ಶೃಂಗೇರಿ: ಪಾರ್ಕಿಂಗ್ ವಿಚಾರವಾಗಿ ಪ್ರವಾಸಿಗರ ಅವಿವೇಕಿತನ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಪಟ್ಟಣದ ಭಾರತೀ ಬೀದಿಯಲ್ಲಿನ ಪಾರ್ಕಿಂಗ್ ವಿಚಾರವಾಗಿ ಪ್ರವಾಸಿಗರ ಅವಿವೇಕಿತನಕ್ಕೆ ಸ್ಥಳೀಯರು ಸುಸ್ತಾಗಿದ್ದಾರೆ.


ಇದನ್ನೂ ಓದಿ: ಪದವಿ ವಿದ್ಯಾರ್ಥಿಗಳಿಗೆ £7,500 ಸ್ಕಾಲರ್‌ ಶಿಪ್‌ ಲಭ್ಯ


ಪಟ್ಟಣದ ಮುಖ್ಯ ರಸ್ತೆಯಲ್ಲಿ ರಜಾ ದಿನಗಳಲ್ಲಂತೂ ಒಂದಲ್ಲ ಒಂದು ವಾಹನವನ್ನು ಪುಟ್ ಪಾತ್ ಮೇಲೆ ನಿಲ್ಲಿಸಲಾಗಿರುತ್ತದೆ. ಪೋಲಿಸ್ ಇಲಾಖೆಯ ಸಮೀಪವೂ ಕಾರುಗಳು ನಿರಂತರವಾಗಿ ಪುಟ್ ಪಾತ್ ಮೇಲೆ ನಿಂತಿರುತ್ತವೆ. ಈ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳದ ಇಲಾಖೆಯ ನಿರ್ಲಕ್ಷ್ಯ ವರ್ತನೆಗೆ ಭಾರತೀಬೀದಿ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಪುಟ್ ಪಾತ್ ನಲ್ಲಿ ಕೆ.ಇ.ಬಿ ವಿದ್ಯುತ್ ಸಂಪರ್ಕವಿದ್ದು ಕಾರಿನವರ ನಿರ್ಲಕ್ಷ್ಯದಿಂದ ಒಂದು ವರ್ಷದ ಹಿಂದೆ ಕೇಬಲ್ ಸುಟ್ಟು ಹೋದ ಘಟನೆ ಸಹ ನಡೆದಿತ್ತು.


ಇದನ್ನೂ ಓದಿ: ಅಕ್ಷಯ ತೃತೀಯದಂದೇ ಗಜಕೇಸರಿ ರಾಜಯೋಗ…; ಈ 5 ರಾಶಿಯವರಿಗೆ ಕುಬೇರನ ಕೃಪೆ!


ಕಾರಿನವರಿಗೆ ಯಾವ ದಿನ ಎಲ್ಲಿ ನಿಲುಗಡೆ ಮಾಡಬೇಕು ಎಂದು ಫಲಕವಿದ್ದರೂ ಮನಬಂದಲ್ಲಿ ವಾಹನ ನಿಲುಗಡೆ ಮಾಡುವುದು, ಗಂಟೆಗಟ್ಟಲೆ ಪುಟ್ ಪಾತ್ ಮೇಲೆ ಕಾರು ನಿಲುಗಡೆಯಿಂದ ಪಾದಚಾರಿಗಳಿಗೆ ಅತ್ತ ಕೆಳಗೆ ಇಳಿಯಲಾಗದೇ ಪರದಾಡುವ ದೃಶ್ಯ ಸಾಮಾನ್ಯವಾಗಿದೆ.

ಭಾರತೀಬೀದಿಯಲ್ಲಿ ಹಲವು ಲಾಡ್ಜ್ ಗಳಿದ್ದು, ಅಲ್ಲಿ ತಂಗುವ ಪ್ರವಾಸಿಗರ ವಾಹನದ ಪಾರ್ಕಿಂಗ್ ಕುರಿತು ಲಾಡ್ಜ್ ಮಾಲೀಕರು ಸರಿಯಾದ ಜವಾಬ್ದಾರಿ ತೆಗೆದುಕೊಳ್ಳದೆ ಇರುವುದು ಸಹ ಈ ಸಮಸ್ಯೆಗೆ ಒಂದು ಕಾರಣವಾಗಿದೆ, ಇನ್ನು ಗಾಂಧಿ ಮೈದಾನದಲ್ಲಿ ಪಾರ್ಕ್ ಮಾಡಿದರೆ ಶುಲ್ಕ ಪಾವತಿಸಬೇಕು ಎಂಬ ಕಾರಣಕ್ಕೆ ಕೆಲವು ಪ್ರವಾಸಿಗರು ಮುಖ್ಯ ರಸ್ತೆಯಲ್ಲಿಯೇ ನಿಲ್ಲಿಸುತ್ತಾರೆ. ಇಲಾಖೆಯವರು ಇದರ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಬಿಒಬಿ ಬ್ಯುಸಿನೆಸ್‌ ಡೆವಲಪ್ಮೆಂಟ್ ಮ್ಯಾನೇಜರ್‌ ನೇಮಕ; ಪಿಯುಸಿ, ಪದವೀಧರರು ಅರ್ಜಿ ಸಲ್ಲಿಸಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.