ಹಿಂದೂಗಳ ಮೇಲೆ ಭಯೋತ್ಪಾದಕ ದಾಳಿ : ಜಿಲ್ಲಾದ್ಯಂತ ಬೀದಿಗಿಳಿದ ಭಜರಂಗಿಗಳು

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕಾಶ್ಮೀರದ ಪಹಲ್ಗಾಮ್‌ ನಲ್ಲಿ 26 ಪ್ರವಾಸಿ ಹಿಂದೂಗಳನ್ನು ಕೊಂದು ಹಾಕಿದ ಪಾಕಿಸ್ತಾನದ ಉಗ್ರ ಸಂಘಟನೆ ಮಾಡಿದ ಕೃತ್ಯ ಅತ್ಯಂತ ಹೇಯಕರವಾದ ಘಟನೆಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ದಿವೀರ್ ಮಲ್ನಾಡ್ ಹೇಳಿದರು.

ಪಟ್ಟಣದ ಕೆವಿಆ‌ರ್ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಪಹಲ್ಗಾಮ್ ಉಗ್ರರ ದಾಳಿಯನ್ನು ಖಂಡಿಸಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದವರ ರಕ್ತ ನಿರಂತರವಾಗಿ ನೆಲದಲ್ಲಿ ಹರಿಯುತ್ತಿದೆ. ಈ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡಿ ಈ ಹೇಯ ಕೃತ್ಯದ ಹೋರಾಟದ ಸಂಕಲಕ್ಕೆ ಕೈಜೋಡಿಸಬೇಕಿದೆ. ಜಾತ್ಯಾತೀತ ದೇಶ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಮ್ಮ ದೇಶದಲ್ಲಿ ಮಾನವೀಯ ಮೌಲ್ಯ ಬರಿದಾಗಿದೆ. ಅಲ್ಪಸಂಖ್ಯಾತರನ್ನು ಓಲೈಸುವ ಪಕ್ಷದವರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಸಂಘಟನೆಗಳ ಅಟ್ಟಹಾಸ ಮಿತಿ ಮೀರಲಿದೆ ಎಂದರು.

ಇದನ್ನೂ ಓದಿ: ಪೌರ ಕಾರ್ಮಿಕರ ಸೇವೆ ಕಾಯಂ, ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಜಾರಿ; CM ಸಿದ್ದರಾಮಯ್ಯ ಘೋಷಣೆ!

ಸನಾತನ ಧರ್ಮ ಅತ್ಯಂತ ಪ್ರಾಚೀನವಾದ ಧರ್ಮ. ನಮ್ಮ ಧರ್ಮದಲ್ಲಿ ಪರಂಪರೆಯಿದೆ. ಸಂಸ್ಕೃತಿ ಇದೆ. ಸನಾತನ ಧರ್ಮದ ಸರ್ವರೂ ಒಗ್ಗೂಡಿದಾಗ ಮಾತ್ರ ಉಗ್ರರ ಅಟ್ಟಹಾಸ ಕಡಿಮೆಯಾಗಲು ಸಾಧ್ಯ. 2019ರ ಫೆಬ್ರವರಿಯಲ್ಲಿ 47 ಸಿ.ಆರ್ .ಪಿ.ಎಫ್ ಸಿಬ್ಬಂದಿಯನ್ನು ಕೊಂದ ಪುಲ್ವಾಮ ದಾಳಿಯ ನಂತರ ಕಾಶ್ಮೀರದಲ್ಲಿ ನಡೆದ ಅತ್ಯಂತ ಹೇಯ ಭಯೋತ್ಪಾದಕ ದಾಳಿ ಇದಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ವೇಣುಗೋಪಾಲ್ ಹೇಳಿದರು.

ಪ್ರತಿಭಟನಾ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ದಿವೀರ್ ಮಲ್ನಾಡ್, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಶೃಂಗೇರಿ ಜಿಲ್ಲೆ ರವಿ ಸಂಜಯ್, ಜಿಲ್ಲಾ ಗೊರಕ್ಷಾಕ್ ನಾಗೇಶ್ ಶೆಟ್ಟಿ, ತಾಲ್ಲೂಕು ಸಂಯೋಜಕ್ ಸಂತೋಷ್ ಕೆರೆಮನೆ, ತಾಲ್ಲೂಕು ಸಹ ಸಂಯೋಜಕ್ ಸುನಿಲ್ ಕಿಗ್ಗ, ಎಚ್.ಕೆ. ನೂತನ್ ಕುಮಾರ್, ಪ.ಪಂ ಸದಸ್ಯರಾದ ಹರೀಶ್ ವಿ. ಶೆಟ್ಟಿ, ತಾಲ್ಲೂಕು ಗೊರಕ್ಷಕ್ ಮತ್ತು ಎಲ್ಲಾ ಬಜರಂಗದಳ ಎಲ್ಲಾ ಕಾರ್ಯಕರ್ತರು, ಬಿಜೆಪಿ ಎಲ್ಲಾ ಮುಖಂಡ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


