ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಜಿಲ್ಲಾ ಪಂಚಾಯಿತಿ ಚಿಕ್ಕಮಗಳೂರು, ತಾಲೂಕು ಪಂಚಾಯಿತಿ ಶೃಂಗೇರಿ ಇವರ ಸಂಯುಕ್ತಾಶ್ರಯದಲ್ಲಿ ಕೆರೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮಾಸಿಕ ಸಂತೆಯನ್ನು ಸೋಮವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನೆಮ್ಮಾರಿನಲ್ಲಿ ಆಯೋಜಿಸಲಾಗಿತ್ತು.
ಇದನ್ನೂ ಓದಿ: ಕೇಂದ್ರದಿಂದ ಕಡಿಮೆ ದರಕ್ಕೆ ಅಕ್ಕಿ!; FSI ಗೆ ಸೂಚಿಸಿದ ಆಹಾರ ಇಲಾಖೆ

ಕೆರೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಅನಿತಾರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಜೀವಿನಿ ವತಿಯಿಂದ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸುವ ವಿವಿಧ ಉತ್ಪನ್ನಗಳಿಗೆ ಮಾರುಕಟ್ಟೆ ಅನುವು ಮಾಡಲು ಮಾಸಿಕ ಸಂತೆಯನ್ನು ಏರ್ಪಡಿಸಲಾಗುತ್ತದೆ. ಮಹಿಳೆಯರು ತಾವು ಉತ್ಪಾದಿಸಿದ ಆಹಾರ ಉತ್ಪನ್ನಗಳು, ಸ್ವಚ್ಚತಾ ಸಾಮಾಗ್ರಿಗಳು, ಮನೆಯಲ್ಲಿಯೇ ಉತ್ಪಾದಿಸಿದ ತರಕಾರಿಗಳು, ಸಿಹಿ ತಿನಿಸುಗಳು, ಇನ್ನಿತರ ಸಾಮಾಗ್ರಿಗಳು ಪ್ರದರ್ಶನಗೊಂಡವು.
ಇದನ್ನೂ ಓದಿ: ಪಂಪ್ಸೆಟ್ ಹೊಂದಿರುವವರಿಗೆ ಹೊಸ ಆದೇಶ ಹೊರಡಿಸಿದ ಇಂಧನ ಇಲಾಖೆ; ಏನದು ಹೊಸ ಆದೇಶ, ಇಲ್ಲಿದೆ ನೋಡಿ
ಮಾಸಿಕ ಸಂತೆಯಿಂದ ಮಹಿಳೆಯರು ಉತ್ಪಾದಿಸಿದ ವಸ್ತುಗಳು ಪ್ರಚಾರ ದೊರೆಯುವುದರ ಜೊತೆಗೆ ಮಾರುಕಟ್ಟೆಯೂ ಲಭಿಸುತ್ತದೆ. ಸ್ವ- ಸಹಾಯ ಸಂಘದ ಮಹಿಳೆಯರು ತಾವು ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ತಮ ವೇದಿಕೆ ಕಲ್ಪಿಸಿದಂತಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನೆಮ್ಮಾರಿನ ಅಧ್ಯಕ್ಚರಾದ ದಿನೇಶ್ ಹೆಗ್ಡೆ, ಕೆರೆ ಗ್ರಾಮ ಪಂಚಾಯಿತಿಯ ಪಿಡಿಒ ಶ್ರೀನಿವಾಸ್, ಜಿಪಿಎಲ್.ಎಫ್ನ ಪದಾಧಿಕಾರಿಯವರಾದ ರತ್ನ, ನಾಗರತ್ನ, ಗಾಯತ್ರಿ ಹಾಗೂ ಇತರರು ಇದ್ದರು.












