ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಪ್ರವಾಸಿ ತಾಣವಾಗಿದ್ದು, ಇಲ್ಲಿಗೆ ಪ್ರವಾಸಿಗರು ಅಡ್ಡಾದಿಡ್ಡಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಪ್ರಯಾಣಿಕರು ಹಾಗೂ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ

ಕೊಟ್ಟಿಗೆಹಾರವು ಹೊರನಾಡು, ಧರ್ಮಸ್ಥಳ, ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ವಾರಾಂತ್ಯದಲ್ಲಿ ಈ ಪ್ರದೇಶ ಜನರಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ, ಇಲ್ಲಿಗೆ ಬರುವ ಪ್ರವಾಸಿಗರು ನಗರದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವಂತೆ ಈ ಭಾಗದಲ್ಲೂ ಪಾರ್ಕಿಂಗ್ ಮಾಡಿ ಸಾಗುತ್ತಾರೆ. ಆದರೆ, ಇತರೆ ವಾಹನಗಳಿಗೆ ಇದರಿಂದ ತೊಂದರೆಯಾಗುತ್ತಿದೆ. ವಾಹನ ನಿಲ್ಲಿಸುವವರಿಗೆ ದಂಡದ ಬಿಸಿ ಮುಟ್ಟಿಸಬೇಕಿದೆ. ಆದರೆ, ಪೋಲಿಸರು ಕಾಣುತಿಲ್ಲ. ವಾಹನಗಳ ಪಾರ್ಕಿಂಗ್ ಬಗ್ಗೆ ಪ್ರವಾಸಿಗರು ಹೆಚ್ಚು ಗಮನ ಹರಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ 18 ಸಾವಿರ ರೈತರಿಗೆ ಗುಡ್ ನ್ಯೂಸ್; ಸೌರ ಪಂಪ್ ಸೆಟ್ ಗಾಗಿ ನೋಂದಣಿ ಆರಂಭ; ರೈತರೇ ಹೀಗೆ ಅರ್ಜಿ ಸಲ್ಲಿಸಿ
“ಪ್ರವಾಸಿಗರು ವಾಹನ ನಿಲುಗಡೆ ಬೇಕಾಬಿಟ್ಟಿ ರಸ್ತೆ ಮಧ್ಯದಲ್ಲಿಯೇ ನಿಲ್ಲಿಸಿ ಹೋಟೆಲ್ ಅಂಗಡಿಗೆ ತೆರಳುತ್ತಾರೆ. ಇದರಿಂದ ಇನ್ನಿತರ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ತುಂಬಾ ತೊಂದರೆಯಾಗುತ್ತದೆ. ವಾರದಲ್ಲಿ ಶನಿವಾರ ಹಾಗೂ ಭಾನುವಾರ ಪ್ರವಾಸಿಗರು ಹೆಚ್ಚು ಇರುವುದರಿಂದ ಈ ಎರಡು ದಿನ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಪೊಲೀಸರನ್ನು ನಿಯೋಜಿಸಬೇಕು.”– ಸಂಜಯ್ ಗೌಡ ಕೊಟ್ಟಿಗೆಹಾರ.
(ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ಯಶಸ್ವಿನಿ ಯೋಜನೆ ಫಲಾನುಭವಿಗಳಿಗೆ ದಿಢೀರನೆ ಬಂತು ಮತ್ತೊಂದು ಗುಡ್ ನ್ಯೂಸ್…!; ಏನದು ತಿಳಿಯಿರಿ
ಮೂಡಿಗೆರೆ: ಮರ ಕಡಿಯುವಾಗ ತಲೆ ಮೇಲೆ ಮರ ಬಿದ್ದು ಯುವಕ ಸಾವು
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮರ ಕಡಿಯುವಾಗ ತಲೆ ಮೇಲೆ ಮರ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಬಪ್ಪಳಿಕೆಯಲ್ಲಿ (ಹೆಗ್ಗುಡ್ಲು ಎಸ್ಟೇಟಿನಲ್ಲಿ) ನಡೆದಿದೆ. ಅಬ್ದುಲ್ ಅಜೀಜ್ (25) ಮೃತ ದುರ್ದೈವಿ.
ಕೇರಳದಿಂದ ಟಿಂಬರ್ ಕಡಿಯಲು ಅಪ್ಪ-ಮಗ ಬಂದಿದ್ದು, ಹೆಗ್ಗುಡ್ಲು ಎಸ್ಟೇಟಿನಲ್ಲಿ ಮರದ ಮೇಲೆ ಅಬ್ದುಲ್ ಅಜೀಜ್ ನ ತಂದೆ ಮರ ಕಡಿಯುತ್ತಿದ್ದ ವೇಳೆ, ಅದೇ ಮರ ಕೆಳಗೆ ಇದ್ದ ಅಬ್ದುಲ್ ಅಜೀಜ್ ನ ತಲೆ ಮೇಲೆ ಬಿದ್ದಿದೆ. ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ಘಟನೆ ಕುರಿತು ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















