ನಿರಂತರ ಕಾಡು ಪ್ರಾಣಿಗಳ ದಾಳಿಗೆ ಮಲೆನಾಡಿನ ರೈತರು ಕಂಗಾಲು- ಸದನದಲ್ಲಿ ಧ್ವನಿ ಎತ್ತುತ್ತಾರ ಮಲೆನಾಡಿನ ಶಾಸಕರು

ನಿರಂತರ ಕಾಡು ಪ್ರಾಣಿಗಳ ದಾಳಿಗೆ ಮಲೆನಾಡಿನ ರೈತರು ಕಂಗಾಲು- ಸದನದಲ್ಲಿ ಧ್ವನಿ ಎತ್ತುತ್ತಾರ ಮಲೆನಾಡಿನ ಶಾಸಕರು


ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಬಗ್ಗೆ ಮೊದಲ ಆದೇಶ


ಪ್ರತಿನಿತ್ಯ ಕಾಡಾನೆಗಳ ಹಿಂಡು ರೈತರ ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆಯನ್ನು ನಾಶ ಮಾಡುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕಾಡುಕೋಣ, ಚಿರತೆ ದಾಳಿಯಿಂದ ರೈತರು, ಕೂಲಿ ಕಾರ್ಮಿಕರು ಜೀವ ಕೈಯಲ್ಲಿಟ್ಟುಕೊಂಡು ಕೆಲಸ ಮಾಡುವಂತಾಗಿದೆ.

ನಿರಂತರ ಕಾಡು ಪ್ರಾಣಿಗಳ ದಾಳಿಗೆ ಮಲೆನಾಡಿನ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಸಾವಿನ ಮನೆಗೆ ಪರಿಹಾರದ ಚೆಕ್ ತಲುಪಿಸಿದ್ದು ಬಿಟ್ಟರೆ ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದು ರೈತ ಮುಖಂಡರ ಆರೋಪ. ಕಾಡಾನೆ ದಾಳಿಯಿಂದ ಹಲವು ರೈತರು, ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ, ಚಿಕ್ಕಮಗಳೂರು, ಮೂಡಿಗೆರೆ, ಕಳಸ, ನರಸಿಂಹರಾಜಪುರ, ಕೊಪ್ಪ, ಬೇಲೂರು, ತರೀಕೆರೆ ಸೇರಿದಂತೆ ಮಲೆನಾಡಿನ ಹಲವು ಊರುಗಳಲ್ಲಿ ಈ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು ರೈತರು ಪ್ರತಿಭಟನೆಗಳನ್ನು ಸಹ ನಡೆಸಿದ್ದಾರೆ, ಆದರೆ ಈ ಬಗ್ಗೆ ಸರ್ಕಾರ ಶಾಶ್ವತ ಪರಿಹಾರದ ಬಗ್ಗೆ ಗಮನಹರಿಸುತ್ತಿಲ್ಲ.


ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 30,000 ಹುದ್ದೆಗಳಿಗೆ ಅರ್ಜಿ ಆಹ್ವಾನ; 18,000 ದಿಂದ 22,000 ಸಂಬಳ, 10th ವಿದ್ಯಾರ್ಹತೆ


ಸದನದಲ್ಲಿ ಧ್ವನಿ ಎತ್ತುತ್ತಾರ ಮಲೆನಾಡಿನ ಶಾಸಕರು:

ಮಲೆನಾಡಿನ ಜನಪ್ರತಿನಿಧಿಗಳು ವಿಧಾನಸೌಧ ಕಲಾಪದಲ್ಲಿ ಈ ಬಗ್ಗೆ ಧ್ವನಿ ಎತ್ತಿ ಸಮಸ್ಯೆಯ ಗಂಭೀರತೆಯನ್ನು ರಾಜ್ಯದ ಮುಂದಿಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಮಲೆನಾಡಿನ ರೈತರಿದ್ದಾರೆ, ಮಲೆನಾಡಿನ ಎಲ್ಲ ಶಾಸಕರುಗಳು ಪಕ್ಷಬೇಧ ಮರೆತು ಒಂದಾಗಿ ಸರ್ಕಾರಕ್ಕೆ ಛಾಟಿ ಬೀಸಬೇಕಿದೆ.


ಇದನ್ನೂ ಓದಿ: ಶಾಲಾ ಆಡ್ಮೀಶನ್‌ʼಗೆ ಈ ನಿಯಮ ಕಡ್ಡಾಯ; ಈ ಆದೇಶ ಪಾಲನೆ ಮಾಡುವಂತೆ ಶಿಕ್ಷಣ ಸಚಿವ ಸೂಚನೆ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.