ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದ ಸ್ವಚ್ಛತೆಗೆ ಇನ್ನಷ್ಟು ಕ್ರಮ ಕೈಗೊಳ್ಳುವಂತೆ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳಿಗೆ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಸಾರ್ವಜನಿಕರಿಂದ ಮನವಿ ಪತ್ರ ಸಲ್ಲಿಸಿದರು.
ಇದನ್ನೂ ಓದಿ; ನಿಮ್ಮ ವಾಹನದ ಫಾಸ್ಟ್ ಟ್ಯಾಗ್ KYC ಆಗಿದ್ಯಾ?;ಈ ದಿನದೊಳಗೆ ಫಾಸ್ಟ್ ಟ್ಯಾಗ್ ಗಳ ಕೆವೈಸಿ ಪೂರ್ಣಗೊಳಿಸಲು ಡೆಡ್ ಲೈನ್

ಶೃಂಗೇರಿ ಧಾರ್ಮಿಕ ಕ್ಷೇತ್ರವಾಗಿ ಇಡೀ ದೇಶಾದ್ಯಂತ ಪ್ರಸಿದ್ದಿ ಪಡೆದಿದ್ದು, ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಮತ್ತು ಪ್ರವಾಸಿಗರು ಶೃಂಗೇರಿಗೆ ಭೇಟಿ ನೀಡುತ್ತಾರೆ. ಶೃಂಗೇರಿಯನ್ನ ಸ್ವಚ್ಚ ಮತ್ತು ಸುಂದರವಾಗಿಡುವಂಥದ್ದು ಎಲ್ಲರ ಕರ್ತವ್ಯವಾಗಿದ್ದು, ಶೃಂಗೇರಿಯ ಸ್ಥಳೀಯ ಸಂಸ್ಥೆಗಳು ಹಾಗೂ ಹಲವಾರು ಸ್ವಯಂ ಸೇವಾ ಸಂಘಟನೆಗಳು ಸಾಕಷ್ಟು ಸ್ವಚ್ಛತೆಯ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ; ಶಿವಮೊಗ್ಗ GTTC ಯಲ್ಲಿ ಉದ್ಯೋಗವಕಾಶ; ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ ಏನು?
ಆದಾಗ್ಯೂ ಇನ್ನಷ್ಟು ಸ್ವಚ್ಛ ಮತ್ತು ಸುಂದರವಾದ ಪಟ್ಟಣವನ್ನಾಗಿ ಮಾಡುವಲ್ಲಿ ಗ್ರಾಮಪಂಚಾಯ್ತಿಯ ಹಾಗೂ ಪಟ್ಟಣ ಪಂಚಾಯಿತಿಯ ಸಹಕಾರ ಅತಿ ಮುಖ್ಯವಾಗಿರುವುದರಿಂದ ಸ್ವಚ್ಛತೆಗೆ ಇನ್ನಷ್ಟು ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಹಾಗೂ ವಿದ್ಯಾರಣ್ಯಪುರ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಇದನ್ನೂ ಓದಿ; ಇಸ್ರೊದಿಂದ ಉದ್ಯೋಗಾವಕಾಶ
ಸ್ವಾಗತ ದ್ವಾರದ ಬಳಿಯೇ ಕಸದ ರಾಶಿ:
ಶೃಂಗೇರಿ ಪಟ್ಟಣದ ಮುಖ್ಯ ಸ್ವಾಗತ ದ್ವಾರವಾದ ವೆಲ್ಕಂ ಗೇಟ್ ಸರ್ಕಲ್ ಬಳಿ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರು ಈ ಕುರಿತು ಹಲವು ಬಾರಿ ದೂರು ನೀಡಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಚಿಕ್ಕಮಗಳೂರು: ದತ್ತಪಾದುಕೆ ಪೂಜೆ ಸಲ್ಲಿಸುವ ಅರ್ಚಕರಿಗಿಲ್ಲ ಸಂಬಳ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಳೆದ 13 ತಿಂಗಳ ಹಿಂದೆ ನೇಮಕವಾದ ದತ್ತಪೀಠದ ಇಬ್ಬರು ಅರ್ಚರಿಗೆ ಇದುವರೆಗೂ ಸಂಬಳ ನೀಡದಿರುವುದು ಬೆಳಕಿಗೆ ಬಂದಿದೆ.
ದತ್ತಪೀಠದಲ್ಲಿ ಕಳೆದ 2022 ಡಿಸೆಂಬರ್ 4 ರಂದು ಅಂದಿನ ಬಿಜೆಪಿ ಸರ್ಕಾರ ನೇಮಿಸಿದ್ದ ಇಬ್ಬರು ಹಿಂದು ಅರ್ಚಕರಿಗೆ ಇಂದಿನ ವರೆಗೂ ಗೌರವಧನವನ್ನೇ ನೀಡಿಲ್ಲ. ಬರೋಬ್ಬರಿ 13 ತಿಂಗಳು ಕಳೆದರೂ ಯಾವುದೇ ಸಂಬಳ ನೀಡುತ್ತಿಲ್ಲ.
ಶೃಂಗೇರಿ ಮೂಲದ ಶ್ರೀಧರ್ ಭಟ್ ಹಾಗೂ ಚಿಕ್ಕಬಳ್ಳಾಪುರ ಮೂಲದ ಸಂದೀಪ್ ಭಟ್ ಎಂಬುವವರನ್ನು ತ್ರಿಕಾಲ ಪೂಜೆ ನಿರ್ವಹಿಸಲು ಅಂದಿನ ರಾಜ್ಯ ಸರ್ಕಾರ ನೇಮಕ ಮಾಡಿತ್ತು. ಆದರೆ ಇದುವರೆಗೂ ಬಿಡಿಗಾಸನ್ನು ಸಹಾ ಮುಜರಾಯಿ ಇಲಾಖೆ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಬಜೆಟ್ ನಲ್ಲಿ ಅನುದಾನ ಮೀಸಲಿಡದೇ ಇರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.