ಎನ್.ಆರ್.ಪುರ: ಸಂಘಟಿತರಾಗದಿದ್ದರೆ ಹಿಂದುಗಳಿಗೆ ಉಳಿಗಾಲವಿಲ್ಲ
ಎನ್.ಆರ್.ಪುರ: ಹಿಂದುಗಳು ಎನ್ನುವ ಕಾರಣಕ್ಕೆ ಗುಂಡು ಹೊಡೆದು ಸಾಯಿಸುವ ಸ್ಥಿತಿ ನಿರ್ಮಾಣವಾಗಿದ್ದು ಹಿಂದುಗಳು ಸಂಘಟಿತರಾಗದಿದ್ದರೆ ದೇಶದಲ್ಲಿ ಉಳಿಗಾಲವಿಲ್ಲ ಎಂದು ಮಾಜಿ ಸಚಿವ ಡಿ. ಎನ್. ಜೀವರಾಜ್ ಹೇಳಿದರು.

ಪಹಲ್ಲಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಉಗ್ರರ ದಾಳಿಗೆ ಬಲಿಯಾದವರಿಗೆ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಿಶ್ವ ಹಿಂದು ಪರಿಷ್ತ್, ಬಜರಂಗದಳ ಹಾಗೂ ತಾಲೂಕು ಬಿಜೆಪಿ ಘಟಕದಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಇಸ್ಲಾಮಿಕ್ ಉಗ್ರತ್ವವನ್ನು ಸಮರ್ಥನೆ ಮಾಡುತ್ತಿರುವ ಕಾಂಗ್ರೆಸಿಗರೇ, ಮುಂದೊಂದು ದಿನ ನಿಮ್ಮ ಮೇಲೂ ದಾಳಿಯಾದಾಗ ನಿಮ್ಮನ್ನ ಕಾಪಾಡೋಕೆ RSS, ಬಿಜೆಪಿ ಹಾಗೂ ಭಜರಂಗದಳದ ಕಾರ್ಯಕರ್ತರೇ ಬರೋದು ನೆನಪಿಡಿ. ಮೊದಲು ಹಿಂದೂಗಳಾಗಿ ನಂತರ ರಾಜಕೀಯ ಮಾಡಿ, ಎಂದು ರಾಬರ್ಟ್ ವಾದ್ರಾ ವಿವಾದಾತ್ಮಕ ಹೇಳಿಕೆ ಕುರಿತು ಮಾಜಿ ಶಾಸಕ ಜೀವರಾಜ್ ಪ್ರತಿಕ್ರಿಯಿಸಿ ಕಿಡಿಕಾರಿದರು.

ಇದನ್ನೂ ಓದಿ: 2PUC ಅಲ್ಲಿ 60% ತೆಗೆದಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ; ಮಿಸ್‌ ಮಾಡ್ದೆ ಈ ಸುದ್ದಿ ಓದಿ

ಮೇಣದ ಬತ್ತಿ ಬೆಳಗಿಸಿ ಮೌನಾಚರಣೆ ಮಾಡಿ ಮೃತರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಮುಖಂಡರಾದ ವಿ.ನಿಲೇಶ್, ಕೆಸವೆ ಮಂಜುನಾಥ್, ಅಶ್ವಿನ್, ಪ್ರೀತಂ, ಲೋಕೇಶ್, ಎಂ.ಎನ್.ನಾಗೇಶ್, ಬಿ.ಎಸ್.ಆಶೀಶ್‌ ಕುಮಾರ್, ವೈ.ಎಸ್.ರವಿ. ಸುರಭಿ ರಾಜೇಂದ್ರ, ಎನ್.ಎಂ.ಕಾಂತರಾಜ್, ಜಯರಾಮ್, ಡಿ.ಆರ್.ಶ್ರೀನಾಥ್, ಪ್ರೀತಮ್, ಪ್ರವೀಣ್ ಮತ್ತಿತರರಿದ್ದರು.


ಚಿಕ್ಕಮಗಳೂರು: ಭಯೋತ್ಪಾದಕರನ್ನು ಸೆರೆಹಿಡಿದು ಭಯೋತ್ಪಾದನೆ ಬೇರುಸಹಿತ ಕಿತ್ತುಹಾಕಬೇಕು
ಚಿಕ್ಕಮಗಳೂರು: ಪಹಲ್ಗಾಮ್‌ ನಲ್ಲಿ 26 ಜನರನ್ನು ಹತ್ಯೆ ಮಾಡಿರುವ ಭಯೋತ್ಪಾದಕರ ಕೃತ್ಯ ಖಂಡಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳದ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಬಸವನಹಳ್ಳಿಯ ಶ್ರೀ ಓಂಕಾರೇಶ್ವರ ಗಣಪತಿ ದೇವಸ್ಥಾನದಿಂದ ಆಜಾದ್‌ ಪಾರ್ಕ್ ಸರ್ಕಲ್ ವರೆಗೆ ಮೆರವಣಿಗೆ ನಡೆಸಿದರು. ಆಜಾದ್ ಪಾರ್ಕ್ನಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಯಿತು. ಅಮಾಯಕ ಹಿಂದು ಪ್ರವಾಸಿಗರನ್ನು ಹುಡುಕಿ ಕೊಂದಿರುವ ಭಯೋತ್ಪಾದಕರನ್ನು ಸೆರೆಹಿಡಿದು ಭಯೋತ್ಪಾದನೆ ಬೇರುಸಹಿತ ಕಿತ್ತುಹಾಕಬೇಕು. ಇದಕ್ಕಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.


