ಚಿಕ್ಕಮಗಳೂರು: ಬೋರ್ ವೆಲ್ ಕೊರೆಯುವ ಲಾರಿಗಳಿಗೆ ನೋಂದಣಿ ಕಡ್ಡಾಯ..!

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ)  ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆಯುವ ಲಾರಿಗಳು ಕಡ್ಡಾಯವಾಗಿ ಅಂತರ್ಜಲ ಇಲಾಖೆಯಿಂದ 7 (ಎ) ಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ಇದನ್ನೂ ಓದಿ; ಬೆಳ್ಳಂಬೆಳ್ಳಗೆ ಬಂತು ರೇಷನ್ ಕಾರ್ಡ್ ಡಿಲೀಟ್ ಸಂದೇಶ!; ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡಿ

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊಳವೆಬಾವಿ ಕೊರೆಯುವ ಲಾರಿ ಮಾಲೀಕರು ಹಾಗೂ ಏಜೆಂಟರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 7(ಎ) ರಂತೆ ನೋಂದಾಯಿಸಿಕೊಂಡಿರುವ ಲಾರಿ ಮಾಲೀಕರು ಕೊಳವೆಬಾವಿಯನ್ನು ಕೊರೆಯತಕ್ಕದ್ದು, ನೊಂದಾಯಿಸಿಕೊಳ್ಳದೆ ಇರುವ ಕೊಳವೆಬಾವಿ ಕೊರೆಯುವ ಲಾರಿ ಮಾಲೀಕರು ಒಂದು ವಾರದೊಳಗೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಒಂದು ವಾರದೊಳಗೆ ನೋಂದಾಯಿಸಿಕೊಳ್ಳದೆ ಇರುವ ಮಾಲೀಕರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದಲ್ಲದೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು.

ಇದನ್ನೂ ಓದಿ; ಜಿಲ್ಲೆಯಲ್ಲಿ ಉದ್ಯೋಗ ಮೇಳ ಆಯೋಜನೆ; ನೇರ ಸಂದರ್ಶನದ ಮೂಲಕ ಆಯ್ಕೆ

ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಸರ್ಕಾರದಿಂದ ಮಂಜೂರಾಗಿರುವ ಕೊಳವೆಬಾವಿಗಳನ್ನು ಅತಿ ಶೀಘ್ರವಾಗಿ ಕೊರೆದು ಪೂರ್ಣಗೊಳಿಸಬೇಕು ಕೊಳವೆಬಾವಿ ಕೊರೆದು ವಿಫಲವಾದ ಕೊಳವೆ ಬಾವಿಗಳನ್ನು ಸುರಕ್ಷಿತವಾಗಿ ಮುಚ್ಚಿ ಯಾವುದೇ ಅವಗಡಗಳು ಸಂಭವಿಸದಂತೆ ಕ್ರಮ ವಹಿಸಬೇಕು ತಪ್ಪಿದಲ್ಲಿ ಸಂಬಂಧಿಸಿದ ನಿವೇಶನ ಮಾಲೀಕರು, ಕೊಳವೆಬಾವಿ ಕೊರೆಸುವ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ; ಈ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ; ಪಿಯುಸಿ ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ

ಕೊಳವೆ ಬಾವಿಗಳನ್ನು ಸರ್ಕಾರ ನಿಗದಿಪಡಿಸಿರುವ ದರದಂತೆ ಕೊರಿಯಬೇಕು ಒಂದು ವೇಳೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ದರ ಪಡೆದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಇದನ್ನೂ ಓದಿ; ಸರ್ಕಾರದ ಹೊಸ ಯೋಜನೆ; ಮಹಿಳೆಯರಿಗೆ ಸಿಗುತ್ತೆ 4,000 ರೂ

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ: ಚಿಕ್ಕಮಗಳೂರು ಮೂಲದ ಶಂಕಿತ ಅರೆಸ್ಟ್

ಚಿಕ್ಕಮಗಳೂರು: ಬೆಂಗಳೂರಿನ ಹೆಸರಾಂತ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್ ಗೆ ಸಹಾಯ ಮಾಡಿದ ಆರೋಪಿಯನ್ನು NIA ಅಧಿಕಾರಿಗಳು ನಿನ್ನೆ ಬಂಧಿಸಿದ್ದಾರೆ.

ಇದನ್ನೂ ಓದಿ; ರಾಜ್ಯದ ರೈತರ ಗಮನಕ್ಕೆ; ಸರ್ಕಾರದ ಸೌಲಭ್ಯ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ

ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣ ಮುಜಾಮಿಲ್ ಷರೀಫ್ ಬಂಧಿತ ಆರೋಪಿ. ಕಳೆದ ಒಂದು ವರ್ಷದಿಂದ ಚಿಕ್ಕಮಗಳೂರಿನ ಅಯ್ಯಪ್ಪ ನಗರದಲ್ಲಿ ತಾಯಿ ಹಾಗೂ ತಂಗಿ ಮತ್ತು ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪತ್ನಿ 9 ತಿಂಗಳ ತುಂಬು ಗರ್ಭಿಣಿ. ಕಳೆದ 6 ತಿಂಗಳಿನಿಂದ ಅಯ್ಯಪ್ಪ ನಗರದಲ್ಲೇ ಇದ್ದ ಷರೀಫ್, ಒಂದು ತಿಂಗಳ ಹಿಂದೆ ಬೆಂಗಳೂರಿಗೆ ವಾಪಸಾಗಿದ್ದ.

