ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಜಾಗದ ಮಣ್ಣು ಖಾಸಗಿ ಲೇಔಟ್ ಗಳಿಗೆ ಸಾಗಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ಇದನ್ನೂ ಓದಿ; ರೇಷನ್ ಕಾರ್ಡ್ʼನಲ್ಲಿ ಹೆಸರು ತಿದ್ದುಪಡಿಗೆ ಅವಕಾಶ; ಹೊಸ ಸದಸ್ಯರ ಸೇರ್ಪಡೆಯನ್ನು ಜಸ್ಟ್ ಹೀಗೆ ಮಾಡಿ; ಈ ದಾಖಲೆ ಕಡ್ಡಾಯ

ದೂರಿನಲ್ಲಿ ಏನಿದೆ?;
ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಕೆ.ಎಸ್.ಆರ್.ಟಿ.ಸಿ ಡಿಪೋ ನಿರ್ಮಾಣ ಮಾಡಲು ಯೋಗ್ಯವಲ್ಲದ ಜಾಗವನ್ನು ಮಂಜೂರು ಮಾಡಿದ್ದು, ಇದು ಶೃಂಗೇರಿಯ ಹಸಿರು ವಲಯ ವ್ಯಾಪ್ತಿಯಲ್ಲಿರುವ ದಟ್ಟ ಅರಣ್ಯ ಬೆಟ್ಟಗುಡ್ಡಗಳಿಂದ ಕೂಡಿರುವ ಪ್ರದೇಶವಾಗಿದೆ.


ಈ ಜಾಗದಿಂದ ಖಾಸಗಿ ಬಡಾವಣೆಗಳಿಗೆ ಸರ್ಕಾರಿ ನಿಯಮಗಳ ಹೆಸರಿನಲ್ಲಿ ಲಂಚದಾಸೆಗೆ ಮಣ್ಣು ಗಣಿಗಾರಿಕೆ ಮಾಡಲಾಗುತ್ತಿದೆ. ಇದಕ್ಕೆ ಅಕ್ಷೇಪಣೆ ಇದ್ದರೂ ಸಹ ಅಕ್ರಮವಾಗಿ ಹಸಿರುವಲಯದಲ್ಲಿ ಮಣ್ಣು ಗಣಿಗಾರಿಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ; ರಾಜ್ಯದ SC-ST ಪಂಗಡದವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ವಯನಾಡ್ʼನಂತೆ ಭೂಸಿತಕ್ಕೆ ಕಾರಣವಾಗಬಹುದು ಶೃಂಗೇರಿ!:
ಹಚ್ಚ ಹಸಿರಿನ ಹೊದಿಕೆ ಹೊದ್ದಿದ್ದ ಗುಡ್ಡಗಳನ್ನೆಲ್ಲ ಅವೈಜ್ಞಾನಿಕ ಕಾಮಗಾರಿ, ಅನಗತ್ಯ ಮಾನವ ಹಸ್ತಕ್ಷೇಪ, ಲಂಗು-ಲಗಾಮಿಲ್ಲದೆ ಹೋಂಸ್ಟೇ ಗಳು ಹಾಗೂ ಇನ್ನೀತರ ಕಾರಣಗಳು ಕೊಡಗು, ಮಡಿಕೇರಿ ಹಾಗೂ ವಯನಾಡ್ ನಲ್ಲಿ ಭಾರೀ ಭೂಕುಸಿತಕ್ಕೆ ಕಾರಣವಾಗಿದ್ದು, ಇದು ಶೃಂಗೇರಿಯಲ್ಲೂ ಸಂಭವಿಸುವ ಅನುಮಾನವಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ; ಮಹಿಳೆಯರಿಗೆ ಬಂಪರ್ ಸುದ್ದಿ; ಸರ್ಕಾರದ ಈ ಯೋಜನೆಯಡಿ ಸಿಗಲಿದೆ ಸೋಲಾರ್ ಸ್ಟವ್!; ಈ ದಾಖಲೆ ಕಡ್ಡಾಯ
ಅಕ್ರಮ ಗಣಿಗಾರಿಕೆಗೆ ಬೆಂಬಲಿಸುತ್ತಿರುವ ಹಿರಿಯ ವಿಜ್ಞಾನಿ ವಿಂದ್ಯಾ !:
ಅಲ್ಲದೆ ಶೃಂಗೇರಿಯ ತಂಗಾನದಿಯಿಂದ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಇದರ ಬಗ್ಗೆ ಚಿಕ್ಕಮಗಳೂರು ಹಿರಿಯ ಭೂವಿಜ್ಞಾನಿ ವಿಂದ್ಯಾ ಅವರಿಗೆ ಮೌಖಿಕವಾಗಿ ಹಲವಾರು ದೂರುಗಳನ್ನು ನೀಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ಲಂಚದಾಸೆಗೆ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯದೆ ಭ್ರಷ್ಟಾಚಾರ ಮಾಡಿ ಕರ್ತವ್ಯಲೋಪವೆಸಗುತ್ತಿದ್ದಾರೆ. ಇದರಿಂದ ತುಂಗಾನದಿ ನಾಶವಾಗುತ್ತಿದ್ದು, ಶೃಂಗೇರಿಯ ಪರಿಸರ ಜಲ ಮತ್ತು ವಾಯು ಮಾಲಿನ್ಯವಾಗುತ್ತಿದೆ. ಜೊತೆಗೆ ಶೃಂಗೇರಿಯ ನಾಗರಿಕರಿಗೂ ತೊಂದರೆಯಾಗುತ್ತಿದೆ ಎಂದು ಶಬರೀಶ್ ಆರ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಇದನ್ನೂ ಓದಿ; KSRTC ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಭರ್ಜರಿ ಸಿಹಿಸುದ್ದಿ; ಏನದು? ಮಿಸ್ ಮಾಡ್ದೆ ಈ ಸುದ್ದಿ ಓದಿ













