ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕೈ ಮಾಜಿ ಸಚಿವ ಪುತ್ರನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ.
ಇದನ್ನೂ ಓದಿ; ಇಂದಿನಿಂದ ಶಿವಮೊಗ್ಗಕ್ಕೆ ವಿಮಾನ ಹಾರಾಟ ಶುರು; ಟಿಕೆಟ್ ದರ ಎಷ್ಟು ಗೊತ್ತಾ?

ಹೌದು, ಕೋಟಿ ರೂ., ಕೆಜಿ ಚಿನ್ನ, ಫಾರ್ಚುನರ್ ಕಾರು ಕೊಟ್ಟರೂ ಸಾಕಾಗಿಲ್ಲ ಕೈ ಮಾಜಿ ಸಚಿವನ ಪುತ್ರನಿಗೆ. ಕಾಂಗ್ರೆಸ್ ಮಾಜಿ ಸಚಿವ ಸಗೀರ್ ಅಹಮದ್ ಪುತ್ರನಾದ ಅತೀ ಉರ್ ರಹಮಾನ್, ಪತ್ನಿ ಶಿಂಷಿಯಾ ಸಹರ್ ಅವರಿಗೆ ಕಿರುಕುಳ ನೀಡಿ, ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಶಿಕಷಿಯಾ ಸಹರ್ ಅವರ ಕಾಲು ಮತ್ತು ಕೈಗೆ ಗಂಭೀರವಾಗಿ ಗಾಯವಾಗಿದ್ದು, ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪತಿ ವಿರುದ್ಧ ದೂರು ದಾಖಲು:
ಇನ್ನು ಪತಿ ಉರ್ ರಹಮಾನ್ ನಿಂದ ಹಲ್ಲೆಗೊಳಗಾದ ಶಿಂಷಿಯಾ ಸಹರ್ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ಡ್ರಗ್ ಅಡಿಕ್ಟ್ ಎಂದು ಆರೋಪ ಮಾಡಿ ದೂರು ದಾಖಲಿಸಿದ್ದಾರೆ.
ಮಹಿಳೆಯರ ರಕ್ಷಣೆಗೆ ನಾವಿದ್ದೇವೆ ಎಂದು ಭಾಷಣ ಮಾಡುವ ನಾಯಕರೇ ವರದಕ್ಷಿಣೆ ಇರುಕುಳ ನೀಡಿದರೆ ಯಾವ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ನೋಡಬೇಕಿದೆ.
ಮೂಡಿಗೆರೆ: ಮೈಮೇಲೆ ದೇವರು ಬಂದಿದ್ದಾರೆಂದು ಹೈಡ್ರಾಮ ಸೃಷ್ಟಿಸಿದ ಮುಖ್ಯಶಿಕ್ಷಕಿ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಶಾಲೆಯಲ್ಲಿ ಹಣದುರುಪಯೋಗ ಬಗ್ಗೆ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಹೊನ್ನೇಶ್ ನೀಡಿದ್ದ ದೂರಿನ ಮೇಲೆ ತನಿಖೆ ಕೈಗೊಳ್ಳಲು ಬಂದಿದ್ದ ಬಿ.ಇ.ಓ. ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಎದುರು ಮುಖ್ಯ ಶಿಕ್ಷಕಿ, ಮೈಮೇಲೆ ಗ್ರಾಮದ ದೇವತೆ ಬಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಸರಕಾರಿ ಶಾಲೆಯಲ್ಲಿ ನಡೆದಿದೆ.
ಇದನ್ನೂ ಓದಿ; ಸಕತ್ ಟೇಸ್ಟಿ ಈ ಗೋಧಿ ಹಿಟ್ಟಿನ ಹಲ್ವಾ; 4 ಸಾಮಗ್ರಿಗಳಿದ್ರೆ ಸಾಕು ರೆಡಿಯಾಗುತ್ತೆ ಈ ಸಿಹಿ ತಿಂಡಿ
ಮುಖ್ಯ ಶಿಕ್ಷಕಿಯಿಂದ ಹೈಡ್ರಾಮಾ:
ಬಿ.ಇ.ಓ. ತನಿಖೆ ಅಂಗವಾಗಿ ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದಾಗ ಇದ್ದಕ್ಕಿದಂತೆ ಪಕ್ಕದಲ್ಲಿ ಕುಳಿತ್ತಿದ್ದ ಮುಖ್ಯ ಶಿಕ್ಷಕಿ ಲಲಿತಾ ಅವರು ಕಣ್ಣು ಮುಚ್ಚಿಕೊಂಡು ಮಾತನಾಡಲು ಶುರು ಮಾಡಿದ್ದರು. ನಾನು ಗ್ರಾಮದೇವತೆ, ಗ್ರಾಮದಲ್ಲಿ ಯಾರ್ಯಾರು ಇದ್ದಾರೆ, ಏನು ಮಾಡುತ್ತಿದ್ದಾರೆಂಬುದು ಎಲ್ಲಾ ನನಗೆ ಗೊತ್ತು. ನನಗೆ ದೇವಸ್ಥಾನ ಕಟ್ಟಿಸಿಕೊಡಬೇಕು. ಈ ಶಾಲೆ ನಡೆಯಬಾರದು. ನಾನು ಯಾರನ್ನೂ ಬಿಡುವುದಿಲ್ಲ, ಈ ಶಾಲೆಯನ್ನು ನಡೆಯಲು ಬಿಡುವುದಿಲ್ಲ. ಇದು ನನ್ನ ಜಾಗ. ಯಾರಿಗೂ ಬರೋಕೆ ಬಿಡಲ್ಲ. ದೇವಸ್ಥಾನ ಉದ್ಘಾಟನೆಗೊಂಡು ಪೂಜೆ ಆಗುವವರೆಗೂ ಇಲ್ಲಿ ಯಾರಿಗೂ ಬಿಡುವುದಿಲ್ಲ. ನನ್ನ ತೀರ್ಮಾನದ ಮುಂದೆ ಯಾರ ತೀರ್ಮಾನವೂ ಇಲ್ಲ.
ಮಾಜಿ ಸಚಿವರನ್ನು ಬಲಿ ತೆಗೆದುಕೊಳ್ಳುವ ಶಪಥ:
ನಿಂಗಯ್ಯ ಅವರನ್ನಂತೂ ಬಲಿ ತೆಗೆದುಕೊಳ್ಳದೇ ಬಿಡುವುದಿಲ್ಲವೆಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ ರೀತಿಯಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ; ಪೇರಳೆ ಬೆಳೆ ಬೆಳೆದು ಎಷ್ಟು ಲಾಭ ಮಾಡಬಹುದು ಗೊತ್ತಾ?; ಲಾಭ ತಿಳಿದರೆ ಅಚ್ಚರಿ ಆಗೋದು ಗ್ಯಾರಂಟಿ
ಇನ್ನು ತನಿಖೆಯಿಂದ ತಪ್ಪಿಸಿಕೊಳ್ಳಲು ಮುಖ್ಯಶಿಕ್ಷಕಿ ಮೈಮೇಲೆ ಗ್ರಾಮದೇವತೆ ಬಂದಂತೆ ನಾಟಕವಾಡಿದ್ದಾರೆ ಎಂದು ಹೇಳಲಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಯಾವ ಕ್ರಮ ಜರುಗಿಸುತ್ತಾರೆೆ ಎಂದು ಕಾದು ನೋಡಬೇಕಿದೆ.












