ದನ ಹಿಡಿಯಲು ರಸ್ತೆಗಿಳಿದ ಚಿಕ್ಕಮಗಳೂರು ಎಸ್ಪಿ

ಚಿಕ್ಕಮಗಳೂರು:  (ನ್ಯೂಸ್ ಮಲ್ನಾಡ್ ವರದಿ) ಬಿಡಾಡಿ ದನಗಳನ್ನು ಹಿಡಿಯಲು ಖುದ್ದು ರಸ್ತೆಗಿಳಿದಿದ್ದಾರೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ. ಹೌದು, ನಗರದಲ್ಲಿ ಬಿಡಾಡಿ ದನಗಳ ಓಡಾಟದಿಂದ ಅಪಘಾತಗಳು ಸಂಭವಿಸಿದ್ದ ಹಿನ್ನೆಲೆಯಲ್ಲಿ ಖುದ್ದು ಚಿಕ್ಕಮಗಳೂರು ಎಸ್ಪಿ ರಸ್ತೆಗೆ ಇಳಿದು ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಬಿಟ್ಟಿದ್ದಾರೆ.


ಇದನ್ನೂ ಓದಿ: ಅಕ್ರಮ ಪಂಪ್ ಸೆಟ್ ಹೊಂದಿರುವವರಿಗೆ ಗುಡ್ ನ್ಯೂಸ್; ಡೀಸೆಲ್ ಪಂಪ್ ಸೆಟ್ ಹೊಂದಿರುವವರಿಗೂ ಮುಖ್ಯ ಮಾಹಿತಿ; ಮಿಸ್ ಮಾಡ್ದೆ ಈ ಸುದ್ದಿ ಓದಿ


ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್ ಹಾಗೂ ಕೆ.ಎಂ.ರಸ್ತೆಯಲ್ಲಿ ಕಾರ್ಯಾಚರಣೆ ನಡೆದಿದ್ದು, ಒಟ್ಟು 4 ಹಸುಗಳನ್ನು ಹಿಡಿದು ಗೋಶಾಲೆಗೆ ಬಿಟ್ಟಿದ್ದಾರೆ. ಇತ್ತೀಚೆಗೆ ರಸ್ತೆಯಲ್ಲಿ ಹಸು ಅಡ್ಡ ಬಂದ ಕಾರಣ ಇಬ್ಬರ ಸಾವಾಗಿದ್ದು, ಅಲ್ಲದೇ ಬೈಕಿನಿಂದ 60 ಕ್ಕೂ ಹೆಚ್ಚು ಸವಾರರು ಬಿದ್ದು ಗಾಯಗೊಂಡಿದ್ದರು. ಇದನ್ನು ಗಮನಿಸಿದ ಪೊಲೀಸರ ಜೊತೆ ಅಗ್ನಿಶಾಮಕ ದಳ, ಪಶುಸಂಗೋಪನೆ ಇಲಾಖೆ ನಗರಸಭೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.


ಇದನ್ನೂ ಓದಿ: ಎಲ್ಲಾ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್; HSRP ನಂಬರ್ ಪ್ಲೇಟ್ ನಿಯಮ ಚೇಂಜ್


ದನಗಳನ್ನು ಹಿಡಿದು ಗೋಶಾಲೆಗೆ ಕಳುಹಿಸಿಕೊಡಲಾಗಿದ್ದು, ದಂಡ ಕಟ್ಟಿ ದನಗಳನ್ನು ಬಿಡಿಸಿಕೊಂಡು ಹೋಗಲು ಮಾಲೀಕರಿಗೆ ಸೂಚನೆ ನೀಡಲಾಗಿದೆ. ಇನ್ನೊಂದು ಬಾರಿ ರಾಸುಗಳನ್ನ ರಸ್ತೆಗೆ ಬಿಟ್ಟರೆ ಕೇಸ್ ದಾಖಲಿಸುವುದಾಗಿ ಎಸ್ಪಿ ಎಚ್ಚರಿಕೆ ನೀಡಿದ್ದು, ಪೊಲೀಸರು ಸೇರಿದಂತೆ ವಿವಿಧ ಇಲಾಖೆಗಳ ಹತ್ತಾರು ಸಿಬ್ಬಂದಿಗಳು ಭಾಗಿಯಾಗಿದ್ದರು.


ಇದನ್ನೂ ಓದಿ: 3ನೇ ಕಂತಿನ ಬೆಳೆ ಪರಿಹಾರದ ಹಣ ಜಮಾ!; ಮೊಬೈಲ್ ನಲ್ಲೇ ಹೀಗೆ ಚೆಕ್ ಮಾಡಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.