ಕಳೆದ ಲೋಕಸಭಾ ಚುನಾವಣೆಯಲ್ಲಿ ನಡೆದ ಅಕ್ರಮ, ಅವ್ಯವಹಾರಗಳ ಕುರಿತು ಜೂನ್ 19ರಂದು ನ್ಯೂಸ್ ಮಲ್ನಾಡ್ ತನಿಖಾ ವರದಿ ಮಾಡಿತ್ತು.. ಇದೀಗ ಈ ಅವ್ಯವಹಾರ ಕುರಿತು ಪತ್ರಕರ್ತರಾದ ಸತೀಶ್ ಜೈನ್ ಚಿಕ್ಕಮಗಳೂರು ಜಿಲ್ಲಾಧಿಕಾರಿ, ಕೊಪ್ಪದ ಅಂದಿನ ತಹಶೀಲ್ದಾರ್ ಸೇರಿದಂತೆ ಕೊಪ್ಪ ತಾಲ್ಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕನ ಮೇಲೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬಸ್ ಗಳ ಸುರಕ್ಷತೆಗೆ ಮಹತ್ವದ ಕ್ರಮ; ಈ ನಿಯಮಗಳ ಪಾಲನೆ ಕಡ್ಡಾಯ!

ಏನಿದು ಲೋಕಸಭಾ ಚುನಾವಣೆ ಹಗರಣ:
ಕಳೆದ ಲೋಕಸಭಾ ಚುನಾವಣೆಗೆ ಬಿಡುಗಡೆಯಾದ ಅನುದಾನದಲ್ಲಿ ಸುಮಾರು 14 ಲಕ್ಷದಷ್ಟು ಹಣ ಅವ್ಯವಹಾರ ನಡೆದಿರುವ ಕುರಿತು ನ್ಯೂಸ್ ಮಲ್ನಾಡ್ ದಾಖಲೆ ಸಮೇತ ಬಯಲಿಗೆಳೆದಿತ್ತು.. ಕೊಪ್ಪ ತಾಲ್ಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಧರ್ಮರಾಜ್ ಹಾಗೂ ಹೊರಗುತ್ತಿಗೆ ನೌಕರ ಪ್ರವೀಣ್ ನಕಲಿ ಬಿಲ್ ಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿದ್ದರು.. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪತ್ರಕರ್ತರಾದ ಸತೀಶ್ ಜೈನ್ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್, ಕೊಪ್ಪದ ಅಂದಿನ ತಹಶೀಲ್ದಾರ್ ಹಾಗೂ ಕೊಪ್ಪ ತಾಲ್ಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಧರ್ಮರಾಜ್ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದ ಪೊಲೀಸ್ ಸಿಬ್ಬಂದಿಗಳ ಸ್ಲೋಚ್ ಕ್ಯಾಪ್ ಗೆ ಗುಡ್ ಬೈ; ಪೊಲೀಸ್ ಪೇದೆಗಳಿಗೆ ಹೊಸ ಟೋಪಿ












