ಶೃಂಗೇರಿ: ಕಾಡಾನೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಹಾಲಂದೂರು ಹಾಗೂ ಮಸಿಗೆ ಗ್ರಾಮದಲ್ಲಿ ಗಂಡಾನೆ ಒಂದು ಓಡಾಡುತ್ತಿರುವುದು ಕಂಡುಬಂದಿದ್ದು, ಇದರಿಂದ ಗ್ರಾಮದ ಜನತೆ ಕಂಗಾಲಾಗಿದ್ದಾರೆ.


ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ; ರೇಷನ್‌ ಕಾರ್ಡ್‌ ಪಡೆಯಲು ಬೇಕಾದ ಅರ್ಹತೆಗಳೇನು; ಇಲ್ಲಿದೆ ಪೂರ್ಣ ವಿವರ


ಹಾಲಂದೂರು ಭಾಗದಲ್ಲಿ ಕಾಡಾನೆಯ ಹೆಚ್ಚೆಯ ಗುರುತು ಕಂಡಿದ್ದು, ಈ ಕುರಿತು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.  ಇತ್ತೀಚೆಗೆ ಬಾಳೆಹೊನ್ನೂರು ಸಮೀಪದಲ್ಲಿ ಕಾಡಾನೆ ಪ್ರತ್ಯಕ್ಷವಾಗಿತ್ತು. ಆ ಕಾಡಾನೆಗಳೇ ಇದೀಗ ಶೃಂಗೇರಿ ಭಾಗದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅರಣ್ಯ ಇಲಾಖೆಯಿಂದ ಹಾಲಂದೂರು ಹಾಗೂ ಮಸಿಗೆ ಭಾಗದ ಮನೆ ಮನೆಗೆ ತೆರಳಿ ಎಚ್ಚರದಿಂದ ಇರುವಂತೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಕಾಡಾನೆ ಹಾವಳಿಗೆ ಮಿತಿಯೇ ಇಲ್ಲ:
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆ ದಾಳಿಗೆ ನಿರಂತರವಾಗಿ ಜೀವ ಹಾನಿಯಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಆಲ್ದೂರು ಸಮೀಪದ ಕಾಫಿ ಎಸ್ಟೇಟ್ ನಲ್ಲಿ ಕೆಲಸಕ್ಕೆಂದು ತೆರಳುತ್ತಿದ್ದ ಕಾರ್ಮಿಕ ಆನಂದ ಪೂಜಾರಿ ಎನ್ನವವರನ್ನು ಕಾಡಾನೆ ಬಲಿ ಪಡೆದಿತ್ತು. ಅಲ್ಲದೆ ಕೆಲ ತಿಂಗಳ ಹಿಂದೆ ಆಲ್ದೂರು ಭಾಗದಲ್ಲಿ ಇಬ್ಬರನ್ನು ಕಾಡಾನೆ ತುಳಿದು ಸಾಯಿಸಿತ್ತು. ಮನುಷ್ಯನ ಜೀವನದಲ್ಲಿ ಆಟವಾಡುತ್ತಿರುವ ಕಾಡಾನೆಗಳಿಗೆ ಕಡಿವಾಣ ಹಾಕುವವರು ಯಾರು ಎನ್ನುವ ಯಕ್ಷ ಪ್ರಶ್ನೆಗಳಿಗೆ ಉತ್ತರವೇ ಇಲ್ಲದಂತಾಗಿದೆ.


ಇದನ್ನೂ ಓದಿ: sslc ಪಾಸಾದವರಿಗೆ ಬಂಪರ್ ಜಾಬ್ ಆಫರ್; ಈ ಜಿಲ್ಲಾ ಕೋರ್ಟ್ ನಲ್ಲಿ ಉದ್ಯೋಗ; ಈಗಲೇ ಅರ್ಜಿ ಸಲ್ಲಿಸಿ


