ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಖಾಸಗಿ ಲೇಔಟ್ ಜಾಗಕ್ಕೆ ಮಣ್ಣು ಸಾಗಿಸುತ್ತಿದ್ದ ವೇಳೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ 3 ಲಾರಿ ಹಾಗೂ 1 ಟಾಟಾ ಹಿಟಾಚಿಯನ್ನ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕೇಂದ್ರದಿಂದ ಕಡಿಮೆ ದರಕ್ಕೆ ಅಕ್ಕಿ!; FSI ಗೆ ಸೂಚಿಸಿದ ಆಹಾರ ಇಲಾಖೆ

ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಕುಮಾರಿ ದೇವಸ್ಥಾನ ಸಮೀಪ ಸರ್ವೆ ನಂಬರ್ 100, ಸರ್ವೆ ನಂಬರ್ 118 ರಲ್ಲಿ ಖಾಸಗಿ ಲೇಔಟ್ ಜಾಗಕ್ಕೆ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ವೇಳೆ ಶೃಂಗೇರಿ RFO ಮಧುಕರ್ ನೇತೃತ್ವದಲ್ಲಿ DRF ಕಸಬಾ ಶಾಖೆ ಶಂಕರ್ ಪತ್ತಾರ್, ಕೆ ಕೆ ನಂದ, ಸುಬ್ರಹ್ಮಣ್ಯ ಹೆಚ್ ಎಂ ರವರ ತಂಡ ದಾಳಿ ನಡೆಸಿ 3 ಲಾರಿ ಹಾಗೂ 1 ಟಾಟಾ ಹಿಟಾಚಿಯನ್ನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪಂಪ್ಸೆಟ್ ಹೊಂದಿರುವವರಿಗೆ ಹೊಸ ಆದೇಶ ಹೊರಡಿಸಿದ ಇಂಧನ ಇಲಾಖೆ; ಏನದು ಹೊಸ ಆದೇಶ, ಇಲ್ಲಿದೆ ನೋಡಿ













