ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಬಾಳೂರು ಹೋಬಳಿ, ಸುಂಕಶಾಲೆ ಪಂಚಾಯತಿಗೆ ಒಳಪಟ್ಟ ಮಾಳಿಂಗನಾಡು ಗ್ರಾಮದ ನೆಲ್ಲಿಕಟ್ಟೆ ಅಂಗನವಾಡಿ ಹಿಂಭಾಗದ ಧರೆಯ ಮಣ್ಣು ಕುಸಿದಿದೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್!; ಕೃಷಿ ಉಪಕರಣ ಖರೀದಿಗೆ 50% ಸಬ್ಸಿಡಿ

ಘಟನೆಯ ತೀವ್ರತೆಯನ್ನು ಅರಿತ ಬಾಳೆಹಡ್ಲು ಎಸ್ಟೇಟ್ನ ಮ್ಯಾನೇಜರ್ ಜೈಪಾಲ್ ಅವರು ಸ್ಥಳೀಯರನ್ನು ಕರೆಸಿ ತಕ್ಷಣವೇ ಮಣ್ಣು ತೆರವುಗೊಳಿಸುವ ಕೆಲಸ ಆರಂಭಿಸಿದರು. ಯಾವುದೇ ಸರ್ಕಾರಿ ಅಥವಾ ಹೊರಗಿನ ಸಹಾಯಧನವಿಲ್ಲದೇ ಸ್ವಂತ ಮಟ್ಟದಲ್ಲಿ ಈ ಕಾರ್ಯವನ್ನು ನಡೆಸಿದ್ದಾರೆ.
“ಮಕ್ಕಳ ಹಿತಕ್ಕಾಗಿ ತಕ್ಷಣ ಕ್ರಮ ತೆಗೆದುಕೊಂಡು ಮಣ್ಣು ಎತ್ತಲಾಗಿದೆ. ಯಾವುದೇ ಅನಾಹುತ ಸಂಭವಿಸದಂತೆ ನೋಡಿಕೊಳ್ಳಲಾಗಿದೆ,” ಎಂದು ಜೈಪಾಲ್ ಹೇಳಿದ್ದಾರೆ.
ಇದನ್ನೂ ಓದಿ: ರೈಲ್ವೆ NTPC ಗ್ರಾಜುವೇಟ್ ನೇಮಕಾತಿ; 30,307 ಹುದ್ದೆಗೆ ಅರ್ಜಿ ಆಹ್ವಾನ
ಸ್ಥಳೀಯರು ಜೈಪಾಲ್ ಅವರ ಸಾಮಾಜಿಕ ಹೊಣೆಗಾರಿಕೆಯನ್ನು ಮೆಚ್ಚಿ ಧನ್ಯವಾದ ವ್ಯಕ್ತಪಡಿಸಿದ್ದಾರೆ. ನಿರಂತರ ಮಳೆಯಿಂದಾಗಿ ಇನ್ನಷ್ಟು ಮಣ್ಣು ಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಂಬಂಧಿತ ಅಧಿಕಾರಿಗಳು ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)












