ಕೊಟ್ಟಿಗೆಹಾರ; (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಮಳೆಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮನೆ ಕಳೆದುಕೊಂಡ ಕೊಟ್ಟಿಗೆಹಾರದ ಬಿನ್ನಡಿ ಗ್ರಾಮದ ಭಾರತಿ ದಿನೇಶ್ ಮಾತನಾಡಿ, ನಮ್ಮ ಮನೆ ಮಳೆಯಿಂದ ಕುಸಿದಿದ್ದು, ಪರಿಹಾರ 1.20 ಲಕ್ಷ ರೂ ನೀಡಲಾಗಿದೆ. ಇದರಿಂದ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಮಗೆ ದಿಕ್ಕೇ ತೋಚದಂತಾಗಿದೆ ಎಂದು ಅಳಲು ತೋಡಿಕೊಂಡರು.

ನಿರಾಶ್ರಿತರ ಅಳಲು ಆಲಿಸಿದ ಅಶ್ವಥ್ ನಾರಾಯಣ್ ಅವರು, ನಮ್ಮ ಬಿಜೆಪಿ ಸರ್ಕಾರ ಆಡಳಿತದಲ್ಲಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ ಪರಿಹಾರ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯಿಂದ ಜನರ ಬದುಕನ್ನು ಕಿತ್ತುಕೊಂಡಿದೆ. ಮಳೆಯಿಂದ ಕುಸಿತಗೊಂಡಿದ್ದ ಮನೆಗಳಿಗೆ 1.20 ಲಕ್ಷ ರೂ ಪರಿಹಾರ ನೀಡಿದರೆ ಸಾಕಾಗುತ್ತದೆಯೇ ಎಂಬ ಸಾಮಾನ್ಯ ಜ್ಞಾನ ಕೂಡ ಇಲ್ಲದಂತಾಗಿದೆ. ಹಾಗಾಗಿ ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ ಪರಿಹಾರ ನೀಡಬೇಕು. ಅಥವಾ ಸರ್ಕಾರವೇ ಸಂಪೂರ್ಣ ಮನೆ ಕಟ್ಟಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಇಲ್ಲವಾದರೆ ಬಿಜೆಪಿ ಪಕ್ಷದಿಂದ ಹೋರಾಟ ಮಾಡಲಾವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಈ ದಿನ ಲಾಸ್ಟ್ ಡೇಟ್!; ಇಲ್ಲಿದೆ ನೋಡಿ ಡಿಟೈಲ್ಸ್
ತರುವೆ ಗ್ರಾ.ಪಂ ವ್ಯಾಪ್ತಿಯಲ್ಲಿ 4 ಎಕರೆ ಕಂದಾಯ ಭೂಮಿ ಇದೆ. ಅದಕ್ಕೆ ಅರಣ್ಯ ಇಲಾಖೆ ಗಿಡಗಳನ್ನು ನೆಟ್ಟಿದ್ದಾರೆ. ಮೊದಲೇ ನಿವೇಶನ ಸಮಸ್ಯೆ ಇದೆ. ಇದನ್ನು ಪರಿಹರಿಸಲು ಸುಲಭ ಮಾರ್ಗವನ್ನೇ ಮುಚ್ಚುವ ಮೂಲಕ ಅರಣ್ಯ ಇಲಾಖೆ ತೊಂದರೆ ಉಂಟು ಮಾಡುತ್ತಿದೆ ಎಂದು ದೂರವಾಣಿ ಮೂಲಕ ಡಿಸಿಎಫ್ ಗೆ ಕರೆ ಮಾಡಿ ಕೂಡಲೇ ಮರ ತೆರವುಗೊಳಿಸಲು ಸೂಚಿಸಿದರು.

ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಅಳವಡಿಕೆಯಲ್ಲಿ ಮತ್ತೊಂದು ಅಪ್ಡೇಟ್; ಇದೇ ನೋಡಿ ಕೊನೆಯ ದಿನಾಂಕ
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ದೀಪಕ್ ದೊಡ್ಡಯ್ಯ, ಗಜೇಂದ್ರ ಕೊಟ್ಟಿಗೆಹಾರ, ಅಭಿಲಾಶ್, ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿಬಿ ಮಂಜುನಾಥ್, ಸುನಿ, ಪ್ರದೀಪ್ ಗೌಡ ಬಿನ್ನಡಿ, ಜಯಪಾಲ್, ವಿಕ್ರಂ ಗೌಡ, ಬಿಜೆಪಿ ಮುಖಂಡ ಚೆಮಿನ್, ಪರೀಕ್ಷಿತ್ ಜಾವಳಿ, ಧನಿಕ್ ಕೋಡದಿಣ್ಣೆ, ಭರತ್ ಕನ್ನಹಳ್ಳಿ ಮತ್ತಿತರರಿದ್ದರು. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ಈ ಜಿಲ್ಲೆಯಾದ್ಯಂತ ಇರುವ ಅಂಗನವಾಡಿಯಲ್ಲಿ ಉದ್ಯೋಗ; 215 ಹುದ್ದೆಗಳಿಗೆ ಅರ್ಜಿ ಆಹ್ವಾನ; 10th ಪಾಸ್ ಆದವರು ಅರ್ಜಿ ಸಲ್ಲಿಸಿ