ಕಳಸ: ಜಾತಿ ಸಂಘಟನೆ ಬಿಟ್ಟು ಹಿಂದು ಸಂಘಟನೆ ಗಟ್ಟಿಗೊಳಿಸಬೇಕು:
ಕಾಶ್ಮೀರದ ಪಹಲ್ಲಾಮ್‌ನಲ್ಲಿ ಹಿಂದು ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳ ಹಾಗೂ ವಿವಿಧ ಕ್ಷೇತ್ರ ಕಳಸ ಪ್ರಖಂಡದಿಂದ ಪ್ರತಿಭಟನೆ ನಡೆಯಿತು. ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕಳಸ ಪೊಲೀಸ್ ಠಾಣೆ ಸಮೀಪ ಮುಖ್ಯ ರಸ್ತೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಜರಂಗದಳ ಜಿಲ್ಲಾ ಸಂಚಾಲಕ ಅಜಿತ್ ಕುಲಾಲ್ ಮಾತನಾಡಿ, ಜಾತಿಗಳ ಸಂಘಟನೆಯಲ್ಲಿ ನಾವೆಲ್ಲ ತೊಡಗಿದ್ದೇವೆ. ಆದರೆ ಮುಸಲ್ಮಾನ ಉಗ್ರರು ಹಿಂದುಗಳನ್ನು ಗುಂಡಿಕ್ಕಿ ಕೊಲ್ಲುತ್ತಿದ್ದಾರೆ. ಜಾತಿ ಸಂಘಟನೆಯನ್ನು ಬಿಟ್ಟು ಮೊದಲು ನಾವು ಹಿಂದು ಸಂಘಟನೆಯನ್ನು ಗಟ್ಟಿಗೊಳಿಸಬೇಕಾಗಿದೆ ಎಂದು ಹೇಳಿದರು.


ಹಿಂದೂ ಹಿತ ರಕ್ಷಣಾ ಸಮಿತಿ ತೀರ್ಥಹಳ್ಳಿ ನೇತೃತ್ವದಲ್ಲಿ ಪ್ರತಿಭಟನೆ:
ತೀರ್ಥಹಳ್ಳಿಯಲ್ಲಿ ಹಿಂದೂ ಹಿತ ರಕ್ಷಣಾ ಸಮಿತಿ ತೀರ್ಥಹಳ್ಳಿ ಇವರ ನೇತೃತ್ವದಲ್ಲಿ ಕಾಶ್ಮೀರ, ಟೆರರಿಸ್ಟ್ ಅಟ್ಯಾಕ್ ಖಂಡಿಸಿ ಪಟ್ಟಣದಲ್ಲಿ ಏಪ್ರಿಲ್ 24 ರಂದು ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ತಾಲೂಕ್ ಆಫೀಸ್ ಆವರಣದಲ್ಲಿ ಸಭೆಯನ್ನು ನಡೆಸಿ, ನಂತರ ತಾಲೂಕು ದಂಡಾಧಿಕಾರಿಗೆ ಮನವಿ ಪತ್ರ ನೀಡಲಾಯಿತು.

ಹೆದ್ದೂರ್ ನವೀನ್ ಮಾತನಾಡಿ ಪ್ರತಿಯೊಂದು ಕುಟುಂಬಗಳಿಗೂ ಕೂಡ ಭಯೋತ್ಪಾದನೆ ದಾಳಿ ಆಗುವ ಮೊದಲೇ ನಾವು ಎಚ್ಚೆತ್ತುಕೊಳ್ಳಬೇಕು. ಮಕ್ಕಳಿಗೆ ನಾವು ಒಳ್ಳೆಯ ವಿದ್ಯಾಭ್ಯಾಸ ಕೊಡಬಹುದು ಆದರೆ ಸಮಾಜದಲ್ಲಿ ಇರುವಂತಹ ವಾತಾವರಣ ಸರಿ ಇಲ್ಲ ಎಂದರೆ ನಮ್ಮ ಬದುಕು ಚೆನ್ನಾಗಿ ಇರುವುದಿಲ್ಲ. ನಮ್ಮ ದೇಶ ಯಾವುದೇ ದೇಶಕ್ಕೂ ಆಕ್ರಮಣ ಕೂಡ ಮಾಡಿಲ್ಲ ವಸುದೈವ ಕುಟುಂಬಕಂ ಎನ್ನುವ ಸಂದೇಶವನ್ನು ಇಟ್ಟುಕೊಂಡು ಮುಂದೆ ಸಾಗುತ್ತಿದೆ. ಕೇಂದ್ರ ಸರ್ಕಾರದವರು ಕಠಿಣವಾದ ಕ್ರಮವನ್ನು ಕೈಗೊಳ್ಳಲೇಬೇಕು ಎಂದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.