ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಇತ್ತೀಚೆಗೆ ಮಂಡಗಾರು ಲತಾ ಸೇರಿದಂತೆ ಆರು ಮಂದಿ ನಕ್ಸಲರು ಶರಣಾಗಿದ್ದರು. ಇದರ ಬೆನ್ನಲ್ಲೆ ಕೋಟೆಹೊಂಡ ರವೀಂದ್ರ ಶೃಂಗೇರಿ ಹಾಗೂ ಕೊಪ್ಪ ಭಾಗದ ಕೆಲವು ಮನೆಗಳಿಗೆ ಭೇಟಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಹೌದು, ಕಿತ್ಲೆಮನೆಕುಡಿಗೆಯ ಮನೆಗೆ ಕೋಟೆಹೊಂಡ ರವೀಂದ್ರ ಭೇಟಿ ನೀಡಿ ದಿನಸಿ ಕೇಳಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ; SC-ST ಸಮುದಾಯದವರು ಮಿಸ್ ಮಾಡ್ಡೆ ಈ ಸುದ್ದಿ ಓದಿ

ನಾಲ್ಕು ದಿನದ ಒಳಗೆ ಕೋಟೆಹೊಂಡ ರವೀಂದ್ರ ಮುಖ್ಯವಾಹಿನಿಗೆ ಬರುವ ಸಾಧ್ಯತೆ!:
ಕರುನಾಡು ನಕ್ಸಲರಿಂದ ಮುಕ್ತವಾಗಲಿದೆಯಂತೆ ಅದಕ್ಕೆ ಪುಷ್ಟಿ ಎಂಬಂತೆ ನಕ್ಸಲ್ ನಾಯಕ ರವೀಂದ್ರ ಕೂಡ ತನ್ನ ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಲು ಸಿದ್ದರಾಗಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಶರಣಾಗತಿ ಸಮಿತಿಯ ಸಂಪರ್ಕಕ್ಕೆ ಸಿಕ್ಕಿರುವ ರವೀಂದ್ರ ನಾಲ್ಕು ದಿನದ ಒಳಗೆ ಮುಖ್ಯವಾಹಿನಿಗೆ ಬರುವ ಸಾಧ್ಯತೆ ಇದ್ದು, ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: 1000 VAO ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿ ಪ್ರಕಟ; ಚೆಕ್ ಮಾಡುವ ವಿಧಾನ ಇಲ್ಲಿದೆ…
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕಿಗ್ಗಾ ಸಮೀಪದ ಕೋಟೆಹೊಂಡ ರವೀಂದ್ರ 2007 ರಲ್ಲಿ ತೀರ್ಥಹಳ್ಳಿ ಎಳ್ಳಮಾಸ್ಯೆ ಜಾತ್ರೆಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಹೋಗಿದ್ದ ರವೀಂದ್ರ ಬಳಿಕ ಮನೆಗೆ ಹಿಂದಿರುಗಿರಲಿಲ್ಲ. ಕೆಲವು ದಿನಗಳ ಬಳಿಕ ಈತ ನಕ್ಸಲ್ ತಂಡ ಸೇರಿದ್ದು ಬಹಿರಂಗವಾಗಿತ್ತು. ಈತನ ಸುಳಿವು ನೀಡಿದವರಿಗೆ ಪೊಲೀಸ್ ಇಲಾಖೆ ಒಂದು ಲಕ್ಷ ರೂ. ಬಹುಮಾನವನ್ನು ಘೋಷಿಸಿತ್ತು. ಈತನ ಮೇಲೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ 15 ಪ್ರಕರಣ, ಕೇರಳ, ಹೆಬ್ರಿ, ದಕ್ಷಿಣ ಕನ್ನಡದಲ್ಲಿ ಸೇರಿ 30 ಪ್ರಕರಣಗಳಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕಾರ್ಮಿಕರಿಗೆ ಸರ್ಕಾರದಿಂದ ಸಿಗಲಿದೆ ಈ ಸಹಾಯಧನ; ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?












