ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಗೌರಿಲಂಕೇಶ್ ಅವರನ್ನು ಕೊಲೆಗೈದ ಆರೋಪಿಗಳಿಗೆ ಸನ್ಮಾನಿಸಿದ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗೌರಿಸ್ಮಾರಕ ಟ್ರಸ್ಟ್ ಹಾಗೂ ಗೌರಿ ಬಳಗ ವತಿಯಿಂದ ಇಂದು ತಹಶೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ; ಮನೆ ಮಾಲೀಕರ ಗಮನಕ್ಕೆ; ಮನೆ ಬಾಡಿಗೆಗೆ ಸರ್ಕಾರದ ಹೊಸ ನಿಯಮ; ಏನಿದೆ ಹೊಸ ರೂಲ್ಸ್, ಇಲ್ಲಿದೆ ಡಿಟೈಲ್ಸ್

ಕೊಲೆ ಪಾತಕರಿಗೆ ಸನ್ಮಾನ ಕರ್ನಾಟಕಕ್ಕೆ, ಮಾನವೀಯತೆಗೆ ಹಾಗೂ ಈ ದೇಶದ ಸಂವಿದಾನಕ್ಕೆ ಆಗಿರುವ ಅವಮಾನ, ಹಿಂಸೆಗೆ ನೀಡಿರುವ ಪ್ರಚೋದನೆ. ಗೌರಿಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳ ಮೇಲೆ ಕೊಲೆ ಪ್ರಚೋದನೆಯಡಿಯಲ್ಲಿ ಕೇಸ್ ದಾಖಲಿಸಬೇಕು ಹಾಗೂ ಗೌರಿ ಲಂಕೇಶ್ ಕೊಲೆಯ ವಿಚಾರಣೆಯನ್ನು ತ್ವರಿತಗೊಳಿಸಿ ಹಂತಕರಿಗೆ ಶೀಘ್ರವೇ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು.
ಇದನ್ನೂ ಓದಿ; BPL ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್; ಈ ತರಬೇತಿಗೆ ಅರ್ಜಿ ಆಹ್ವಾನ
ಹಾಗೆಯೇ ಮತ್ತೊಬ್ಬ ಗೌರಿಹಂತಕ ಶ್ರೀ ಕಾಂಟ್ರೊಂಗರಕ ಜಾಮೀನಿನ ಮೇಲೆ ಹೊರಬಂದ ಕೂಡಲೇ ಮಹಾರಾಷ್ಟ್ರದ ಚುನಾವಣೆಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸುತ್ತಿರುವುದನ್ನು ಅಲ್ಲಿಯ ರಾಜಕೀಯ ಪಕ್ಷಗಳು ಆತನನ್ನು ಆಹ್ವಾನಿಸಿರುವುದು ಗೃಹ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ತಹಶೀಲ್ದಾರ್ ಮೂಲಕ ಗೃಹ ಸಚಿವರಿಗೆ ಒತ್ತಾಯಿಸಲಾಯಿತು.
ಇದನ್ನೂ ಓದಿ; ಯಜಮಾನಿಯರಿಗೆ ಭರ್ಜರಿ ಗುಡ್ ನ್ಯೂಸ್; 2 ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ!; ಸೆಪ್ಟೆಂಬರ್ ತಿಂಗಳ ಹಣದ ಕುರಿತು ಬಿಗ್ ಅಪ್ಡೇಟ್












