ಖಾಂಡ್ಯ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ತಾಲೂಕಿನ ದೇವದಾನ ಪಂಚಾಯಿತಿ ವ್ಯಾಪ್ತಿಯ ಅನೆಬಿದ್ದ ಹಳ್ಳದ ಸೇತುವೆ ಶಿಥಿಲಗೊಂಡಿದ್ದು, ಆದರೂ ಇದೇ ರಸ್ತೆಯಲ್ಲಿ ಅವೈಜ್ಞಾನಿಕ ಮರಳು ಗಣಿಗಾರಿಕೆ ಕಾನೂನು ಬಾಹಿರವಾಗಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ; ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ಸ್ಕಾಲರ್ ಶಿಪ್; ಈ ಅರ್ಹತೆ ಹೊಂದಿದ್ದರೆ ಅರ್ಜಿ ಸಲ್ಲಿಸಿ

ಕಡಬಗೆರೆ ಹಾಗೂ ಖಾಂಡ್ಯ ರಸ್ತೆಯ ಮಧ್ಯದಲ್ಲಿ ಇರುವ ಅನೆಬಿದ್ದ ಹಳ್ಳದ ಸೇತುವೆ 10 ವರ್ಷದ ಹಿಂದೆ ಶಿಥಿಲಗೊಂಡಿದೆ. ಆದರೆ, ಗ್ರಾಮ ಪಂಚಾಯಿತಿಯ ಅವೈಜ್ಞಾನಿಕ ಕಾಮಗಾರಿಯಿಂದ ಇದೀಗ ಸಂಪೂರ್ಣ ಕುಸಿಯುವ ಹಂತಕ್ಕೆ ತಲುಪಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ; 10th, 12th ಪಾಸ್ ಆದವರಿಗೆ ಸಿಗಲಿದೆ 60,000 ಸ್ಕಾಲರ್ ಶಿಪ್; ಈ ಷರತ್ತು ಕಡ್ಡಾಯ
“ಕಡಬಗೆರೆ ಹಾಗೂ ಖಾಂಡ್ಯ ರಸ್ತೆಯ ಮಧ್ಯದಲ್ಲಿ ಇರುವ ಅನೆಬಿದ್ದ ಹಳ್ಳದ ಸೇತುವೆ ಶಿಥಿಲಗೊಂಡಿದ್ದು, ಈಗ ಗ್ರಾಮಪಂಚಾಯತ್ ನ ಅವೈಜ್ಞಾನಿಕ ಮರಳುಗಾರಿಕೆಯಿಂದಾಗಿ ಕುಸಿಯುವ ಹಂತಕ್ಕೆ ಬಂದಿದೆ. ಖಾಂಡ್ಯ, ಬೀದರ್, ಕದುವಂತಿ, ಬಸಪುರಕ್ಕೆ ಇದು ಒಂದೇ ಸಂಪರ್ಕ ಕಲ್ಪಿಸುವ ರಸ್ಥೆಯಾಗಿದ್ದು, ಈ ಭಾಗದಲ್ಲಿ ಪ್ರತಿನಿತ್ಯ ಕನಿಷ್ಟ 150 ವಿದ್ಯಾರ್ಥಿಗಳು, ಸಾವಿರಾರು ಜನಸಾಮಾನ್ಯರು, ಹತ್ತಾರು ಕೃಷಿಚಟುವಟಿಕೆಗೆ ಸಂಬಂಧಿಸಿದ ಓಡಾಟ ಇದೇ ರಸ್ತೆಯಲ್ಲಿ ಆಗುತ್ತದೆ. ಮರಳು ಗಣಿಗಾರಿಕೆ ಕಾನೂನು ಬಾಹಿರವಾಗಿ ನಡೆಯುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಗೊಳ್ಳಬೇಕಿದೆ.” -ಪ್ರವೀಣ್ ಖಾಂಡ್ಯ













