ಚಿಕ್ಕಮಗಳೂರು: ಬರಗಾಲದ ನೆಪವೊಡ್ಡಿ ಮತಾಂತರಕ್ಕೆ ಯತ್ನ: ಮೂವರ ಬಂಧನ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬರಗಾಲವನ್ನು ನೆಪವಾಗಿಟ್ಟುಕೊಂಡು ಜನರನ್ನು ಮತಾಂತರ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ; ಇಂದಿನಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ; ಹೊಸ ಪಡಿತರ ಚೀಟಿ ಪಡೆಯಲು ಇನ್ಮುಂದೆ ಸರ್ಕಾರದ ಹೊಸ ನಿಯಮ!

ಇದನ್ನೂ ಓದಿ; ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ!;ಕೃಷಿ ಭೂಮಿ ಹೊಂದಿರುವ ಈ ರೈತರಿಗೆ ಸಿಗಲಿದೆ ಸಹಾಯಧನ

ತೀವ್ರ ಬರಗಾಲ ಬಂದಿದ್ದು, ಮಳೆ-ಬೆಳೆ ಇಲ್ಲ, ಜನ ಸಂಕಷ್ಟದಲ್ಲಿ ಇದ್ದಾರೆ. ನೀವು ಕಷ್ಟದಲ್ಲಿ ಇದ್ದೀರಾ. ನಿಮ್ಮ ದೇವರಿಂದ ಏನೂ ಮಾಡಲು ಸಾಧ್ಯವಿಲ್ಲ, ನೀವು ನಮ್ಮ ಧರ್ಮಕ್ಕೆ ಬಂದರೆ ಯೇಸು ನಿಮಗೆಲ್ಲಾ ಒಳ್ಳೆಯದು ಮಾಡುತ್ತಾನೆ. ಮಳೆ-ಬೆಳೆ ಆಗಲಿದೆ. ನಿಮ್ಮ ಕಷ್ಟವನ್ನು ಬಗೆಹರಿಸುತ್ತಾನೆ ಎಂದು ಹೇಳಿ ಮತಾಂತರ ಮಾಡುತ್ತಿದ್ದ ಮೂವರನ್ನು ಚಿಕ್ಕಮಗಳೂರು ತಾಲೂಕಿನ ಎರೇಹಳ್ಳಿ ಎಂಬ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ; bsnl​ ಕಂಪನಿಯಲ್ಲಿ ಭರ್ಜರಿ ಉದ್ಯೋಗ; 558 ಹುದ್ದೆಗಳಿಗೆ ಅರ್ಜಿ ಅಹ್ವಾನ; 24,900-50,500 ಇದೇ ಸಂಬಳ

ಮನೆಗೆ ಮತಾಂತರ ಮಾಡಲು ಬಂದವರ ಮಾತುಗಳನ್ನ ಗಮನಿಸಿದ ಎರೇಹಳ್ಳಿ ನಿವಾಸಿ ಪ್ರಸನ್ನ ಕುಮಾರ್ ಎಂಬುವವರು ಆಕ್ರೋಶಗೊಂಡು ಅವರ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲ ಗ್ರಾಮಸ್ಥರು ಒಟ್ಟಾಗಿ ಮತಾಂತರ ಮಾಡುವ ಪ್ರಯತ್ನವನ್ನು ವಿರೋಧಿಸಿದ್ದಾರೆ.

ಇದನ್ನೂ ಓದಿ; ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗ; ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಅಹ್ವಾನ

ಮೂವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರಲ್ಲಿ ಓರ್ವ ಅಪ್ರಾಪ್ತ ಹಿಂದೂ ಎನ್ನಲಾಗಿದೆ. ರಾಜನ್ ಎಂಬಾತ ಇನ್ನಿಬ್ಬರೊಂದಿಗೆ ಇಂದಾವರ, ಉಂಡೇದಾಸರಹಳ್ಳಿ, ಎರೇಹಳ್ಳಿಯ ಮನೆಗಳಿಗೆ ತೆರಳಿ ಮತಾಂತರ ಮಾಡಲು ಮುಂದಾಗಿದ್ದ. ಇದೀಗ ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

ತರೀಕೆರೆ: ವಿದ್ಯುತ್ ಕಂಬ ಏರಿ ದುರಸ್ತಿ ಮಾಡಲು ಮುಂದಾದ ರೈತ ಮೃತ್ಯು

ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ವಿದ್ಯುತ್ ಕಂಬ ಏರಿ ದುರಸ್ತಿ ಮಾಡಲು ಮುಂದಾಗಿದ್ದ ರೈತನೊಬ್ಬ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಘಟನೆ ಭಾನುವಾರ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್ (35) ಮೃತ ರೈತ.

ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ವಿದ್ಯುತ್ ಪೂರೈಕೆ ಸ್ತಗಿತಗೊಂಡಿದ್ದು, ಅಕ್ಕಪಕ್ಕದ ಗ್ರಾಮಗಳಲ್ಲಿ ವಿದ್ಯುತ್ ಇದ್ದರೂ ತಮ್ಮ ಗ್ರಾಮದಲ್ಲಿ ವಿದ್ಯುತ್ ಬಾರದಿರುವುದನ್ನು ಗಮನಿಸಿ ವಿದ್ಯುತ್ ಕಂಬದಲ್ಲಿಯೇ ಏನೋ ದೋಷವಿದೆ ಎಂದು ಭಾವಿಸಿ ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗೆ ಕರೆ ಮಾಡದೇ ವಿದ್ಯುತ್ ಕಂಬವನ್ನು ಏರಿದ್ದಾರೆ. ಈ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿದೆ. ವಿದ್ಯುತ್ ಪ್ರವಹಿಸಿದ ಪರಿಣಾಮ ಮಂಜುನಾಥ್ ಮೈಗೆ ಬೆಂಕಿ ಹೊತ್ತಿಕೊಂಡು ಕಂಬದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು, ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬದಲ್ಲಿ ನೇತಾಡುತ್ತಿದ್ದ ಮಂಜುನಾಥ್ ಮೃತ ದೇಹವನ್ನು ಕೆಳಗಿಳಿಸಿದ್ದಾರೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.