ಶೃಂಗೇರಿ: ಸ್ಪರ್ಧಾತ್ಮಕ ಪರೀಕ್ಷೆಯಿಂದ ವ್ಯಕ್ತಿತ್ವ ವಿಕಸನ- ಗುಣನಾಥ ಸ್ವಾಮೀಜಿ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳು, ವಿಜ್ಞಾನ, ಸಾಂಸ್ಕೃತಿಕ, ಇತಿಹಾಸಗಳನ್ನು ಪ್ರತಿಯೊಬ್ಬರು ಅಧ್ಯಯನ ಮಾಡುವ ಅವಶ್ಯಕತೆ ಇದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಹೇಳಿದರು.


ಇದನ್ನೂ ಓದಿ: 400 ರೂಪಾಯಿಗೆ LPG, 25,000 ಉದ್ಯೋಗ ಭರವಸೆ ನೀಡಿದ ಬಿಜೆಪಿ; ಈ ಘೋಷಣೆ ಯಾರಿಗೆ ಗೊತ್ತಾ?, ಇಲ್ಲಿದೆ ಡಿಟೈಲ್ಸ್


ಶೃಂಗೇರಿಯ ಆದಿಚುಂಚನಗಿರಿಯ ಬಿಜಿಎಸ್ ಚರಕ ವಿಜ್ಞಾನ ವಿದ್ಯಾಲಯದಲ್ಲಿ ಸೋಮವಾರ ಅಯೋಜಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ದ್ವೀತಿಯ ಪಿಯುಸಿ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೆಈಈ, ಸಿಈಟಿ, ಎಈಈಟಿ ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಬಹು ಪ್ರತಿಭೆಗಳ ವಿಕಸನಕ್ಕೆ ದಾರಿ ಮಾಡಿಕೊಡಲಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಈ ತರಬೇತಿ ಪಡೆದು ಭವಿಷ್ಯ ಜೀವನದಲ್ಲಿ ಯಶಸ್ಸು ಹೊಂದಬೇಕು ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳು ಉದ್ಯೋಗ, ಸಂದರ್ಶನ ಮತ್ತು ಜೀವನ ನಿರ್ವಹಣೆಯಲ್ಲಿ ಸಹಕಾರಿ ಆಗಲಿದ್ದು, ಇಲ್ಲಿ ತರಬೇತಿ ಪಡೆದವರು ಅನ್ಯ ಕಾಲೇಜಿನ ವಿದ್ಯಾರ್ಥಿಗಳ ಹೋಲಿಕೆಯಲ್ಲಿ ವಿಭಿನ್ನವಾಗಿ ನಿಂತು ಸಮಾಜಕ್ಕೆ ಮಾದರಿ ಆಗಬೇಕು. ಪದವಿ ವ್ಯಾಸಂಗದ ವೇಳೆಯಲ್ಲೇ ಧೃಢ ನಿರ್ಧಾರ ಮಾಡಿ ಅಧ್ಯಯನಕ್ಕೆ ಮುನ್ನಡಿ ಇಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಜಯಶಾಲಿಗಳಾಗುವುದು ಒಂದು ಸವಾಲಾಗಿದ್ದು, ಅಭ್ಯರ್ಥಿಗಳು ತಮ್ಮ ಪದವಿ ವ್ಯಾಸಂಗದ ವೇಳೆಯಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ತಯಾರಿ ಮಾಡಿಕೊಳ್ಳಬೇಕು. ಕಾಲೇಜು ಹಾಗೂ ಅಂತರ್ ಕಾಲೇಜು ಮಟ್ಟದಲ್ಲಿ ಹಲವು ಸ್ಪರ್ಧೆ, ಕಾರ್ಯಾಗಾರ, ವಿಚಾರ ಸಂಕಿರಣ, ಸಮಯ ನಿರ್ವಹಣೆ ಮೊದಲಾದ ಪರೀಕ್ಷೆಗಳು ಎದುರಾಗುತ್ತವೆ. ಆಗ ಇಲ್ಲಿ ನೀಡಿದ ತರಬೇತಿಯು ನಿಮ್ಮ ನೆರವಿಗೆ ಬರುವುದು ಎಂದರು.


ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; 17ನೇ ಕಂತಿನ ಹಣ ಬಿಡುಗಡೆ ಯಾವಾಗ?; ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಹೀಗೆ ಚೆಕ್ ಮಾಡಿ


ಬಿಜಿಎಸ್ ಚರಕ ವಿಜ್ಞಾನ ವಿದ್ಯಾಲಯದ ವಿಜ್ಞಾನ ವಿಭಾಗದ ಮುಖ್ಯಸ್ಥ ಸಂಜಯ್ ಮಿರ್ಜಿ ಮಾತನಾಡಿ, ಜೀವನದಲ್ಲಿ ಗುರಿ ಮುಟ್ಟಬಲ್ಲೆ ಎಂಬ ಆತ್ಮವಿಶ್ವಾಸ ಇರಬೇಕು. ಆಗ ವಿದ್ಯಾರ್ಥಿಯ ಜೊತೆಗೆ ಕಾಲೇಜಿಗೂ ಕೀರ್ತಿ ಸಿಗುತ್ತದೆ ಎಂದರು.

ಬಿಜಿಎಸ್ ಕಾಲೇಜಿನ ಪ್ರಾಂಶುಪಾಲರಾದ ಕೆ.ಸಿ ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಕೊತೆ ಕ್ರಿಯಾಶೀಲರಾಗಬೇಕು. ಸಮಾಜದ ಒಳಿತಿಗಾಗಿ ಸೇವಾಭಾವ ಅಳವಡಿಸಬೇಕು. ಒಂದೇ ಸಮವಸ್ತ್ರ ಧರಿಸಿ ಒಗ್ಗಟ್ಟಾಗಿ ಕಲಿತ ವಿದ್ಯಾರ್ಥಿಗಳು ಸೌಹಾರ್ದಯುತ ಬಾಳ್ವೆಯನ್ನು ಕಲಿಯಲು ಇಲ್ಲಿ ಮಾತ್ರ ಸಾಧ್ಯವಾಗುತ್ತದೆ ಎಂದರು.


ಇದನ್ನೂ ಓದಿ: ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರಿಗೆ ಬಂಪರ್ ಜಾಬ್ ಆಫರ್; ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯ ವಿಜ್ಞಾನ ಸಂಸ್ಥೆಯಲ್ಲಿ ಉದ್ಯೋಗ


ಈ ಕಾರ್ಯಕ್ರಮದಲ್ಲಿ ಅಂತರ್ ರಾಜ್ಯಗಳಿಂದ ನಿಯೋಜನೆಗೊಂಡ ಪ್ರೋಫೆಸರ್ ಗಳಾದ ಲಕ್ಷ್ಮಣ್, ಚೇತನ್ ಗೌಡ, ಶ್ರೇಷ್ಠಾದಾಸ್, ಸೌಮ್ಯದೀಪಾ ಮತ್ತು ಸ್ಥಳೀಯ ಕಾಲೇಜಿನ ಪ್ರಾಧ್ಯಪಕರಾದ ಆಶಾ, ಕಾವ್ಯ, ರಂಜಿತಾ, ನಂದಿನಿ, ರೇಷ್ಮ, ಶುಭಾ, ಪ್ರಾರ್ಥನಾ, ಸಂಕೇತ್, ಶಿವಕುಮಾರ್, ಧನ್ಯಕುಮಾರ್, ಆದಿತ್ಯ, ಆತ್ಮೀಯಾ ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.