಲ್ಲಿ ಹಣದುರುಪಯೋಗ ಬಗ್ಗೆ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಹೊನ್ನೇಶ್ ನೀಡಿದ್ದ ದೂರಿನ ಮೇಲೆ ತನಿಖೆ ಕೈಗೊಳ್ಳಲು ಬಂದಿದ್ದ ಬಿ.ಇ.ಓ. ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಎದುರು ಮುಖ್ಯ ಶಿಕ್ಷಕಿ, ಮೈಮೇಲೆ ಗ್ರಾಮದ ದೇವತೆ ಬಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಸರಕಾರಿ ಶಾಲೆಯಲ್ಲಿ ನಡೆದಿದೆ.
ಮುಖ್ಯ ಶಿಕ್ಷಕಿಯಿಂದ ಹೈಡ್ರಾಮಾ:
ಬಿ.ಇ.ಓ. ತನಿಖೆ ಅಂಗವಾಗಿ ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದಾಗ ಇದ್ದಕ್ಕಿದಂತೆ ಪಕ್ಕದಲ್ಲಿ ಕುಳಿತ್ತಿದ್ದ ಮುಖ್ಯ ಶಿಕ್ಷಕಿ ಲಲಿತಾ ಅವರು ಕಣ್ಣು ಮುಚ್ಚಿಕೊಂಡು ಮಾತನಾಡಲು ಶುರು ಮಾಡಿದ್ದರು. ನಾನು ಗ್ರಾಮದೇವತೆ, ಗ್ರಾಮದಲ್ಲಿ ಯಾರ‍್ಯಾರು ಇದ್ದಾರೆ, ಏನು ಮಾಡುತ್ತಿದ್ದಾರೆಂಬುದು ಎಲ್ಲಾ ನನಗೆ ಗೊತ್ತು. ನನಗೆ ದೇವಸ್ಥಾನ ಕಟ್ಟಿಸಿಕೊಡಬೇಕು. ಈ ಶಾಲೆ ನಡೆಯಬಾರದು. ನಾನು ಯಾರನ್ನೂ ಬಿಡುವುದಿಲ್ಲ, ಈ ಶಾಲೆಯನ್ನು ನಡೆಯಲು ಬಿಡುವುದಿಲ್ಲ. ಇದು ನನ್ನ ಜಾಗ. ಯಾರಿಗೂ ಬರೋಕೆ ಬಿಡಲ್ಲ. ದೇವಸ್ಥಾನ ಉದ್ಘಾಟನೆಗೊಂಡು ಪೂಜೆ ಆಗುವವರೆಗೂ ಇಲ್ಲಿ ಯಾರಿಗೂ ಬಿಡುವುದಿಲ್ಲ. ನನ್ನ ತೀರ್ಮಾನದ ಮುಂದೆ ಯಾರ ತೀರ್ಮಾನವೂ ಇಲ್ಲ.
ಮಾಜಿ ಸಚಿವರನ್ನು ಬಲಿ ತೆಗೆದುಕೊಳ್ಳುವ ಶಪಥ:
ನಿಂಗಯ್ಯ ಅವರನ್ನಂತೂ ಬಲಿ ತೆಗೆದುಕೊಳ್ಳದೇ ಬಿಡುವುದಿಲ್ಲವೆಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ ರೀತಿಯಲ್ಲಿ ಮಾತನಾಡಿದ್ದಾರೆ.
ಇನ್ನು ತನಿಖೆಯಿಂದ ತಪ್ಪಿಸಿಕೊಳ್ಳಲು ಮುಖ್ಯಶಿಕ್ಷಕಿ ಮೈಮೇಲೆ ಗ್ರಾಮದೇವತೆ ಬಂದಂತೆ ನಾಟಕವಾಡಿದ್ದಾರೆ ಎಂದು ಹೇಳಲಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಯಾವ ಕ್ರಮ ಜರುಗಿಸುತ್ತಾರೆೆ ಎಂದು ಕಾದು ನೋಡಬೇಕಿದೆ.













