ತರೀಕೆರೆ: ರಾಜ್ಯ ಹೆದ್ದಾರಿಯಲ್ಲಿ 2 ಕಿ.ಮೀ. ಓಡಿದ ಕರಡಿ!

ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ಬಳಿ ಜನನಿಬಿಡ ರಸ್ತೆಯಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಸಮೀಪವಿರುವ ತರೀಕೆರೆ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

ಕರಡಿಯು ಸುಮಾರು 2 ಕಿಲೋಮೀಟರ್ ಉದ್ದಕ್ಕೂ ಹೆದ್ದಾರಿಯಲ್ಲಿ ಓಡಿದೆ. ಈ ವೇಳೆ ದಾರಿಹೋಕರು ತಮ್ಮ ಮೊಬೈಲ್‌ಗಳಲ್ಲಿ ಕರಡಿಯ ಓಟವನ್ನು ಸೆರೆಹಿಡಿದಿದ್ದಾರೆ. ಬೈಕ್ ಸವಾರರು ಭಯದಿಂದ ಹಾರ್ನ್ ಮಾಡುತ್ತಲೇ ಸಂಚರಿಸಿದ ದೃಶ್ಯ ಕಂಡುಬಂದಿದೆ.

ಕರಡಿ ಓಡುವ ಹಾದಿಯಲ್ಲಿ ಮನೆ ಬಾಗಿಲಲ್ಲೇ ಇದ್ದ ಮಗುವನ್ನು ಮುಟ್ಟದೇ ಪಕ್ಕದಲ್ಲೇ ಹಾದುಹೋಗಿದ್ದು, ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಅಟ್ಟಿಸಿಕೊಂಡು ಬಂದ ನಾಯಿಗಳನ್ನು ಹೆದರಿಸಿ ಓಡಿಸಿದ ಕರಡಿ, ನಂತರ ಅರಣ್ಯದ ಅಂಚಿನಲ್ಲಿ ಕಣ್ಮರೆಯಾಗಿದೆ.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ಪದೇ ಪದೇ ಕರಡಿ ಕಾಣಿಸಿಕೊಳ್ಳುತ್ತಿರುವುದರಿಂದ ಲಕ್ಕವಳ್ಳಿ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದು, ತಕ್ಷಣವೇ ಕರಡಿಯನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.