ಶೃಂಗೇರಿಯ ಗಾಂಧಿ ಮೈದಾನ ಪಾರ್ಕಿಂಗ್ ಗೊಂದಲ: ನಿಯಮ ಸ್ಪಷ್ಟಪಡಿಸುವಂತೆ ಶಾಸಕರು–ಅಧಿಕಾರಿಗಳಿಗೆ ಒತ್ತಾಯ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಪುಣ್ಯ ಕ್ಷೇತ್ರ ಶೃಂಗೇರಿಗೆ ಆಗಮಿಸುವ ಪ್ರವಾಸಿಗರ ವಾಹನ ನಿಲುಗಡೆಗಾಗಿ ತುಂಗಾ ನದಿಯ ಪಕ್ಕದಲ್ಲಿರುವ ಗಾಂಧಿ ಮೈದಾನದಲ್ಲಿ ಶೃಂಗೇರಿ ಪಟ್ಟಣ ಪಂಚಾಯ್ತಿ ಈ ಹಿಂದೆ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತಿತ್ತು. ಪಾರ್ಕಿಂಗ್ ಟೆಂಡರ್ ನೀಡುವ ಮೂಲಕ ಪಟ್ಟಣ ಪಂಚಾಯ್ತಿಗೆ ಗಾಂಧಿ ಮೈದಾನವು ಪ್ರಮುಖ ಆದಾಯದ ಮೂಲವಾಗಿತ್ತು.


ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ; ಸೋಲಾರ್ ಪಂಪ್ ಸೆಟ್‌ಗಳಿಗೆ ಅರ್ಜಿ ಆಹ್ವಾನ


ಆದರೆ ಅದು ಹೊಳೆ ಕರಾಬು ಪ್ರದೇಶ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಗಾಂಧಿ ಮೈದಾನದಲ್ಲಿ ಪಟ್ಟಣ ಪಂಚಾಯ್ತಿಯಿಂದ ಯಾವುದೇ ವಾಹನ ಪಾರ್ಕಿಂಗ್ ಸೌಲಭ್ಯ ಇರುವುದಿಲ್ಲ ಎಂದು ಘೋಷಿಸಲಾಗಿತ್ತು.

“ಶೃಂಗೇರಿಯ ಗಾಂಧಿ ಮೈದಾನವು ಹೊಳೆ ಕರಾಬು ಪ್ರದೇಶ ಎಂದು ಹೇಳಿ ಪಾರ್ಕಿಂಗ್ ವ್ಯವಸ್ಥೆಯನ್ನು ರದ್ದುಪಡಿಸಲಾಗಿತ್ತು. ಇದರಿಂದ ಪಟ್ಟಣ ಪಂಚಾಯ್ತಿಗೆ ಆದಾಯವೂ ನಿಂತಿತ್ತು. ಆದರೆ ಈಗ ಮತ್ತೆ ಅಲ್ಲೇ ಪ್ರವಾಸಿ ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡುತ್ತಿರುವುದು ಅಚ್ಚರಿಯ ಸಂಗತಿ. ಕಾನೂನು ಒಂದೇ ಆಗಿದ್ದರೆ ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗಬೇಕು. ಪಾರ್ಕಿಂಗ್‌ಗೆ ಅವಕಾಶ ನೀಡಲು ಯಾವುದೇ ಲಿಖಿತ ಆದೇಶವಿದ್ದರೆ ಅದನ್ನು ಸಾರ್ವಜನಿಕಗೊಳಿಸಬೇಕು.”- ಹರೀಶ್‌ ವಿ ಶೆಟ್ಟಿ, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ

ಈ ಕುರಿತು ವಿಕಾಸ್ ಗೌಡ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಕೇಳಿದಾಗ, ಗಾಂಧಿ ಮೈದಾನದಲ್ಲಿ ಪ್ರವಾಸಿ ವಾಹನಗಳಿಗೆ ಪಾರ್ಕಿಂಗ್ ಮಾಡಲು ಅವಕಾಶವಿಲ್ಲ ಎಂಬುದಾಗಿ ಉತ್ತರ ನೀಡಲಾಗಿದೆ. ಆದರೆ ಇತ್ತೀಚೆಗೆ ಮತ್ತೆ ಅಲ್ಲಿಗೆ ಪ್ರವಾಸಿ ವಾಹನಗಳನ್ನು ನಿಲ್ಲಿಸಲು ಅವಕಾಶ ಹೇಗೆ ನೀಡಲಾಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸಿದೆ


ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸರ್ಕಾರ ಆದೇಶ


ಗಾಂಧಿ ಮೈದಾನವು ಹೊಳೆ ಕರಾಬು ಪ್ರದೇಶವಾಗಿದ್ದರೆ, ವಾಹನ ಪಾರ್ಕಿಂಗ್‌ಗೆ ಯಾವ ನಿಯಮದಡಿ ಮತ್ತು ಯಾರ ಅನುಮತಿಯೊಂದಿಗೆ ಅವಕಾಶ ನೀಡಲಾಗಿದೆ ಎಂಬುದನ್ನು ಶಾಸಕರು ಹಾಗೂ ಸಂಬಂಧಿಸಿದ ತಾಲೂಕು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಲಾಗಿದೆ.

ಗಾಂಧಿ ಮೈದಾನದ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಸ್ಪಷ್ಟ ಹಾಗೂ ಲಿಖಿತ ಆದೇಶ ಹೊರಡಿಸಿ ಈ ಗೊಂದಲ ನಿವಾರಿಸಬೇಕಿದೆ.

“ಗಾಂಧಿ ಮೈದಾನವನ್ನು ಹೊಳೆ ಕರಾಬು ಪ್ರದೇಶ ಎಂದು ಘೋಷಿಸಿ ಪಟ್ಟಣ ಪಂಚಾಯ್ತಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲು ಅವಕಾಶವಿಲ್ಲ ಎಂದು ಈಗಾಗಲೇ ಆದೇಶಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಲ್ಲೂ ಪಾರ್ಕಿಂಗ್ ನಿಷೇಧವಿದೆ ಎಂದು ಸ್ಪಷ್ಟ ಉತ್ತರ ಬಂದಿದೆ. ಇಷ್ಟಾದರೂ ಇತ್ತೀಚೆಗೆ ಮತ್ತೆ ಪ್ರವಾಸಿ ವಾಹನಗಳಿಗೆ ಪಾರ್ಕಿಂಗ್ ಅವಕಾಶ ನೀಡಲಾಗುತ್ತಿದೆ. ಇದು ನಿಯಮ ಉಲ್ಲಂಘನೆಯಾಗಿದೆ. ಯಾವ ನಿಯಮದಡಿ, ಯಾರ ಅನುಮತಿಯೊಂದಿಗೆ ಈ ವ್ಯವಸ್ಥೆ ಮಾಡಲಾಗಿದೆ ಎಂಬುದನ್ನು ಶಾಸಕರು ಹಾಗೂ ತಾಲೂಕು ಅಧಿಕಾರಿಗಳು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು.”- ವೇಣುಗೋಪಾಲ್, ಪಟ್ಟಣ ಪಂಚಾಯಿತಿ ಅಧ್ಯಕ್ಷ


ಇದನ್ನೂ ಓದಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಯೋಜನೆ ಜಾರಿ


Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.