ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಬೌದ್ಧ ಮಹಾಸಭಾ ನೂತನ ಜಿಲ್ಲಾ ಅಧ್ಯಕ್ಷರಾಗಿ ವಕೀಲರಾದ ಅನಿಲ್ ಕುಮಾರ್ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ; ಮನೆ ಮಾಲೀಕರ ಗಮನಕ್ಕೆ; ಮನೆ ಬಾಡಿಗೆಗೆ ಸರ್ಕಾರದ ಹೊಸ ನಿಯಮ; ಏನಿದೆ ಹೊಸ ರೂಲ್ಸ್, ಇಲ್ಲಿದೆ ಡಿಟೈಲ್ಸ್

ರಾಜ್ಯ ಅಧ್ಯಕ್ಷರಾದ ಶಿವರಾಜ್ ಅವರು ಚಿಕ್ಕಮಗಳೂರಿನ ಬೌದ್ಧ ಬಿಹಾರದಲ್ಲಿ ನಡೆಸಿದ ಸಭೆಯಲ್ಲಿ ನೂತನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ನೂತನ ಜಿಲ್ಲಾ ಅಧ್ಯಕ್ಷರಾಗಿ ವಕೀಲರಾದ ಅನಿಲ್ ಕುಮಾರ್, ಉಪಾಧ್ಯಕ್ಷರಾಗಿ (ಸಂಸ್ಕಾರ) ಕೆ.ಸಿ ವಸಂತಕುಮಾರ್, ರಕ್ಷಣಾ ವಿಭಾಗದ ಉಪಾಧ್ಯಕ್ಷರಾಗಿ ತರೀಕೆರೆ ಎನ್ ವೆಂಕಟೇಶ್, ಪ್ರವಾಸ ವಿಭಾಗದ ಉಪಾಧ್ಯಕ್ಷರಾಗಿ ಹರೀಶ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್, ಸಹಕಾರ್ಯದರ್ಶಿಯಾಗಿ ಲಕ್ಷ್ಮಣ್, ಖಜಾಂಚಿಯಾಗಿ ಗಿರೀಶ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮರ್ಲೆ ಅಣ್ಣಯ್ಯ, ವಕೀಲರಾದ ಹಿರೇಮಗಳೂರು ರಮೇಶ್, ವೀರಭದ್ರಯ್ಯ, ಕುಮಾರ್, ಹಾಲಪ್ಪ, ಧರ್ಮೇಶ್, ರಂಗನಾಥ, ಟಿ ರಮೇಶ್, ಚಿದಂಬರ, ಗಣೇಶ್, ಪುಟ್ಟಸ್ವಾಮಿ, ಜೆ. ಡಿ ಲೋಕೇಶ್, ಹರಿಯಪ್ಪ, ಆರ್ ಶೇಖರ್, ಚಂದ್ರು, ಧರ್ಮಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ; BPL ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್; ಈ ತರಬೇತಿಗೆ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ. ಬಿ ನಿಂಗಯ್ಯ, ಎಂ. ಎಸ್ ಅನಂತು, ಅರ್ಜುನ್ ರಾವ್ ಕೇಸರಿ, ರಾಜಶೇಖರ ಮೂರ್ತಿ, ಕಂದಾಯ ಅಧಿಕಾರಿ ಮಂಜುನಾಥ್ ಇದ್ದರು.
ಇದನ್ನೂ ಓದಿ; ಯಜಮಾನಿಯರಿಗೆ ಭರ್ಜರಿ ಗುಡ್ ನ್ಯೂಸ್; 2 ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ!; ಸೆಪ್ಟೆಂಬರ್ ತಿಂಗಳ ಹಣದ ಕುರಿತು ಬಿಗ್ ಅಪ್ಡೇಟ್