ಇದನ್ನೂ ಓದಿ; ಇಂತಹ ರೈತರ ಖಾತೆಗೆ ಜಮಾ ಆಗಲಿದೆ 10 ಸಾವಿರ ರೂಪಾಯಿ!; ಯಾರಿಗೆ, ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

ಹೀಗಾಗಿ ನಿವಾಸದ ಮೇಲೆ ದಾಳಿ ಮಾಡಿದ NIA ಅಧಿಕಾರಿಗಳು ಮೊಬೈಲ್ ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಸದ್ಯ ಬೆಂಗಳೂರಿನಲ್ಲಿ ಮುಜಾಮಿಲ್ ನನ್ನು NIA ಅಧಿಕಾರಿಗಳು ಬಂಧಿಸಿದ್ದಾರೆ.

ಇದನ್ನೂ ಓದಿ; ಕೃಷಿ ವಿಜ್ಞಾನ ವಿವಿಯಲ್ಲಿ ಬೋಧಕ ಹುದ್ದೆ; ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಆಹ್ವಾನ

ನೂರಾರು ಸಿಸಿಟಿವಿಗಳಲ್ಲಿ ಹುಡುಕಾಟ, ಹತ್ತಾರು ಊರು ಸುತ್ತುಹಾಕಿದ್ದರು ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಹತ್ತಾರು ಎವಿಡೆನ್ಸ್ ಆಧಾರದ ಮೇಲೆ ಫೀಲ್ಡ್ ಇಳಿದ NIA, ಬಾಂಬ್ ಸ್ಫೋಟಿಸಿದವನು ಮುಸಾವೀರ್ ಹುಸೇನ್ ಎನ್ನುವ ಸುಳಿವು ಪತ್ತೆ ಹಚ್ಚಿತ್ತು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮುಸಾವೀರ್ ಬಾಂಬ್ ಸ್ಫೋಟಿಸಿದ್ದು, ಅಬ್ದುಲ್ ಮತೀನ್ ಕಿಂಗ್ ಪಿನ್ ಆಗಿದ್ದ. ಇವರಿಬ್ಬರ ಪಾತ್ರದ ಸುಳಿವು ತಿಳಿದ ಕೂಡಲೇ ಶಿವಮೊಗ್ಗದ ತೀರ್ಥಹಳ್ಳಿ, ಬೆಂಗಳೂರು ಹಾಗೂ ಚೆನ್ನೈ, ಉತ್ತರ ಪ್ರದೇಶದ ಸೇರಿದಂತೆ 18 ಕಡೆ ದಾಳಿ ಮಾಡಿ NIA ಶೋಧ ಮಾಡಿತ್ತು. ಈ ವೇಳೆ ಬಾಂಬ್ ತಯಾರಿಕೆಗೆ ಸಹಾಯ ಮಾಡಿದ್ದ ಮುಜಾಮಿಲ್ ಷರೀಫ್ ಎಂಬಾತನನ್ನ ಅರೆಸ್ಟ್ ಮಾಡಲಾಗಿದೆ.

ಬಾಂಬರ್‌ ಗೆ ಆಪ್ತನಾಗಿದ್ದ ಮುಜಾಮಿಲ್ ಷರೀಫ್!
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಬಾಂಬರ್ ಮುಸಾವೀರ್ ಹುಸೇನ್ ಹಾಗೂ ಕಿಂಗ್ ಪಿನ್ ಅಬ್ದುಲ್ ಮತೀನ್ ಗೆ ಈ ಮುಜಾಮಿಲ್ ಆಪ್ತನಾಗಿದ್ದ. ಬಾಂಬ್ ತಯಾರಿಕೆಗೆ ಈ ಮುಜಾಮಿಲ್ ಸ್ಫೋಟಕಗಳನ್ನ ಸರಬರಾಜು ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ಸೂಕ್ತ ಸಾಕ್ಷಿಗಳನ್ನ ಕಲೆಹಾಕಿದ NIA ಮುಜಾಮಿನ್ ನನ್ನ ಅರೆಸ್ಟ್ ಮಾಡಿದೆ.

ಮುಜಾಮಿಲ್ ಬಂಧನವಾಗುತ್ತಿದ್ದಂತೆ ಮನೆಗೆ ಬೀಗ:
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜಾಮಿಲ್ ನನ್ನು ನಿನ್ನೆ ಎನ್.ಐ.ಎ ಅಧಿಕಾರಿಗಳು ಬಂಧಿಸಿದ್ದಾರೆ. ಮಗನ ಬಂಧನದ ಸುದ್ದಿ ತಿಳಿದ ಬಳಿಕ ತಾಯಿ ಅಸ್ವಸ್ಥರಾಗಿರೋ ಮಾಹಿತಿ ತಿಳಿದಿದೆ. ಅಲ್ಲದೆ ಮನೆಗೆ ಬೀಗ ಹಾಕಿಕೊಂಡು ಮಂಗಳೂರಿಗೆ ತಂಗಿ ಮನೆಗೆ ಮುಜಾಮಿಲ್ ನ ತಾಯಿ ಹೋಗಿದ್ದಾರೆ ಎನ್ನಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.