ಆಗುಂಬೆ: ಘಾಟಿಯ ಸೂರ್ಯಾಸ್ತ ಸ್ಥಳದ ಬಳಿಯೇ ತಡೆಗೋಡೆಗಳಲ್ಲಿ ಬಿರುಕು

ಆಗುಂಬೆ: (ನ್ಯೂಸ್ ಮಲ್ನಾಡ್ ವರದಿ) ಕರಾವಳಿ ಹಾಗೂ ಮಲೆನಾಡನ್ನು ಸಂಪರ್ಕಿಸುವ ಆಗುಂಬೆ ಘಾಟಿಯ ಸೂರ್ಯಾಸ್ತ ಸ್ಥಳದ ಬಳಿಯೇ ರಸ್ತೆಯ ತಡೆಗೋಡೆ ಬಿರುಕು ಕಂಡಿದ್ದು, ಘನ ವಾಹನಗಳ ಸಂಚಾರದಿಂದ ತಡೆಗೋಡೆ ಕುಸಿದು ಘಾಟಿ ಬಂದ್ ಆಗುವ ಭೀತಿ ಎದುರಾಗಿದೆ.

ಇದನ್ನೂ ಓದಿ: ಶುರುವಾಯ್ತು SMS ಹಗರಣ!; ಹಣ ಜಮೆಯಾಗಿದೆ ಅಂತಾ ಸಂದೇಶ ಬಂದಿದ್ಯಾ.?; ಈ ರೀತಿ ಮೆಸೇಜ್​ ಬಂದ್ರೆ ಹುಷಾರ್


ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ 14 ನೇ ತಿರುವಿನ ಸೂರ್ಯಾಸ್ತ ಸ್ಥಳದ ಬಳಿ ಘನ ವಾಹನಗಳು ಸಂಚರಿಸಿದರೆ ಸಂಪೂರ್ಣ ಕುಸಿಯುವ ಸ್ಥಿತಿ ಇದೆ. ಈ ಹಿಂದೆ ಕೆಲವೆಡೆ ಘನ ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ತಡೆ ಗೋಡೆಗಳಿಗೆ ಹಾನಿಯಾಗಿತ್ತು. ಇದೀಗ ಶಾಲೆಗಳಿಗೆ ರಜೆ ಇರುವ ಕಾರಣ ಪ್ರವಾಸಿಗರ ವಾಹನಗಳ ದಟ್ಟಣೆ ಘಾಟಿಯಲ್ಲಿ ಹೆಚ್ಚಾಗಿದೆ. ಇದರೊಂದಿಗೆ ಘನ ವಾಹನಗಳ ಓಡಾಟದಿಂದ ರಸ್ತೆ ಮೇಲೆ ಒತ್ತಡ ಹೆಚ್ಚುತ್ತಿದೆ. ಬಿರುಕುಬಿಟ್ಟ ತಡೆಗೋಡೆಯನ್ನು ಕೂಡಲೇ ದುರಸ್ತಿಗೊಳಿಸದಿದ್ದರೆ ಮಳೆಗಾಲದಲ್ಲಿ ಭಾರೀ ಹಾನಿಯುಂಟಾಗಬಹುದು.


ಇದನ್ನೂ ಓದಿ: ಅಡಿಕೆ ತೋಟಕ್ಕೆ ಕೊಳೆ ರೋಗದ ಭೀತಿಯೇ?;  ನಿಯಂತ್ರಣಕ್ಕೆ ಈಸೀ ಲೈಫ್ ನ ಶಾಖೆಯಲ್ಲಿ ಲಭ್ಯವಿದೆ ರಾಮಬಾಣ


ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಸುತ್ತಲಿನ ಜಿಲ್ಲೆಯ ಜನರು ಮಣಿಪಾಲ ಆಸ್ಪತ್ರೆಯನ್ನು ಆಶ್ರಯಿಸಿದ್ದು, ಒಂದು ವೇಳೆ ಸಂಚಾರಕ್ಕೆ ಸಮಸ್ಯೆಯಾದರೆ ಇವರಿಗಷ್ಟೇ ಅಲ್ಲದೇ ಮಲೆನಾಡು ಕರಾವಳಿಯ ಸಂಪರ್ಕವೂ ಕಡಿತಗೊಳ್ಳಲಿದೆ. ಹಾಗಾಗಿ ಕೂಡಲೇ ಜಿಲ್ಲಾಡಳಿತ ಗಮನ ಹರಿಸಿ ಘನವಾಹನಗಳ ಸಂಚಾರವನ್ನು ನಿರ್ಬಂಧಿಸಿ ತಡೆಗೋಡೆಯನ್ನ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.