ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ವಿದ್ಯುತ್ ಕಂಬ ಏರಿ ದುರಸ್ತಿ ಮಾಡಲು ಮುಂದಾಗಿದ್ದ ರೈತನೊಬ್ಬ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಘಟನೆ ಭಾನುವಾರ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್ (35) ಮೃತ ರೈತ.

ಇದನ್ನೂ ಓದಿ; ಇಂದಿನಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ; ಹೊಸ ಪಡಿತರ ಚೀಟಿ ಪಡೆಯಲು ಇನ್ಮುಂದೆ ಸರ್ಕಾರದ ಹೊಸ ನಿಯಮ!

ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ವಿದ್ಯುತ್ ಪೂರೈಕೆ ಸ್ತಗಿತಗೊಂಡಿದ್ದು, ಅಕ್ಕಪಕ್ಕದ ಗ್ರಾಮಗಳಲ್ಲಿ ವಿದ್ಯುತ್ ಇದ್ದರೂ ತಮ್ಮ ಗ್ರಾಮದಲ್ಲಿ ವಿದ್ಯುತ್ ಬಾರದಿರುವುದನ್ನು ಗಮನಿಸಿ ವಿದ್ಯುತ್ ಕಂಬದಲ್ಲಿಯೇ ಏನೋ ದೋಷವಿದೆ ಎಂದು ಭಾವಿಸಿ ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗೆ ಕರೆ ಮಾಡದೇ ವಿದ್ಯುತ್ ಕಂಬವನ್ನು ಏರಿದ್ದಾರೆ. ಈ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿದೆ. ವಿದ್ಯುತ್ ಪ್ರವಹಿಸಿದ ಪರಿಣಾಮ ಮಂಜುನಾಥ್ ಮೈಗೆ ಬೆಂಕಿ ಹೊತ್ತಿಕೊಂಡು ಕಂಬದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ; ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ!;ಕೃಷಿ ಭೂಮಿ ಹೊಂದಿರುವ ಈ ರೈತರಿಗೆ ಸಿಗಲಿದೆ ಸಹಾಯಧನ
ಸ್ಥಳಕ್ಕಾಗಮಿಸಿದ ಪೊಲೀಸರು, ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬದಲ್ಲಿ ನೇತಾಡುತ್ತಿದ್ದ ಮಂಜುನಾಥ್ ಮೃತ ದೇಹವನ್ನು ಕೆಳಗಿಳಿಸಿದ್ದಾರೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ; bsnl ಕಂಪನಿಯಲ್ಲಿ ಭರ್ಜರಿ ಉದ್ಯೋಗ; 558 ಹುದ್ದೆಗಳಿಗೆ ಅರ್ಜಿ ಅಹ್ವಾನ; 24,900-50,500 ಇದೇ ಸಂಬಳ
ಚಿಕ್ಕಮಗಳೂರು: ಬೋರ್ ವೆಲ್ ಕೊರೆಯುವ ಲಾರಿಗಳಿಗೆ ನೋಂದಣಿ ಕಡ್ಡಾಯ..!
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆಯುವ ಲಾರಿಗಳು ಕಡ್ಡಾಯವಾಗಿ ಅಂತರ್ಜಲ ಇಲಾಖೆಯಿಂದ 7 (ಎ) ಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊಳವೆಬಾವಿ ಕೊರೆಯುವ ಲಾರಿ ಮಾಲೀಕರು ಹಾಗೂ ಏಜೆಂಟರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 7(ಎ) ರಂತೆ ನೋಂದಾಯಿಸಿಕೊಂಡಿರುವ ಲಾರಿ ಮಾಲೀಕರು ಕೊಳವೆಬಾವಿಯನ್ನು ಕೊರೆಯತಕ್ಕದ್ದು, ನೊಂದಾಯಿಸಿಕೊಳ್ಳದೆ ಇರುವ ಕೊಳವೆಬಾವಿ ಕೊರೆಯುವ ಲಾರಿ ಮಾಲೀಕರು ಒಂದು ವಾರದೊಳಗೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಒಂದು ವಾರದೊಳಗೆ ನೋಂದಾಯಿಸಿಕೊಳ್ಳದೆ ಇರುವ ಮಾಲೀಕರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದಲ್ಲದೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು.
ಇದನ್ನೂ ಓದಿ; ಜಿಲ್ಲೆಯಲ್ಲಿ ಉದ್ಯೋಗ ಮೇಳ ಆಯೋಜನೆ; ನೇರ ಸಂದರ್ಶನದ ಮೂಲಕ ಆಯ್ಕೆ
ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಸರ್ಕಾರದಿಂದ ಮಂಜೂರಾಗಿರುವ ಕೊಳವೆಬಾವಿಗಳನ್ನು ಅತಿ ಶೀಘ್ರವಾಗಿ ಕೊರೆದು ಪೂರ್ಣಗೊಳಿಸಬೇಕು ಕೊಳವೆಬಾವಿ ಕೊರೆದು ವಿಫಲವಾದ ಕೊಳವೆ ಬಾವಿಗಳನ್ನು ಸುರಕ್ಷಿತವಾಗಿ ಮುಚ್ಚಿ ಯಾವುದೇ ಅವಗಡಗಳು ಸಂಭವಿಸದಂತೆ ಕ್ರಮ ವಹಿಸಬೇಕು ತಪ್ಪಿದಲ್ಲಿ ಸಂಬಂಧಿಸಿದ ನಿವೇಶನ ಮಾಲೀಕರು, ಕೊಳವೆಬಾವಿ ಕೊರೆಸುವ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ; ಈ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ; ಪಿಯುಸಿ ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ
ಕೊಳವೆ ಬಾವಿಗಳನ್ನು ಸರ್ಕಾರ ನಿಗದಿಪಡಿಸಿರುವ ದರದಂತೆ ಕೊರಿಯಬೇಕು ಒಂದು ವೇಳೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ದರ ಪಡೆದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಇದನ್ನೂ ಓದಿ; ಸರ್ಕಾರದ ಹೊಸ ಯೋಜನೆ; ಮಹಿಳೆಯರಿಗೆ ಸಿಗುತ್ತೆ 4,000 ರೂ












