ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಕಾಡಾನೆ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ವ್ಯಾಪ್ತಿಯ ವರ್ತೆಗುಂಡಿ ಎಂಬ ಗ್ರಾಮದಲ್ಲಿ ನಡೆದಿದೆ. ಅಕ್ಟರ್(35) ಮೃತ ದುರ್ದೈವಿ.
ಇದನ್ನೂ ಓದಿ; ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಬಿಗ್ ಶಾಕ್; ಇನ್ಮುಂದೆ ಇಂತಹವರಿಗೆ ಇಲ್ಲ ಫ್ರೀ ಕರೆಂಟ್

ತೋಟದಲ್ಲಿ ಆನೆ ಓಡಿಸುವಾಗ ಏಕಾಏಕಿ ನುಗ್ಗಿ ಬಂದಿದ್ದ ಕಾಡಾನೆ ಟಿಂಬರ್ ಕಾರ್ಮಿಕ ಅಕ್ಬರ್ ಮೇಲೆ ದಾಳಿ ಮಾಡಿದೆ. ಈ ವೇಳೆ ನೆಲಕ್ಕೆ ಬಿದ್ದ ಅಕ್ಬರ್ ಮೇಲೆ ಆನೆ ಕಾಲಿಟ್ಟು ಕೊಂದಿದೆ. ಭೀಕರತೆಗೆ ದೇಹದ ಅಂಗಾಗಗಳು ಛಿದ್ರವಾಗಿ, ಕರುಳು ಹೊರ ಬಂದಿದೆ.
ಇದನ್ನೂ ಓದಿ; ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಹಿಂದಿದ್ದಾರೆ ಮಲೆನಾಡಿನ ಇಬ್ಬರು; ಟೋಪಿಯಲ್ಲಿದ್ದ ಕೂದಲಿನಿಂದ ಸಿಕ್ಕಿತು ಮಹತ್ವದ ಸುಳಿವು
IPL ಬೆಟ್ಟಿಂಗ್ ಆಡೋರಿಗೆ ಕವಿತೆ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಿನ್ನೆಯಿಂದ IPL ಪಂದ್ಯಾವಳಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಖಾಕಿ ಫುಲ್ ಅಲರ್ಟ್ ಆಗಿದ್ದು, ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕವಿತೆ ಮೂಲಕ ಡಿಫರೆಂಟ್ ಜಾಗೃತಿ ಮೂಡಿಸಿದೆ.
ಇದನ್ನೂ ಓದಿ; ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕ: 513 ಹುದ್ದೆಗೆ ಅರ್ಜಿ ಆಹ್ವಾನ
“ಬೆಟ್ಟಿಂಗ್ ಆಡಿ ಬಿಡ್ಬೇಡ್ರೋ ನಿಮ್ ಊರು, ಸಿಕ್ಕಾಂಕೊಂಡು ಕೆಡಿಸ್ಕೋಬೇಡಿ ನಿಮ್ ಹೆಸರು. ನಮ್ಮ ಕೈಗೆ ಸಿಕ್ರೆ ನಿಮ್ ಜೀವನ ಹುಷಾರು. ಈ ಸಲ ಕಪ್ ನಮ್ದೇ ಎಂಬ ಕೂಗು ಜೋರು. ಸುಮ್ನೆ ಆಟ ಎಂಜಾಯ್ ಮಾಡು ದೇವರು. ಅಭಿಮಾನಕ್ಕೆ ಹೆಸರು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು,” ಎಂದು RCB ಯನ್ನ ಹೊಗಳುತ್ತಲೇ ಬೆಟ್ಟಿಂಗ್ ಚೋರರಿಗೆ ಖಾಕಿ ಬಿಸಿ ಮುಟ್ಟಿಸಿದೆ.
ಇದನ್ನೂ ಓದಿ; ವೋಟರ್ ಐಡಿ ಇಲ್ಲದಿದ್ರೂ ಮತದಾನ ಮಾಡ್ಬಹುದು!; ಈ ದಾಖಲೆಗಳಿದ್ದರೆ ಸಾಕು…ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
IPL ಬೆಟ್ಟಿಂಗ್ ಕುರಿತು ಪೊಲೀಸರ ಹೊಸ ರೀತಿಯ ಜಾಗೃತಿಗೆ ಜಿಲ್ಲೆಯಾದ್ಯಂತ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












