ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸನ್ಮಾನಕ್ಕಾಗಿ ಆಗಮಿಸಿದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ. ಆಂದ್ರಪ್ರದೇಶದ ಮದನಪಲ್ಲಿಯ ನಿವಾಸಿ ಶಿವಕುಮಾರ ಶರ್ಮ (41) ನಾಪತ್ತೆಯಾದ ವ್ಯಕ್ತಿ.

ಆಗಸ್ಟ್ 1 ರಂದು 20 ರಿಂದ 25 ಖ್ಯಾತ ಜೋತಿಷ್ಯ ಪಂಡಿತರಿಗೆ ಶ್ರೀ ಮಠದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಧುಶೇಖರ ಸ್ವಾಮೀಜಿಯಿಂದ ಸನ್ಮಾನ ಕೂಡ ಶರ್ಮರು ಸ್ವೀಕರಿಸಿದ್ದಾರೆ. ಆದರೆ, ಆಗಸ್ಟ್ 2 ರಂದು ಬೆಳಗಿನ ಜಾವ ಸ್ನಾನ ಮಾಡಿ ಜಪ ಮಾಡಿ ಬರುತ್ತೇನೆ ಎಂದು ಹೇಳಿದ ಶರ್ಮರು ನಾಪತ್ತೆ ಆಗಿದ್ದಾರೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಈ ದಿನ ಲಾಸ್ಟ್ ಡೇಟ್!; ಇಲ್ಲಿದೆ ನೋಡಿ ಡಿಟೈಲ್ಸ್
ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಾರಂಭಿಸಿದ್ದಾರೆ.
ಇವರ ಸುಳಿವು ಸಿಕ್ಕಲ್ಲಿ 9113941398 ಈ ನಂಬರ್ ಗೆ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಅಳವಡಿಕೆಯಲ್ಲಿ ಮತ್ತೊಂದು ಅಪ್ಡೇಟ್; ಇದೇ ನೋಡಿ ಕೊನೆಯ ದಿನಾಂಕ












