
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎ.ರಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕರಡಿ ದಾಳಿಯಿಂದ ರೈತ ರಾಮಕೃಷ್ಣ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಇಂದು ಬೆಳಿಗ್ಗೆ ರೈತ ರಾಮಕೃಷ್ಣ ಅವರು ತಮ್ಮ ತೋಟಕ್ಕೆ ಟ್ರಿಪ್ ಬಳ್ಳಿ ಬಿಡಲು ತೆರಳಿದ್ದ ವೇಳೆ ಏಕಾಏಕಿ ಕರಡಿ ದಾಳಿ ನಡೆಸಿದೆ. ದಾಳಿಯಲ್ಲಿ ರೈತನ ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಮಂಡಿ ಮತ್ತು ಮೊಣಕೈ ಭಾಗಕ್ಕೆ ಕರಡಿ ತೀವ್ರವಾಗಿ ದಾಳಿ ಮಾಡಿದೆ. ರಕ್ತ ಸುರಿಯುತ್ತಲೇ ಕರಡಿಯೊಂದಿಗೆ ಹೋರಾಡಿ ತಪ್ಪಿಸಿಕೊಂಡು ಬಂದ ರೈತ, ತೋಟದಿಂದ ಓಡಿ ಗ್ರಾಮಕ್ಕೆ ಬಂದು ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಗಾಯಗೊಂಡ ರೈತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆ ತರೀಕೆರೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
















