ಚಿಕ್ಕಮಗಳೂರು: ಫ್ರೀಲಾನ್ಸ್ ಕೆಲಸದ ಆಮಿಷ; ವ್ಯಕ್ತಿಗೆ 1.28 ಕೋಟಿ ರೂ. ವಂಚನೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಆನ್‌ಲೈನ್‌ನಲ್ಲಿ ಫ್ರೀಲಾನ್ಸ್ ಕೆಲಸದ ನೆಪವೊಡ್ಡಿ ವ್ಯಕ್ತಿಯೊಬ್ಬರಿಗೆ 1.28 ಕೋಟಿ ರೂ. ವಂಚಿಸಿರುವ ಘಟನೆ ನಗರದಲ್ಲಿ ವರದಿಯಾಗಿದೆ.

ನಗರದ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಪಾರ್ಟ್‌ಟೈಮ್ ಕೆಲಸ ಹುಡುಕುತ್ತಿದ್ದಾಗ ‘ದಿ ರಿಟ್ಝ್ ಕಾರ್ಲಟನ್’ ಎಂಬ ನಕಲಿ ಲಿಂಕ್ ಮೂಲಕ ವಂಚಕರ ಜಾಲಕ್ಕೆ ಸಿಲುಕಿದ್ದಾರೆ.

ಟೆಲಿಗ್ರಾಮ್ ಮೂಲಕ ಕೀರ್ತನಾ ಎಂಬ ಹೆಸರಿನಿಂದ ಪರಿಚಯಿಸಿಕೊಂಡ ವ್ಯಕ್ತಿ ರೂಮ್ ಬುಕ್ಕಿಂಗ್ ಮಾಡುವ ಕೆಲಸ ಮಾಡಿದರೇ ಹೆಚ್ಚು ಕಮಿಷನ್ ಸಿಗಲಿದೆ ಎಂಬ ಆಮಿಷವೊಡ್ಡಿ ಇದಕ್ಕಾಗಿ ಹೂಡಿಕೆ ರೂಪದಲ್ಲಿ ಹಂತಹಂತವಾಗಿ ಒಟ್ಟು 1.28 ಕೋಟಿ ರೂ. ವನ್ನು ವಂಚಕರು ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ.

ಅನುಮಾನಗೊಂಡ ಸಂತ್ರಸ್ತ ವ್ಯಕ್ತಿ ತಾನು ಹೂಡಿಕೆ ಮಾಡಿರುವ ಹಣವನ್ನು ಹಿಂಪಡೆಯಲು ಮುಂದಾದಾಗ ವಂಚಕರು ಮತ್ತೆ ಆರು ಲಕ್ಷ ರೂ. ಜಮೆ ಮಾಡಿದರೆ ಹೂಡಿಕೆ ಹಣ ಸೇರಿ ಎಲ್ಲ ಹಣವನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ. ಇದರಿಂದ ತಾನು ಮೋಸ ಹೋಗಿರುವುದನ್ನು ಮನಗಂಡ ವ್ಯಕ್ತಿ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವಂಚಕರ ಜಾಲ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಸಾರ್ವಜನಿಕರು ಇಂತಹ ನಕಲಿ ಲಿಂಕ್‌ಗಳು ಮತ್ತು ಅತಿಯಾದ ಲಾಭ ಗಳಿಸುವ ಕೆಲಸದ ಆಮಿಷಗಳಿಗೆ ಬಲಿಯಾಗಿ ಹಣ ಕಳೆದುಕೊಳ್ಳುವ ಮುನ್ನ ಎಚ್ಚರದಿಂದ ಇರಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.