ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ನದಿಯಲ್ಲಿ ಸ್ನಾನಕ್ಕೆಂದು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಯಡದಳ್ಳಿ ಗ್ರಾಮದಲ್ಲಿ ನಡೆದಿದೆ. ಮರಡಿನ ಬೈಲು ಗ್ರಾಮದ ಸುರೇಶ್ ಹಾಗೂ ಲಕ್ಷ್ಮಿ ಅವರ ಪುತ್ರ ನಿತಿನ್ (23) ನೀರಿನಲ್ಲಿ ಮುಳುಗಿ ಮೃತ ಪಟ್ಟ ಯುವಕ.
ಇದನ್ನೂ ಓದಿ: 400 ರೂಪಾಯಿಗೆ LPG, 25,000 ಉದ್ಯೋಗ ಭರವಸೆ ನೀಡಿದ ಬಿಜೆಪಿ; ಈ ಘೋಷಣೆ ಯಾರಿಗೆ ಗೊತ್ತಾ?, ಇಲ್ಲಿದೆ ಡಿಟೈಲ್ಸ್

ನಿನ್ನೆ (ಸೋಮವಾರ) ನಿತಿನ್ ಸೇರಿದಂತೆ 6 ಜನ ಯುವಕರ ತಂಡ ಯಡದಳ್ಳಿ ಗ್ರಾಮದ ನಳಿನಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದಾಗ ಆಕಸ್ಮಿಕವಾಗಿ ನದಿಯ ನೀರಿನಲ್ಲಿ ನಿತಿನ್ ಮುಳುಗಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; 17ನೇ ಕಂತಿನ ಹಣ ಬಿಡುಗಡೆ ಯಾವಾಗ?; ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಹೀಗೆ ಚೆಕ್ ಮಾಡಿ
ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೃಂಗೇರಿ: ಕ್ಯಾನ್ಸರ್ ರೋಗಿಗಳಿಗಾಗಿ ಕೇಶ ದಾನ ಮಾಡಿದ ಬಾಲಕಿ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಪುಟ್ಟ ಬಾಲಕಿಯೊಬ್ಬಳು ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಉದ್ದದ ಕೇಶವನ್ನು ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳಿಗೆ ಬಿಜೆಪಿ ಠಕ್ಕರ್!; ಮೋದಿ ಕಿ ಗ್ಯಾರಂಟಿ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ರಿಲೀಸ್
4 ನೇ ತರಗತಿಯಲ್ಲಿ ಓದುತ್ತಿರುವ ಈ ಪುಟ್ಟ ಬಾಲಕಿ ಹೆಸರು ಚಿತ್ರಿಕಾ. ಪ್ರವೀಣ್ ಎಸ್ ಸಂಕ್ಲಾಪುರ ಅವರ ಮಗಳಾಗಿರುವ ಚಿತ್ರಿಕಾ, ವಿದ್ಯಾನಗರ ಶಾಲೆಯಲ್ಲಿ 4 ನೇ ತರಗತಿಯ ಓದುತ್ತಿರುವ ಈ ಬಾಲಕಿ, ಕ್ಯಾನ್ಸರ್ ರೋಗಿಗಳಿಗಾಗಿ ತಾನು ಬೆಳೆಸಿದ ಉದ್ದದ ಕೂದಲನ್ನು ದಾನ ಮಾಡಿದ್ದಾಳೆ.
ಕ್ಯಾನ್ಸರ್ ನಿಂದ ಕೂದಲು ಕಳೆದುಕೊಂಡು ತಲೆಗೂದಲಿಲ್ಲದೆ ಮಗುವೊಬ್ಬಳು ಯಾವ ರೀತಿಯ ಸಂಕಟ ಪಡುತ್ತಾಳೆ ಎನ್ನುವುದನ್ನು ಮನಗಂಡಿದ್ದ ಚಿತ್ರಿಕಾ, ಕ್ಯಾನ್ಸರ್ ನಿಂದಾಗಿ ತಲೆಗೂದಲು ಕಳೆದುಕೊಂಡವರಿಗೆ ದಾನವಾಗಿ ನೀಡಲು ತೀರ್ಮಾನಿಸಿ ಪುತ್ತೂರಿನ ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್ ಹಾಗೂ ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಮೂಲಕ ಕೂದಲನ್ನು ದಾನವಾಗಿ ನೀಡಿದ್ದಾಳೆ.
ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣಕ್ಕೆ ಬೇಕು ಪರ್ಮಿಷನ್; ಸರ್ಕಾರದ ಹೊಸ ರೂಲ್ಸ್
ಈ ಪುಟ್ಟ ಬಾಲಕಿಯ ಮಾನವೀಯತೆ ಎಲ್ಲರಿಗೂ ಮಾದರಿಯಾಗಿದೆ.












