ಜಿಲ್ಲೆಯಾದ್ಯಂತ ರಸ್ತೆಗಿಳಿದಿದ್ದ ಘನ ವಾಹನಗಳು ವಶಕ್ಕೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಜೋರಾಗಿರುವ ಕಾರಣ ಭೂಕುಸಿತ, ಸೇತುವೆ ಕುಸಿಯುವ ಸಂಭವವಿರುವುದರಿಂದ ಘನ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶ ನೀಡಿರುವ ಬೆನ್ನಲ್ಲೇ ಪೊಲೀಸರು ಜಿಲ್ಲೆಯ ವಿವಿಧೆಡೆ ಸಂಚಾರ ಮಾಡುತ್ತಿದ್ದ ಹಲವು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.


ಇದನ್ನೂ ಓದಿ: ಅಕ್ರಮ ಪಂಪ್ ಸೆಟ್ ಹೊಂದಿರುವವರಿಗೆ ಗುಡ್ ನ್ಯೂಸ್; ಡೀಸೆಲ್ ಪಂಪ್ ಸೆಟ್ ಹೊಂದಿರುವವರಿಗೂ ಮುಖ್ಯ ಮಾಹಿತಿ; ಮಿಸ್ ಮಾಡ್ದೆ ಈ ಸುದ್ದಿ ಓದಿ


ರಸ್ತೆಗಳ ಮೇಲೆ 11 ಸಾವಿರ ಕೆಜಿಯ ಮೇಲ್ಪಟ್ಟು ತೂಕ ಹೊರುವ ಘನ ವಾಹನಗಳ ಓಡಾಟವನ್ನು ನಿಷೇಧಿಸಲು ಆದೇಶಿಸಿರುವ ಹಿನ್ನೆಲೆಯಲ್ಲಿ ಆಲ್ದೂರಿನಲ್ಲಿ ಮೂರು, ಕೊಪ್ಪ ತಾಲೂಕಿನಲ್ಲಿ ಒಂದು, ಬಾಳೆಹೊನ್ನೂರಿನಲ್ಲಿ ಒಂದು, ಜಯಪುರದಲ್ಲಿ ಎರಡು ಮತ್ತು ಮಲ್ಲಂದೂರಿನಲ್ಲಿ ಎರಡು ಒಟ್ಟು 9 ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.


ಇದನ್ನೂ ಓದಿ: ಎಲ್ಲಾ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್; HSRP ನಂಬರ್ ಪ್ಲೇಟ್ ನಿಯಮ ಚೇಂಜ್


ಈ ಮೂಲಕ ಪೊಲೀಸ್ ಇಲಾಖೆ ಮನವಿ ಮಾಡಿದ್ದು ಮಳೆಗಾಲ ಮುಗಿಯುವವರೆಗೂ 11000 ಕೆಜಿಗೂ ಹೆಚ್ಚು ತೂಕ ಹೊರುವ ವಾಹನಗಳನ್ನು ರಸ್ತೆಗಿಳಿಸದಂತೆ ತಿಳಿಸಿದ್ದಾರೆ.


ಇದನ್ನೂ ಓದಿ: 3ನೇ ಕಂತಿನ ಬೆಳೆ ಪರಿಹಾರದ ಹಣ ಜಮಾ!; ಮೊಬೈಲ್ ನಲ್ಲೇ ಹೀಗೆ ಚೆಕ್ ಮಾಡಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.