ಎನ್.ಆರ್.ಪುರ; ಗಾಂಜಾ ಸೇವಿಸಿದ್ದ ಆರೋಪದಡಿ ಆಟೋ ಚಾಲಕ ವಶಕ್ಕೆ

ಎನ್.ಆರ್.ಪುರ; (ನ್ಯೂಸ್ ಮಲ್ನಾಡ್ ವರದಿ)  ಆಟೋದಲ್ಲಿ ಒಣ ಗಾಂಜಾ ಇಟ್ಟಕೊಂಡಿದ್ದ ಆರೋಪದ ಮೇಲೆ ಆಟೋ ಚಾಲಕನನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ವಾಟ್ ಕೊಡಿಗೆ ಸಮೀಪ ನಡೆದಿದೆ. ಸಮಿವುಲ್ಲ ಬಂಧಿತ ಆಟೋ ಚಾಲಕ.

 

ಇದನ್ನೂ ಓದಿ; ಇಂದಿನಿಂದ ಶಿವಮೊಗ್ಗಕ್ಕೆ ವಿಮಾನ ಹಾರಾಟ ಶುರು; ಟಿಕೆಟ್ ದರ ಎಷ್ಟು ಗೊತ್ತಾ?

ಅಬಕಾರಿ ಇಲಾಖೆ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾಗ ವಾಹನ ಪರಿಶೀಲನೆ ವೇಳೆ ಆಟೋ ಚಾಲಕ ಸಮಿವುಲ್ಲ ಎಂಬಾತ ಆಟೋದ ಡ್ಯಾಶ್ ಬೋರ್ಡ್ನಲ್ಲಿ 100 ಗ್ರಾಂ ಒಣ ಗಾಂಜಾ ಇದ್ದುದ್ದನ್ನು ಕಂಡು ಆರೋಪಿಯನ್ನು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸದ್ದಾಗ ಗಾಂಜಾ ಸೇವಿಸಿದ್ದು ದೃಢವಾಗಿದ್ದ ಕಾರಣ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

 

ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ; ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ಹೀಗೆ ತಿಳಿದುಕೊಳ್ಳಿ

ಈ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಎಂ.ಆರ್.ಶೇಖ, ಸಿಬ್ಬಂಧಿಗಳಾದ ಲೋಕೇಶ್, ಮಹಮ್ಮದ್ ಅಸಾವುದ್ದಿನ್‌ಖಾನ್, ಕಿಜರ್ ಅಹಮ್ಮದ್ ಪಾಲ್ಗೊಂಡಿದ್ದರು.

ಮೂಡಿಗೆರೆ: ಮೈಮೇಲೆ ದೇವರು ಬಂದಿದ್ದಾರೆಂದು ಹೈಡ್ರಾಮ ಸೃಷ್ಟಿಸಿದ ಮುಖ್ಯಶಿಕ್ಷಕಿ

ಮೂಡಿಗೆರೆ:  (ನ್ಯೂಸ್ ಮಲ್ನಾಡ್ ವರದಿ) ಶಾಲೆಯಲ್ಲಿ ಹಣದುರುಪಯೋಗ ಬಗ್ಗೆ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಹೊನ್ನೇಶ್ ನೀಡಿದ್ದ ದೂರಿನ ಮೇಲೆ ತನಿಖೆ ಕೈಗೊಳ್ಳಲು ಬಂದಿದ್ದ ಬಿ.ಇ.ಓ. ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಎದುರು ಮುಖ್ಯ ಶಿಕ್ಷಕಿ, ಮೈಮೇಲೆ ಗ್ರಾಮದ ದೇವತೆ ಬಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಸರಕಾರಿ ಶಾಲೆಯಲ್ಲಿ ನಡೆದಿದೆ.

ಮುಖ್ಯ ಶಿಕ್ಷಕಿಯಿಂದ ಹೈಡ್ರಾಮಾ:
ಬಿ.ಇ.ಓ. ತನಿಖೆ ಅಂಗವಾಗಿ ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದಾಗ ಇದ್ದಕ್ಕಿದಂತೆ ಪಕ್ಕದಲ್ಲಿ ಕುಳಿತ್ತಿದ್ದ ಮುಖ್ಯ ಶಿಕ್ಷಕಿ ಲಲಿತಾ ಅವರು ಕಣ್ಣು ಮುಚ್ಚಿಕೊಂಡು ಮಾತನಾಡಲು ಶುರು ಮಾಡಿದ್ದರು. ನಾನು ಗ್ರಾಮದೇವತೆ, ಗ್ರಾಮದಲ್ಲಿ ಯಾರ‍್ಯಾರು ಇದ್ದಾರೆ, ಏನು ಮಾಡುತ್ತಿದ್ದಾರೆಂಬುದು ಎಲ್ಲಾ ನನಗೆ ಗೊತ್ತು. ನನಗೆ ದೇವಸ್ಥಾನ ಕಟ್ಟಿಸಿಕೊಡಬೇಕು. ಈ ಶಾಲೆ ನಡೆಯಬಾರದು. ನಾನು ಯಾರನ್ನೂ ಬಿಡುವುದಿಲ್ಲ, ಈ ಶಾಲೆಯನ್ನು ನಡೆಯಲು ಬಿಡುವುದಿಲ್ಲ. ಇದು ನನ್ನ ಜಾಗ. ಯಾರಿಗೂ ಬರೋಕೆ ಬಿಡಲ್ಲ. ದೇವಸ್ಥಾನ ಉದ್ಘಾಟನೆಗೊಂಡು ಪೂಜೆ ಆಗುವವರೆಗೂ ಇಲ್ಲಿ ಯಾರಿಗೂ ಬಿಡುವುದಿಲ್ಲ. ನನ್ನ ತೀರ್ಮಾನದ ಮುಂದೆ ಯಾರ ತೀರ್ಮಾನವೂ ಇಲ್ಲ.

ಮಾಜಿ ಸಚಿವರನ್ನು ಬಲಿ ತೆಗೆದುಕೊಳ್ಳುವ ಶಪಥ:
ನಿಂಗಯ್ಯ ಅವರನ್ನಂತೂ ಬಲಿ ತೆಗೆದುಕೊಳ್ಳದೇ ಬಿಡುವುದಿಲ್ಲವೆಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ ರೀತಿಯಲ್ಲಿ ಮಾತನಾಡಿದ್ದಾರೆ.

ಇನ್ನು ತನಿಖೆಯಿಂದ ತಪ್ಪಿಸಿಕೊಳ್ಳಲು ಮುಖ್ಯಶಿಕ್ಷಕಿ ಮೈಮೇಲೆ ಗ್ರಾಮದೇವತೆ ಬಂದಂತೆ ನಾಟಕವಾಡಿದ್ದಾರೆ ಎಂದು ಹೇಳಲಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಯಾವ ಕ್ರಮ ಜರುಗಿಸುತ್ತಾರೆೆ ಎಂದು ಕಾದು ನೋಡಬೇಕಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.