ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಬಾಳೂರು ದರ್ಬಾರ್ ಪೇಟೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸಂಜೀವಿನಿ ಒಕ್ಕೂಟ ಮಟ್ಟದ ವಾರ್ಷಿಕ ಮಹಾ ಸಭೆ ಜರುಗಿತು.

ಬಾಳೂರು ಗ್ರಾ.ಪಂ ಅಧ್ಯಕ್ಷ ಬಿ. ಬಿ ಮಂಜುನಾಥ್ ಮಾತನಾಡಿ, ಪ್ರತಿ ಮಹಿಳೆಯರೂ ಸಂಜೀವಿನಿ ಒಕ್ಕೂಟದ ವ್ಯಾಪ್ತಿಗೆ ಬಂದು ಸ್ವಂತ ಉದ್ಯೋಗ ಮಾಡಿಕೊಂಡು ಮಹಿಳೆಯರು ಸ್ವಾವಲಂಬನೆಯ ಜೊತೆಗೆ ಉದ್ಯಮಶೀಲರಾಗಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಒಕ್ಕೂಟದ ಅಧ್ಯಕ್ಷೆ ಪ್ರಮೀಳ ಮಂಜಯ್ಯ ಮಾತನಾಡಿ, ಪ್ರಸ್ತುತ ಒಕ್ಕೂಟದಲ್ಲಿ 1,000 ಲಾಭಾಂಶದಲ್ಲಿ ಸಂಘವು ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರಿಗೆ ಹೈನುಗಾರಿಕೆ, ಕೃಷಿ, ಕೋಳಿ ಸಾಕಣೆ, ನರ್ಸರಿ, ಕೃಷೀಯೇತರ ಉದ್ಯಮ ನಡೆಸಲು ಸರ್ಕಾರ ಸಂಜೀವಿನಿ ಒಕ್ಕೂಟಕ್ಕೆ ಗ್ರಾ.ಪಂ ಮೂಲಕ ಅನುದಾನ ನೀಡುತ್ತಿದೆ. ಶೇ 1% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ. ಈಗಾಗಲೇ ಸರ್ಕಾರ ಬಾಳೂರಿನಲ್ಲಿ 16 ಸಂಘಕ್ಕೆ 24 ಲಕ್ಷ ಸಾಲ ನೀಡಿದೆ. ಒಕ್ಕೂಟದ 30 ಮಹಿಳಾ ಸದಸ್ಯರು ಪಿನಾಯಿಲ್ ತಯಾರಿಕೆಯ ತರಬೇತಿ ಪಡೆದು ಮನೆಯಲ್ಲಿಯೇ ಸ್ವ ಉದ್ಯೋಗ ನಡೆಸುತ್ತಿದ್ದಾರೆ. ಮಹಿಳೆಯರು ಸರ್ಕಾರದ ಇಂತಹ ಯೋಜನೆ ಬಳಸಿ ಉದ್ಯಮ ನಡೆಸಿ ಲಾಭ ಪಡೆದು ಸಮಾಜದಲ್ಲಿ ಮುಂದೆ ಬರಬೇಕು ಎಂದರು.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ 80,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ
ಜಿ.ಪಂ ಯುವ ವೃತ್ತಿಪರೆ ಶಿಲ್ಪಾ ಮಾತನಾಡಿ, ಪ್ರತಿ ಮಹಿಳೆಯರು ಕೂಡ ಸಂಜೀವಿನಿ ಒಕ್ಕೂಟದ ವ್ಯಾಪ್ತಿಗೆ ಬರುವಂತೆ ಹಾಗೂ ಸಂಜೀವಿನಿ ಯೋಜನೆ ಸಾಕಾರಗೊಳಿಸಲು ಪ್ರೋತ್ಸಾಹ ನೀಡಬೇಕು ಎಂದರು.
ಸಮಾರಂಭದಲ್ಲಿ ಬಾಳೂರು ಗ್ರಾ.ಪಂ ಉಪಾದ್ಯಕ್ಷೆ ಕೆ. ಆರ್ ಗೀತಾ, ಸದಸ್ಯರಾದ ಮನೋಜ್, ಬಿ. ಎಂ ಪ್ರಕಾಶ್, ಜಯಶ್ರೀ, ಬಾಳೂರು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಗ್ರಾ.ಪಂ ಸಿಬ್ಬಂದಿಗಳು ಇದ್ದರು. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: SSLC, PUC ಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್; ಏನದು? ಮಿಸ್ ಮಾಡ್ದೆ ಈ ಸುದ್ದಿ ಓದಿ












