ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಮಾನವರು ಮೊದಲು ವಿಶ್ವಮಾನವವಾಗಬೇಕು ಎಂದು ಆದಿಚುಂಚನಗಿರಿ ಶೃಂಗೇರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳದ ಶ್ರೀ ಗುಣನಾಥ ಸ್ವಾಮೀಜಿ ಕರೆ ನೀಡಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಔಟ್; ಪಕ್ಕಾ ಸುದ್ದಿಯನ್ನು ನಿನ್ನೆಯೇ ಬ್ರೇಕ್ ಮಾಡಿದ್ದ ನ್ಯೂಸ್ ಮಲ್ನಾಡ್!

ಜಾವಳಿ ಬಿ.ಜಿ.ಎಸ್ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಮನುಷ್ಯನಾಗಿ ಹುಟ್ಟಿದ ಮೇಲೆ ನಾವು ವಿಶ್ವಮಾನವನಾಗಿ ಬದುಕಬೇಕೆ ಹೊರತು ಸಾಮಾನ್ಯನಾಗಿ ಅಲ್ಲ. ಇಂದಿನ ಮಕ್ಕಳೇ ಮುಂದಿನ ಭವ್ಯ ಭಾರತ ಕಟ್ಟುವ ಯುವ ಮನಸ್ಸುಗಳು ಒಂದಾಗಿ ಭಾರತ ದೇಶವನ್ನು ಪ್ರಪಂಚದ ಎಲ್ಲಾ ದೇಶಗಳಿಗಿಂತ ಮುಂದುವರಿದ ದೇಶವಾಗಿ ಬದಲಾಗಲು ವಿದ್ಯಾರ್ಥಿಗಳ ಮಹತ್ವವಾದ ಪಾತ್ರವಹಿಸುತ್ತಾರೆ ಎಂದರು.

ಇದನ್ನೂ ಓದಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಾವಕಾಶ; ಆಕರ್ಷಕ ಸಂಬಳ
ಜವಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರದೀಪ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬಿಜಿಎಸ್ ಶಿಕ್ಷಣ ಸಂಸ್ಥೆ ಉತ್ತಮ ಶಿಕ್ಷಣವನ್ನು ಒದಗಿಸುತ್ತಿದೆ. ಎಲ್ಲಾ ಹಳ್ಳಿಗಳಲ್ಲಿಯೂ ಇಂತಹ ಸಂಸ್ಥೆಗಳು ಬೆಳೆದರೆ ಕರ್ನಾಟಕವು ಶಿಕ್ಷಣದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂದರು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದೇ ಇದ್ರೆ ಈ ಕೆಲಸ ಮಾಡಿ
ಶಿಕ್ಷಣ ಇಲಾಖೆಯ ಹೇಮಂತ್ ಚಂದ್ರ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಲ್ನುಡಿಯಂತೆ ಮಕ್ಕಳು ಶಾಲೆಯಲ್ಲಿ ಅಧ್ಯಾಪಕರಿಗೆ ಮನೆಯಲ್ಲಿ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಈ ಆಧುನಿಕ ಯುಗದಲ್ಲಿ ಮಕ್ಕಳು ಮೊಬೈಲ್ ಟಿವಿ ಗಳಿಂದ ದೂರ ಇದ್ದರೆ ಒಳ್ಳೆಯದು ಇದರ ಬಗ್ಗೆ ಪೋಷಕರು ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: SSLC ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಗಮನಕ್ಕೆ; 10th ಹಾಗೂ 2 PUC ಅಂತಿಮ ವೇಳಾಪಟ್ಟಿ ಪ್ರಕಟ
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಚೆನ್ನಕೇಶವ ಗೌಡ, ಪರೀಕ್ಷಿತ್ ಜಾವಳಿ, ಎಂ.ವಿ ಜಗದೀಶ್, ಶಶಿಧರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮನೋಹರ್, ವಾಟೇಖಾನ್ ಶ್ರೀನಾಥ್, ಕಾಫಿ ಬೆಳೆಗಾರರ ಗಿಲ್ಬರ್ಟ್ ಲೋಬೊ, ಕೇಶವೆಗೌಡ, ಮುಖ್ಯೋಪಾಧ್ಯಾಯರಾದ ಸುರೇಶ್, ದುಗ್ಗಪ್ಪ ಗೌಡ, ಶಿಕ್ಷಕರಾದ ಯೋಗೇಶ್, ಗೌರಿಬಾಯಿ, ಸತೀಶ್, ಸಾಗರ್, ಆಶಾಕಿರಣ್ ಪೋಷಕರು ಹಾಗೂ ಗ್ರಾಮಸ್ಥರು ಮತ್ತು ಮಕ್ಕಳು ಹಾಜರಿದ್ದರು. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ವಿದ್ಯಾರ್ಥಿಗಳ ಗಮನಕ್ಕೆ; ವಿಶೇಷ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ಜ.20 ಲಾಸ್ಟ್ ಡೇಟ್!















